ಕರ್ನಾಟಕದಲ್ಲಿ ಬರೋಬ್ಬರಿ 99 ಲಕ್ಷ ಮತದಾರರ ಹೆಸರು ಡಿಲೀಟ್ Online Desk
ರಾಜ್ಯ

SIR: ಕರ್ನಾಟಕದಲ್ಲಿ 99 ಲಕ್ಷ ಮತದಾರರ ಹೆಸರು ಡಿಲೀಟ್; ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇಲ್ಲವೇ? ಹಾಗಾದ್ರೆ, ಹೀಗೆ ಸೇರಿಸಬಹುದು...

ಕರ್ನಾಟಕದಲ್ಲಿ ವಿಳಾಸ ಬದಲಾವಣೆ ಸೇರಿದಂತೆ ನಾನಾ ಕಾರಣಗಳಿಂದ ಸುಮಾರು ಒಂದು ಕೋಟಿಯಷ್ಟು ಮತದಾರರ ಹೆಸರುಗಳು ಪಟ್ಟಿಯಿಂದ ಮಾಯವಾಗಿವೆ! ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಹೋದರೆ ಮೊದಲು ಈ ಕೆಲಸ ಮಾಡಿ:

ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಕಲಿ ಎಂಟ್ರಿ, ವಿಳಾಸ ಬದಲಾವಣೆ ಹಾಗೂ ಮರಣ ಹೊಂದಿದ ಕಾರಣಗಳಿಂದಾಗಿ ರಾಜ್ಯಾದ್ಯಂತ ಬರೋಬ್ಬರಿ 99.32 ಲಕ್ಷ (ಸುಮಾರು 1 ಕೋಟಿ) ಮತದಾರರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಹಾಗಾಗಿ, ಒಂದು ವೇಳೆ ನಿಮ್ಮ ಹೆಸರು ಕೂಡ ಈ ಎಸ್‌ಐಆರ್ ಅಂತಿಮ ಪಟ್ಟಿಯಿಂದ ಮಿಸ್ ಆಗಿದ್ದರೆ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಹೆಸರನ್ನು ಮತ್ತೆ ಮತದಾರರ ಪಟ್ಟಿಗೆ ಸೇರಿಸಲು ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದೆ. ಆ ಕುರಿತ ವರದಿ ಇಲ್ಲಿದೆ:

ಮೊದಲು ನಿಮ್ಮ ಹೆಸರು ಡಿಲೀಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ

ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ನೇರವಾಗಿ ತೀರ್ಮಾನಿಸುವ ಮುನ್ನ ECI Electoral Search ಪೋರ್ಟಲ್‌ಗೆ ಭೇಟಿ ನೀಡಿ. ಅಲ್ಲಿ ನಿಮ್ಮ EPIC ಸಂಖ್ಯೆ (ವೋಟರ್ ಐಡಿ ನಂಬರ್) ಅಥವಾ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ ಸರ್ಚ್ ಮಾಡಿ. ಒಂದು ವೇಳೆ ಅಲ್ಲಿಯೂ ನಿಮ್ಮ ಹೆಸರು ಕಾಣಿಸದಿದ್ದರೆ, ನಿಮ್ಮ ಹೆಸರು ರದ್ದಾಗಿದೆ ಎಂದರ್ಥ.

ಹೊಸದಾಗಿ ಹೆಸರು ಸೇರಿಸಲು 'ಫಾರ್ಮ್ 6' ಸಲ್ಲಿಸಿ

ನಿಮ್ಮ ಹೆಸರು ಡಿಲೀಟ್ ಆಗಿರುವುದು ಕನ್ಫರ್ಮ್ ಆದ ನಂತರ, ಅದನ್ನು ಮರಳಿ ಸೇರಿಸಲು ಫಾರ್ಮ್ 6 (Form 6) ಅನ್ನು ಭರ್ತಿ ಮಾಡಬೇಕಾಗುತ್ತದೆ. ಇದನ್ನು ನೀವು ಎರಡು ವಿಧಾನಗಳಲ್ಲಿ ಮಾಡಬಹುದು:

ಆನ್‌ಲೈನ್ ವಿಧಾನ:

  • ECI Voters Portal ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ ಅಥವಾ ಮೊಬೈಲ್‌ನಲ್ಲಿ Voter Helpline App ಡೌನ್‌ಲೋಡ್ ಮಾಡಿಕೊಳ್ಳಿ.

