ಸಂಗ್ರಹ ಚಿತ್ರ 
ರಾಜ್ಯ

ತ್ಯಾಜ್ಯ ವಿಲೇವಾರಿ ಕೇಂದ್ರಗಳ ಟೆಂಡರ್‌ನಲ್ಲಿ ಬರೋಬ್ಬರಿ 133 ಕೋಟಿ ರೂ. ಅಕ್ರಮ ಆರೋಪ: ಲೋಕಾಯುಕ್ತ ತನಿಖೆಗೆ BJP ಆಗ್ರಹ..!

ಟೆಂಡರ್‌ಗಳ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ, ಸುಮಾರು 12.99 ಕೋಟಿ ರೂ. ಹೆಚ್ಚುವರಿ ಭದ್ರತಾ ಠೇವಣಿ ಸಂಗ್ರಹಿಸಿಲ್ಲ ಹಾಗೂ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಸ ವಿಲೇವಾರಿ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರುಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ತಕ್ಷಣವೇ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಕಸ ಮತ್ತು ತ್ಯಾಜ್ಯ ವರ್ಗಾವಣೆ ಕೇಂದ್ರಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಸುಮಾರು 133 ಕೋಟಿ ರೂ. ಮೌಲ್ಯದ ಟೆಂಡರ್‌ಗಳನ್ನು ನೀಡುವಲ್ಲಿ ಅಕ್ರಮ ನಡೆದಿದ್ದು, ಟೆಂಡರ್‌ಗಳ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ, ಸುಮಾರು 12.99 ಕೋಟಿ ರೂ. ಹೆಚ್ಚುವರಿ ಭದ್ರತಾ ಠೇವಣಿ ಸಂಗ್ರಹಿಸಿಲ್ಲ ಹಾಗೂ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯ ಸೂಚನೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಗುತ್ತಿಗೆಗಳನ್ನು ನೀಡಿದ ಪ್ರಕ್ರಿಯೆ ಮತ್ತು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಇತರ ವ್ಯಕ್ತಿಗಳ ಪಾತ್ರದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿದ್ದಾರೆ.

ಹಣಕಾಸಿನ ಅರ್ಹತಾ ಮಾನದಂಡಗಳನ್ನು ಪೂರೈಸಿಲ್ಲ ಎನ್ನಲಾದ ಮುನಿಯಪ್ಪ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಿದ್ದು ಹೇಗೆ ಎಂಬುದಕ್ಕೂ ಸ್ಪಷ್ಟನೆ ಕೋರಿದ್ದಾರೆ.

2018ರಲ್ಲಿ ಇಂತಹ ಟೆಂಡರ್‌ಗಳಲ್ಲಿ ಭಾಗವಹಿಸುವ ಸಂಸ್ಥೆಗಳಿಗೆ ವಾರ್ಷಿಕ 10 ಕೋಟಿ ರೂ. ವಹಿವಾಟು ಇರಬೇಕು ಎಂದು ರಾಜ್ಯ ಸರ್ಕಾರ ನಿಗದಿಪಡಿಸಿತ್ತು. ಆದರೆ, ಸಂಬಂಧಿತ ಸಂಸ್ಥೆಯು 2023-24ರಲ್ಲಿ ಕೇವಲ 3.34 ಕೋಟಿ ರೂ. ವಹಿವಾಟು ದಾಖಲಿಸಿದೆ. ಹಿಂದಿನ ವರ್ಷಗಳಲ್ಲಿ ಸಂಸ್ಥೆಯ ವಹಿವಾಟು ಎಷ್ಟಿತ್ತು ಮತ್ತು ಅದರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಣಿ ವಿವರಗಳೇನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಟೆಂಡರ್‌ನ ಪ್ಯಾಕೇಜ್‌ 2 ಮತ್ತು ಪ್ಯಾಕೇಜ್‌ 5ಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಭದ್ರತಾ ಠೇವಣಿ ಸಂಗ್ರಹಿಸದಿರುವ ಬಗ್ಗೆಯೂ ಅಶೋಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಂದಾಜು 55.04 ಕೋಟಿ ರೂ. ವೆಚ್ಚದ ಪ್ಯಾಕೇಜ್‌ 2ಕ್ಕೆ ಸುಮಾರು 6.99 ಕೋಟಿ ರೂ. ಹೆಚ್ಚುವರಿ ಭದ್ರತಾ ಠೇವಣಿ ಪಡೆಯಬೇಕಿತ್ತು. ಪ್ಯಾಕೇಜ್‌ 5ಕ್ಕೆ ಸುಮಾರು 5.99 ಕೋಟಿ ರೂ. ಠೇವಣಿ ಸಂಗ್ರಹಿಸಬೇಕಿತ್ತು. ಆದರೆ, ಒಟ್ಟು 12.99 ಕೋಟಿ ರೂ. ಹೆಚ್ಚುವರಿ ಠೇವಣಿಯನ್ನು ಸಂಗ್ರಹಿಸಿಲ್ಲ ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ಹಣಕಾಸು ಇಲಾಖೆ ಎಚ್ಚರಿಕೆ ನೀಡಿದ್ದರೂ, ಮೇ 22ರಂದು ಗುತ್ತಿಗೆ ನೀಡುವ ಆದೇಶ ಹೊರಡಿಸಲಾಗಿದೆ. ಇಲಾಖೆಯ ಸೂಚನೆಗಳಿದ್ದರೂ ಗುತ್ತಿಗೆ ನೀಡಲು ಯಾವ ಆಧಾರ ಬಳಸಲಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಆಂಧ್ರ, ಒಡಿಶಾಗೆ 'Cyclone Arnab' ಅಬ್ಬರದ ಭೀತಿ; 50 ರೈಲು, 21 ವಿಮಾನಗಳ ಹಾರಾಟ ಸ್ಥಗಿತ, 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ!

Cyclone Arnab: ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಮಳೆ ಎಚ್ಚರಿಕೆ, 600 ಕಿ.ಮೀ ರೈಲು ಹಳಿಗಳ ಮೇಲೆ ತೀವ್ರ ನಿಗಾ

INDvsNZ: 'ಇವರ ತಡೆಯಲು ಹೊಸ ತಂತ್ರವೇ ಬೇಕು': ಅಸಹಾಯಕತೆ ತೋಡಿಕೊಂಡ ಕಿವೀಸ್ ನಾಯಕ! ಹೇಳಿದ್ದೇನು?

ಸುನಾಮಿ ಅಲ್ಲ ಸೈಕ್ಲೋನ್: Arnab ಚಂಡಮಾರುತ ಅಬ್ಬರ, ಚೆನ್ನೈ ಕಡಲತೀರಕ್ಕೆ ಅಪ್ಪಳಿಸಿದ ರಕ್ಕಸ ಅಲೆಗಳು, ಕಟ್ಟೆಚ್ಚರ! Video