ಇಡಿ ಸಾಂದರ್ಭಿಕ ಚಿತ್ರ 
ರಾಜ್ಯ

Online Betting case: ಕಾಂಗ್ರೆಸ್ ಶಾಸಕ ವೀರೇಂದ್ರಗೆ ಸೇರಿದ 23 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ..!

2026ರ ಅಕ್ಟೋಬರ್ 23ರಂದು ಹೊರಡಿಸಲಾದ ತಾತ್ಕಾಲಿಕ ಆಸ್ತಿ ಜಪ್ತಿ ಆದೇಶ ಸಂಖ್ಯೆ 42/2026ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆ.ಸಿ. ವೀರೇಂದ್ರ, ಗುಲ್ಶನ್ ಖತ್ತರ್ ಮತ್ತು ನೇಹಾ ಟಂಡನ್ ಅವರ ಬಳಿ ಪತ್ತೆಯಾದ ಅಪರಾಧದ ಆದಾಯಕ್ಕೆ ಸಮಾನ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಬಿಗ್ ಶಾಕ್ ನೀಡಿದೆ.

ಶಾಸಕ ವೀರೇಂದ್ರ ಹಾಗೂ ಅವರ ಸಹಚರರಿಗೆ ಸೇರಿದ ಬರೋಬ್ಬರಿ 23.35 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002 ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಜಪ್ತಿಯಾದ ಆಸ್ತಿಯಲ್ಲಿ 13,76,96,706 ರೂ. ಮೌಲ್ಯದ ಚರಾಸ್ತಿ ಹಾಗೂ 9,58,50,000 ರೂ. ಮೌಲ್ಯದ ಸ್ಥಿರಾಸ್ತಿ ಸೇರಿದ್ದು, ಒಟ್ಟು 23,35,46,706 ರೂ. ಮೌಲ್ಯ ಹೊಂದಿವೆ ಎಂದು ಇಡಿ ತಿಳಿಸಿದೆ.

ಶಾಸಕ ವೀರೇಂದ್ರ ಜೊತೆಗೆ ಅವರ ಪ್ರಮುಖ ಸಹಚರರಾದ ಗುಲ್ಶನ್ ಖಟ್ಟರ್ ಮತ್ತು ನೇಹಾ ಟಂಡನ್ ಅವರ ಹೆಸರನ್ನೂ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.

2026ರ ಅಕ್ಟೋಬರ್ 23ರಂದು ಹೊರಡಿಸಲಾದ ತಾತ್ಕಾಲಿಕ ಆಸ್ತಿ ಜಪ್ತಿ ಆದೇಶ ಸಂಖ್ಯೆ 42/2026ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆ.ಸಿ. ವೀರೇಂದ್ರ, ಗುಲ್ಶನ್ ಖತ್ತರ್ ಮತ್ತು ನೇಹಾ ಟಂಡನ್ ಅವರ ಬಳಿ ಪತ್ತೆಯಾದ ಅಪರಾಧದ ಆದಾಯಕ್ಕೆ ಸಮಾನ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ವೇದಿಕೆಗಳ ಮೂಲಕ ವಂಚನೆ, ವ್ಯಕ್ತಿಯ ಸೋಗಿನಲ್ಲಿ ವಂಚನೆ, ಅಪರಾಧ ಸಂಚು ಹಾಗೂ ಸುಲಿಗೆ ನಡೆಸಿದ ಆರೋಪಗಳಿಗೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು.

ವೀರೇಂದ್ರ ಮತ್ತು ಅವರ ಸಹಚರರು ಕಿಂಗ್567 ಸೇರಿದಂತೆ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೇದಿಕೆಗಳನ್ನು ಪಾವತಿ ಗೇಟ್‌ವೇಗಳು, ನಕಲಿ ಕಂಪನಿಗಳು ಮತ್ತು ಇತರರ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳ ಜಾಲದ ಮೂಲಕ ನಿರ್ವಹಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಇಡಿ ಹೇಳಿದೆ.

ಈ ವೇದಿಕೆಗಳಲ್ಲಿ ಹಣ ಹೂಡುವಂತೆ ಆಟಗಾರರನ್ನು ಪ್ರೇರೇಪಿಸಿ, ಬೆಟ್ಟಿಂಗ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿ ಫಲಿತಾಂಶಗಳನ್ನು ನಿಯಂತ್ರಿಸುವ ಮೂಲಕ ವಂಚಿಸಲಾಗುತ್ತಿತ್ತು. ಅಲ್ಲದೆ, ಹಣ ಹಿಂಪಡೆಯಲು ಅವಕಾಶ ನೀಡದೆ ತಡೆಹಿಡಿಯಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಈ ಅಕ್ರಮ ಚಟುವಟಿಕೆಗಳಿಂದ ಗಳಿಸಿದ ಹಣವನ್ನು ಸಂಕೀರ್ಣ ಹಣಕಾಸು ವಹಿವಾಟುಗಳ ಮೂಲಕ ವಿವಿಧ ಹಂತಗಳಲ್ಲಿ ವರ್ಗಾಯಿಸಿ, ಆಸ್ತಿ ಖರೀದಿ ಹಾಗೂ ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಪ್ರಕರಣದಲ್ಲಿ 2,300 ಕೋಟಿ ರೂ.ಗೂ ಅಧಿಕ ಮೊತ್ತದ ಅಪರಾಧದ ಆದಾಯವನ್ನು ಪತ್ತೆಹಚ್ಚಲಾಗಿದೆ. ಈ ಹಣವನ್ನು ಹಲವು ಬ್ಯಾಂಕ್ ಖಾತೆಗಳು, ಹವಾಲಾ ಮಾರ್ಗಗಳು ಮತ್ತು ವಿದೇಶಿ ಸಂಸ್ಥೆಗಳ ಮೂಲಕ ವರ್ಗಾಯಿಸಿ, ಐಷಾರಾಮಿ ಆಸ್ತಿಗಳ ಖರೀದಿ, ಉದ್ಯಮಗಳಲ್ಲಿ ಹೂಡಿಕೆ, ವಿದೇಶಗಳಿಗೆ ಹಣ ರವಾನೆ ಹಾಗೂ ವೈಯಕ್ತಿಕ ವೆಚ್ಚಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದೆ.

