ಡಿ ಕೆ ಶಿವಕುಮಾರ್  
ರಾಜ್ಯ

ನವೆಂಬರ್ 15ಕ್ಕೆ ಬೆಂಗಳೂರಿಗೆ ಪ್ರಧಾನಿ, ಸರ್ವಪಕ್ಷ ನಿಯೋಗ ಭೇಟಿಗೆ ಸಮಯ ಕೇಳುತ್ತೇನೆ: ಸಿಎಂ ಡಿ ಕೆ ಶಿವಕುಮಾರ್

ಕೇಂದ್ರಕ್ಕೆ ತಂಡ ಕೊಂಡೊಯ್ಯಲು ನವೆಂಬರ್ 1ರವರೆಗೆ ಕಾಯುತ್ತೇವೆ ಅವರು ಸಮಯ ಕೊಡ್ತಾರಾ ನೋಡೋಣ, ಪ್ರಧಾನಿ ಮಂತ್ರಿಗಳು ನವೆಂಬರ್ 15ಕ್ಕೆ ಬೆಂಗಳೂರಿಗೆ ಬರ್ತಿದ್ದಾರೆ. ಇಲ್ಲೇ ಅವರ ಸಮಯಾವಕಾಶ ಕೇಳುತ್ತೇನೆ ಎಂದರು.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 15ರಂದು ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಪಿಂಕ್ ಮೆಟ್ರೋ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಪಿಂಕ್ ಮೆಟ್ರೋ ಮಾರ್ಗ ಕಾಳೇನ ಅಗ್ರಹಾರ ದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವೂ ಒಟ್ಟು ಉದ್ದ ಸುಮಾರು 21.25 ಕಿ.ಮೀ ಇದ್ದು, ಒಟ್ಟು 18 ನಿಲ್ದಾಣಗಳಿದೆ. ಸದ್ಯ 7.5 ಕಿ.ಮೀ. ಎತ್ತರಿಸಿದ (Elevated) ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ.

ಈ ಎಲಿವೇಟೆಡ್ ಮೆಟ್ರೋ ಮಾರ್ಗವನ್ನು ಪ್ರಧಾನಿಗಳು ಉದ್ಘಾಟನೆ ಮಾಡಲಿದ್ದು, ಉಳಿದ 13.76 ಕಿ.ಮೀ. ಭೂಗತ ಸುರಂಗ ಮಾರ್ಗ ಕಾಮಗಾರಿಯಲಿದ್ದು, ಈ ಮಾರ್ಗ ಮುಂದಿ ವರ್ಷ ಉದ್ಘಾಟನೆ ಆಗುವ ಸಾಧ್ಯತೆ ಇದೆ. ಡೈರಿ ಸರ್ಕಲ್‌ನಿಂದ ನಾಗವಾರ, ಶಿವಾಜಿನಗರ ಹಾಗೂ ಕಂಟೋನ್ಮೆಂಟ್ ಮೂಲಕ ನಾಗವಾರ ವರೆಗೂ ಸಂಪರ್ಕ ಕಲ್ಪಿಸಲಿದೆ.

ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿಗೆ ಮನವಿ

ಈ ವರ್ಷ ರಾಜ್ಯದಲ್ಲಿ ಹಿಂದೆಂದೂ ಕಂಡಿರದಷ್ಟು ಬರಗಾಲ ಉಂಟಾಗಿದೆ. ರಾಜ್ಯದ ರೈತರಿಗೆ ಬರ ಪರಿಹಾರ ಹಣ ನೇರವಾಗಿ ಸಿಗಲು ಪರಿಶೀಲನೆ ಮಾಡುತ್ತಿದ್ದೇವೆ. ಹಣ ಸಂದಾಯ ಮಾಡಲು ಅಕೌಂಟ್ ಗಳೆಲ್ಲವೂ ಟ್ಯಾಲಿ ಆಗಬೇಕಿದೆ. ಈಗಾಗಲೇ ಹಣ ಬಿಡುಗಡೆ ಮಾಡಿದ್ದೇವೆ. ಈ ಬಗ್ಗೆ ಸರ್ಕಾರ ಆದೇಶವನ್ನೂ ಹೊರಡಿಸಿದೆ.

ಕೇಂದ್ರಕ್ಕೆ ತಂಡ ಕೊಂಡೊಯ್ಯಲು ನವೆಂಬರ್ 1ರವರೆಗೆ ಕಾಯುತ್ತೇವೆ ಅವರು ಸಮಯ ಕೊಡ್ತಾರಾ ನೋಡೋಣ, ಪ್ರಧಾನಿ ಮಂತ್ರಿಗಳು ನವೆಂಬರ್ 15ಕ್ಕೆ ಬೆಂಗಳೂರಿಗೆ ಬರ್ತಿದ್ದಾರೆ. ಇಲ್ಲೇ ಅವರ ಸಮಯಾವಕಾಶ ಕೇಳುತ್ತೇನೆ. ಸರ್ವ ಪಕ್ಷ ನಿಯೋಗ ಭೇಟಿಯಾಗಲು ಪ್ರಧಾನಿಗೆ ಸಮಯ ಕೇಳುತ್ತೇನೆ, ಬರ ಪರಿಹಾರ ಕೊಡಿ ಎಂದು ಮನವಿ ಮಾಡುತ್ತೇನೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಾಟಾ ಸಮೂಹದಲ್ಲಿ ಬಿಕ್ಕಟ್ಟು: ಭಾರತೀಯ ಉದ್ಯಮಗಳು ನಿಮ್ಮ ಆಟದ ವಸ್ತುಗಳಲ್ಲ; ಪ್ರಧಾನಿ ಮೋದಿ-ಅಮಿತಾ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಆಂಧ್ರ ಪ್ರದೇಶದ ನರ್ಸಾಪುರ ಬಳಿ ಕರಾವಳಿ ದಾಟಿದ 'ಅರ್ನಬ್' ಚಂಡಮಾರುತ; ತೀವ್ರತೆ ಇಳಿಕೆ, ಇಬ್ಬರು ಸಾವು

ಪ್ರಾಜೆಕ್ಟ್ ಚೀತಾ ಯೋಜನೆಗೆ ಅತಿ ದೊಡ್ಡ ಹಿನ್ನೆಡೆ! ಕುನೋದಲ್ಲಿ ಬೇಟೆಗಾರರ ಗುಂಡಿಗೆ ಬಲಿಯಾಯ್ತಾ ಚೀತಾ ಮರಿ?

ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಅಕ್ರಮ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಜೈಲಿನಿಂದ ಕೈದಿಗಳು ಪರಾರಿಯಾಗುವುದನ್ನು ತಡೆಯಲು ಬಂದೂಕು ಬಳಸಲು ತಮಿಳುನಾಡು ಕಾರಾಗೃಹ ಇಲಾಖೆ ಅನುಮತಿ!