ಜಿ ಪರಮೇಶ್ವರ online desk
ರಾಜ್ಯ

ದೇವರ ದಯೆಯಿಂದ ನನ್ನ‌ ಆರೋಗ್ಯ ಸ್ಥಿರವಾಗಿದೆ: ಆಸ್ಪತ್ರೆಯಿಂದಲೇ DCM ಪರಮೇಶ್ವರ ಪೋಸ್ಟ್

ಪರಮೇಶ್ವರ ಅವರಿಗೆ ಹೃದಯಾಘಾತವಾಗಿದೆ ಎಂಬ ಪ್ರಾಥಮಿಕ ಮಾಹಿತಿಗಳು ಹೊರಬಿದ್ದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಲವು ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಡಿಸಿಎಂ ಆರೋಗ್ಯ ವಿಚಾರಿಸಿದ್ದಾರೆ.

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಮಂಗಳವಾರ ಬೆಳಗ್ಗೆ ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪರಮೇಶ್ವರ ಅವರಿಗೆ ಹೃದಯಾಘಾತವಾಗಿದೆ ಎಂಬ ಪ್ರಾಥಮಿಕ ಮಾಹಿತಿಗಳು ಹೊರಬಿದ್ದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಲವು ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಡಿಸಿಎಂ ಆರೋಗ್ಯ ವಿಚಾರಿಸಿದ್ದಾರೆ.

ಇದರ ಬೆನ್ನಲ್ಲೇ ಆಸ್ಪತ್ರೆಯಿಂದಲೇ ತಮ್ಮ ಆರೋಗ್ಯದ ಕುರಿತು ‘ಎಕ್ಸ್’ (X) ಪೋಸ್ಟ್ ಮಾಡಿರುವ ಪರಮೇಶ್ವರ ಅವರು, ದೇವರ ದಯೆಯಿಂದ ನನ್ನ‌ ಆರೋಗ್ಯ ಸ್ಥಿರವಾಗಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ವೇಳೆ ಹೃದಯಬಡಿತ ತುಸು ಹೆಚ್ಚಾದ ಕಾರಣ ತಕ್ಷಣವೇ ಆಸ್ಪತ್ರೆಗೆ ತೆರಳಿ‌ ಅಗತ್ಯ ಚಿಕಿತ್ಸೆ ಪಡೆದಿದ್ದೇನೆ.

ನನ್ನ ಮೇಲಿನ ಕಾಳಜಿಯಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಬಹಳಷ್ಟು ಮಂದಿ‌ ಹಿತೈಷಿಗಳು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಹಲವರು ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ತಮ್ಮೆಲ್ಲರ ಪ್ರೀತಿ - ಕಾಳಜಿಗೆ ಧನ್ಯವಾದಗಳು.

ಯಾರೂ ಆತಂಕ ಪಡುವ ಅಗತ್ಯವಿಲ್ಲ. ದೇವರ ದಯೆಯಿಂದ ನನ್ನ‌ ಆರೋಗ್ಯವೀಗ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿರುವ ಇತರೆ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನನ್ನನ್ನು ಭೇಟಿ ಮಾಡಲು ದಯವಿಟ್ಟು ಆಸ್ಪತ್ರೆ ಬಳಿ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ಪರಮೇಶ್ವರ ಅವರು ಪೋಸ್ಟ್ ಮಾಡಿದ್ದಾರೆ.

ಇನ್ನು ಆಸ್ಪತ್ರೆಗೆ ಭೇಟಿ ನೀಡಿ ಪರಮೇಶ್ವರ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಅವರ ಬಿಪಿ ನಾರ್ಮಲ್ ಆಗಿದೆ ಹಾಗೂ ಅವರ ಹೃದಯಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

MLC election: BJP-JDS ಮೈತ್ರಿ ಅಭ್ಯರ್ಥಿ ರಂಗನಾಥ್ ಭರ್ಜರಿ ಗೆಲುವು; ಪುಟ್ಟಣ್ಣಗೆ ಹೀನಾಯ ಸೋಲು, ಕಾಂಗ್ರೆಸ್​ಗೆ ಮುಖಭಂಗ!

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ; ಒಟ್ಟು ಮತದಾರರು 4.55 ಕೋಟಿ, 99 ಲಕ್ಷಕ್ಕೂ ಹೆಚ್ಚು ಹೆಸರು ಡಿಲೀಟ್!

ಬೆಂಗಳೂರು: ಅಪಾರ್ಟ್ಮೆಂಟ್ ಮೇಲಿಂದ ಜಿಗಿದು DRDO ವಿಜ್ಞಾನಿ ಆತ್ಮಹತ್ಯೆ; ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂದ ಕುಟುಂಬ!

ವೈಭವ್-ಅಭಿಷೇಕ್ ಅಬ್ಬರದ ಬ್ಯಾಟಿಂಗ್: ಅವರದ್ದೆ ನೆಲದಲ್ಲಿ ಕಿವೀಸ್‌ಗೆ ಸೋಲುಣಿಸಿದ ಭಾರತ, T20 ಸರಣಿ ಕೈವಶ!

ಯುದ್ಧ, ಜೀವನ ವೆಚ್ಚ ಏರಿಕೆ ನಡುವೆ ಇಸ್ರೇಲ್ ಚುನಾವಣೆ: ಪ್ರಧಾನಿ ರೇಸ್‌ನಲ್ಲಿ ಮಾಜಿ ಸೇನಾ ಮುಖ್ಯಸ್ಥ; ನೆತನ್ಯಾಹುಗೆ ಬಿಗ್ ಶಾಕ್​!