ಗುಲ್ಶನ್ ಖತ್ತರ್ ಒಡೆತನದ ಫೋನ್‌ಪೈಸಾ ಪೇಮೆಂಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅಪರಾಧದ ಆದಾಯವನ್ನು ಸ್ವೀಕರಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕಿಂಗ್567ಗೆ ಸಂಬಂಧಿಸಿದ ಹಣಕಾಸು ವಹಿವಾಟುಗಳಲ್ಲಿ ಪ್ರಮುಖ ಪಾವತಿ ಗೇಟ್‌ವೇ ಮತ್ತು ಮಧ್ಯವರ್ತಿಯಾಗಿ ಸೇವೆ ಒದಗಿಸಿದ್ದಕ್ಕಾಗಿ ಈ ಸಂಸ್ಥೆ ದೊಡ್ಡ ಮೊತ್ತದ ಕಮಿಷನ್ ಪಡೆದಿದೆ ಎಂದು ಇಡಿ ತಿಳಿಸಿದೆ.

ಈ ಹಿಂದೆ, ಇದೇ ಪ್ರಕರಣದಲ್ಲಿ ಜನವರಿ 29ರಂದು ಸುಮಾರು 33 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು ಎಂದು ಸಂಸ್ಥೆ ಹೇಳಿದೆ.

ಕಿಂಗ್567ಗೆ ಸಂಬಂಧಿಸಿದಂತೆ ಗುರುತಿಸಲಾದ ಕೆಲವು ಬ್ಯಾಂಕ್ ಖಾತೆಗಳಿಂದ ಸಿಮ್‌ಟೆಕ್ ಐಟಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಖಾತೆಗಳಿಗೆ ಹಣ ಜಮೆಯಾಗಿರುವುದೂ ಪತ್ತೆಯಾಗಿದೆ. ಈ ಸಂಸ್ಥೆಯ ನಿರ್ದೇಶಕಿ ನೇಹಾ ಟಂಡನ್ ಅವರು ಅದರ ನಿರ್ವಹಣೆಯಲ್ಲಿ ಸಕ್ರಿಯ ಪಾತ್ರ ವಹಿಸಿರಲಿಲ್ಲ. ಅವರ ಪತಿ ಗುಲ್ಶನ್ ಖತ್ತರ್ ಸಂಸ್ಥೆಯ ನಿರ್ವಹಣೆ ನೋಡಿಕೊಳ್ಳುತ್ತಿದ್ದರು ಎಂದು ಇಡಿ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ರಾಜ್ಯಗಳ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಮತ್ತು ಜಪ್ತಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆ ವೇಳೆ 343 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cyclone Arnab: ಆಂಧ್ರಪ್ರದೇಶ ಕರಾವಳಿ ಸಮೀಪ ಬಹುತೇಕ ಸ್ಥಿರ: ಕರಾವಳಿ ದಾಟುವ ಪ್ರಕ್ರಿಯೆ ಇನ್ನೂ 2-3 ಗಂಟೆ ಮುಂದುವರಿಕೆ

ಆಂಧ್ರ, ಒಡಿಶಾಗೆ 'Cyclone Arnab' ಅಬ್ಬರದ ಭೀತಿ; 50 ರೈಲು, 21 ವಿಮಾನಗಳ ಹಾರಾಟ ಸ್ಥಗಿತ, 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ!

Cyclone Arnab: ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಮಳೆ ಎಚ್ಚರಿಕೆ, 600 ಕಿ.ಮೀ ರೈಲು ಹಳಿಗಳ ಮೇಲೆ ತೀವ್ರ ನಿಗಾ

INDvsNZ: 'ಇವರ ತಡೆಯಲು ಹೊಸ ತಂತ್ರವೇ ಬೇಕು': ಅಸಹಾಯಕತೆ ತೋಡಿಕೊಂಡ ಕಿವೀಸ್ ನಾಯಕ! ಹೇಳಿದ್ದೇನು?

ಸುನಾಮಿ ಅಲ್ಲ ಸೈಕ್ಲೋನ್: Arnab ಚಂಡಮಾರುತ ಅಬ್ಬರ, ಚೆನ್ನೈ ಕಡಲತೀರಕ್ಕೆ ಅಪ್ಪಳಿಸಿದ ರಕ್ಕಸ ಅಲೆಗಳು, ಕಟ್ಟೆಚ್ಚರ! Video