ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ 
ರಾಜ್ಯ

ಸೌಜನ್ಯ ಪ್ರಕರಣ ಮರು ತನಿಖೆ ಚುರುಕು; ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್..!

2012ರಲ್ಲಿ ನಡೆದ ಸೌಜನ್ಯ ಪ್ರಕರಣದ ತನಿಖೆ ಆರಂಭದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಡೆದಿತ್ತು. ಬಳಿಕ ಅಪರಾಧ ತನಿಖಾ ದಳ (ಸಿಐಡಿ) ಮತ್ತು ಕೇಂದ್ರ ತನಿಖಾ ದಳದ (ಸಿಬಿಐ) ಹಂತಗಳಿಗೂ ತಲುಪಿತ್ತು.

ಮಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಚುರುಕುಗೊಳಿಸಿದ್ದು, ಈ ಹಿಂದೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ 15ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿದೆ.

2012ರಲ್ಲಿ ನಡೆದ ಸೌಜನ್ಯ ಪ್ರಕರಣದ ತನಿಖೆ ಆರಂಭದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಡೆದಿತ್ತು. ಬಳಿಕ ಅಪರಾಧ ತನಿಖಾ ದಳ (ಸಿಐಡಿ) ಮತ್ತು ಕೇಂದ್ರ ತನಿಖಾ ದಳದ (ಸಿಬಿಐ) ಹಂತಗಳಿಗೂ ತಲುಪಿತ್ತು. ಈ ವೇಳೆ ತನಿಖೆಯ ಜವಾಬ್ದಾರಿ ನಿರ್ವಹಿಸಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಎಸ್‌ಐಟಿ ಮುಂದಾಗಿದೆ.

ಮೂಲಗಳ ಪ್ರಕಾರ, ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 160ರ ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಹಿಂದಿನ ತನಿಖೆಯ ವೇಳೆ ಕೈಗೊಂಡ ಕ್ರಮಗಳು, ಸಂಗ್ರಹಿಸಲಾದ ಸಾಕ್ಷ್ಯಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ಪ್ರಮುಖ ಅಂಶಗಳ ಕುರಿತು ಮಾಹಿತಿ ಪಡೆಯುವುದು ವಿಚಾರಣೆಯ ಉದ್ದೇಶವಾಗಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಹಳೆಯ ದಾಖಲೆಗಳು, ಹೇಳಿಕೆಗಳು ಮತ್ತು ಲಭ್ಯವಿರುವ ಮಾಹಿತಿಗಳನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಹಿಂದಿನ ತನಿಖೆಯ ವಿವಿಧ ಹಂತಗಳಲ್ಲಿ ನಡೆದ ಬೆಳವಣಿಗೆಗಳನ್ನು ಮರುಪರಿಶೀಲಿಸುವ ಜೊತೆಗೆ, ಅಗತ್ಯವಿರುವ ಹೆಚ್ಚುವರಿ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸೌಜನ್ಯ ಪ್ರಕರಣದ ಮರು ತನಿಖೆಯ ಭಾಗವಾಗಿ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಈ ವಿಚಾರಣೆಯ ಮೂಲಕ ಯಾವ ಹೊಸ ಮಾಹಿತಿ ಲಭ್ಯವಾಗಲಿದೆ ಮತ್ತು ಅದು ಮುಂದಿನ ತನಿಖೆಗೆ ಹೇಗೆ ನೆರವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Veto ಇಲ್ಲದ ಖಾಯಂ ಸದಸ್ಯತ್ವ ‘2ನೇ ದರ್ಜೆ’ಗೆ ಸಮಾನ, ಅರೆಬರೆ ಸದಸ್ಯತ್ವ ನಮಗೆ ಬೇಡ: ವಿಶ್ವಸಂಸ್ಥೆಗೆ ಭಾರತ ಖಡಕ್ ಸಂದೇಶ

'ಸತ್ಯಂ ಶಿವಂ ಸುಂದರಂ': ಸುಪ್ರೀಂನಲ್ಲಿ SIR ವಿಚಾರಣೆಗೂ ಮುನ್ನ ಫೋಟೊ ಹಂಚಿಕೊಂಡ ರಾಹುಲ್ ಗಾಂಧಿ!

ಫಲ ನೀಡದ ಬೆಳಗಾವಿ ಸಭೆ: ಕಬ್ಬು ಬೆಳೆಗಾರರಿಗೆ ಮತ್ತೆ ನಿರಾಸೆ: ಸಮಸ್ಯೆ ಆಲಿಸಲು ಅ. 29 ರಂದು ಮತ್ತೊಮ್ಮೆ ಸಿಎಂ ಸಭೆ..!

Russia ದ್ವಿಮುಖ ನೀತಿ: ಕದನ ವಿರಾಮ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ Kyiv ಮೇಲೆ ಕ್ಷಿಪಣಿಗಳ ಮಳೆಗರೆದ ಪುಟಿನ್ ಸೇನೆ, Zelenskyy ತೀವ್ರ ಆಕ್ರೋಶ..!

ಹೋಟೆಲ್ ರೂಮ್ ಹೊರಗೆ ಕುಸಿದು ಬಿದ್ದು ನವವಿವಾಹಿತೆ ಸಾವು: CCTVಯಲ್ಲಿ ಭೀಕರ ದೃಶ್ಯ ಸೆರೆ! ಕೊಲೆ ಎಂದ ಕುಟುಂಬಸ್ಥರು