  • ಅಲ್ಲಿ ಲಭ್ಯವಿರುವ Form 6 ಅನ್ನು ಆಯ್ಕೆ ಮಾಡಿ.

  • ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ, ವಯಸ್ಸಿನ ಪುರಾವೆ (SSLC ಮಾರ್ಕ್ಸ್‌ಕಾರ್ಡ್/ಆಧಾರ್) ಮತ್ತು ಪ್ರಸ್ತುತ ವಾಸವಿರುವ ವಿಳಾಸದ ಪುರಾವೆಯನ್ನು (ಆಧಾರ್/ರೇಷನ್ ಕಾರ್ಡ್/ಬ್ಯಾಂಕ್ ಪಾಸ್‌ಬುಕ್) ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.

ಆಫ್‌ಲೈನ್ ವಿಧಾನ:

  • ಇಂಟರ್ನೆಟ್ ಬಳಸಲು ಸಾಧ್ಯವಾಗದಿದ್ದರೆ, ನಿಮ್ಮ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿ ಅಥವಾ ಸ್ಥಳೀಯ ತಹಶೀಲ್ದಾರ್ (ತಾಲ್ಲೂಕು) ಕಚೇರಿಗೆ ಭೇಟಿ ನೀಡಿ.

  • ಅಲ್ಲಿ ಭೌತಿಕವಾಗಿ ಫಾರ್ಮ್ 6 ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳ ನಕಲು ಪ್ರತಿಯನ್ನು ಲಗತ್ತಿಸಿ ಅಧಿಕಾರಿಗಳಿಗೆ ಸಲ್ಲಿಸಿ.

ಮುಂದುವರೆದು, ನೀವು ಅರ್ಜಿ ಸಲ್ಲಿಸಿದ ನಂತರ ಚುನಾವಣಾ ಅಧಿಕಾರಿಯು ನಿಮ್ಮ ಮನೆಗೆ ಬಂದು ಅಥವಾ ಕಚೇರಿಗೆ ಕರೆದು ಅಗತ್ಯ ದಾಖಲೆಗಳನ್ನು ಮರು ಪರಿಶೀಲಿಸುತ್ತಾರೆ. ಪರಿಶೀಲನೆ ಪ್ರಕ್ರಿಯೆ ಯಶಸ್ವಿಯಾದ ನಂತರ ನಿಮ್ಮ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲಾಗುತ್ತದೆ ಮತ್ತು ಹೊಸ ವೋಟರ್ ಐಡಿಯನ್ನು ವಿತರಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್‌ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ

ಬೆಂಗಳೂರಿನ ಚಿತ್ರಣವನ್ನೇ ಬದಲಿಸಿದ SIR; ಮತದಾರರ ಸಂಖ್ಯೆ ಶೇ.43ರಷ್ಟು ಇಳಿಕೆ, 1.03 ಕೋಟಿಯಿಂದ 59.08 ಲಕ್ಷಕ್ಕೆ ಕುಸಿತ!

ಮತ್ತೆ ತಾಯಿಯಾಗ್ತಿದ್ದಾರಾ ಅನುಷ್ಕಾ ಶರ್ಮಾ? ಕೊಹ್ಲಿ ಜೊತೆ ಕಾಣಿಸಿಕೊಂಡ ಬಳಿಕ, ಪ್ರೆಗ್ನೆನ್ಸಿ ಬಗ್ಗೆ ಅಭಿಮಾನಿಗಳ ಊಹಾಪೋಹ! video

ಬಿಜೆಪಿಯಿಂದ 'ಮೋದಿ ಎಲ್ಲೂ ಹೋಗಲ್ಲ' ರ‍್ಯಾಪ್ ಸಾಂಗ್ ಬಿಡುಗಡೆ; ಖರ್ಗೆಗೆ ಖಡಕ್ ತಿರುಗೇಟು! Video

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ. 3ರಷ್ಟು ಹೆಚ್ಚಳ; ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