ಕನ್ನಡ ಬಾವುಟ 
ರಾಜ್ಯ

ನವೆಂಬರ್ 1ರಂದು ಎಲ್ಲ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ: ಶಿಕ್ಷಣ ಇಲಾಖೆ ಸೂಚನೆ

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆ, ಎಲ್ಲ ಶಾಲೆಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಬೇಕು ಎಂದು ಸೂಚಿಸಿದೆ.

ಬೆಂಗಳೂರು: ರಾಜ್ಯದ ಅನುದಾನರಹಿತ ಖಾಸಗಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿ ಈ ವರ್ಷ ನವೆಂಬರ್ 1ರಂದು 70ನೇ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ದೇಶನ ನೀಡಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆ, ಎಲ್ಲ ಶಾಲೆಗಳು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ಸೂಚಿಸಿದೆ. ಆದರೆ, ಈ ಬಾರಿ ನವೆಂಬರ್ 1 ಭಾನುವಾರ ಬಂದಿರುವುದರಿಂದ ಇಲಾಖೆಯ ಸೂಚನೆಗೆ ಆಕ್ಷೇಪ ವ್ಯಕ್ತವಾಗಿದ್ದು, ಶಾಲಾ ಆಡಳಿತ ಮಂಡಳಿಗಳಲ್ಲಿಯೂ ಗೊಂದಲ ಉಂಟಾಗಿದೆ.

‘ಭಾನುವಾರ ಮಕ್ಕಳನ್ನು ಶಾಲೆಗೆ ಕಳುಹಿಸಲು ಯಾವುದೇ ಪೋಷಕರು ಸಿದ್ಧರಿರುವುದಿಲ್ಲ. ಅಲ್ಲದೆ, ಐದು ತಿಂಗಳ ಸುದೀರ್ಘ ಎಸ್‌ಐಆರ್‌ ಕಾರ್ಯದ ಬಳಿಕ ಶಿಕ್ಷಕರಿಗೂ ಭಾನುವಾರದ ರಜೆ ದೊರೆಯುತ್ತಿದೆ’ ಎಂದು ಬೆಂಗಳೂರಿನ ಸರ್ಕಾರಿ ಶಾಲೆಯೊಂದರ ಮುಖ್ಯಶಿಕ್ಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ, ಇಂದು ಗರ್ಭಗುಡಿ ಬಾಗಿಲು ಓಪನ್! ಈ ಬಾರಿ ಸುಮಾರು 30 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ

‘96 ಗಂಟೆಯೊಳಗೆ ದಾಳಿ’: Donald Trump ಆದೇಶಕ್ಕೆ ಕಾಯುತ್ತಿರುವ ಅಮೆರಿಕ ಸೇನೆ, ಇರಾನ್ ಮೇಲೆ ಮತ್ತೆ ಯುದ್ಧದ ಕಾರ್ಮೋಡ?

ಸೇನೆ ದಾಳಿ ನಡೆಸಿದರೆ ಇರಾನ್, ಹೌತಿಗಳಿಂದ ಪ್ರತೀಕಾರ?: ಅಮೆರಿಕ ಗುಪ್ತಚರ ಮಾಹಿತಿ

ಕ್ಯಾನ್ಸರ್ ರೋಗಿಗಳಿಗೆ ಸಿಹಿಸುದ್ದಿ: 543 ಔಷಧಗಳ ಬೆಲೆ ಇಳಿಕೆ, ಹೊಸ ದರ ನ.9ರಿಂದ ಜಾರಿ!

'ಸರ್ಕಾರವೇ ತನ್ನ ಮತದಾರರ ಆಯ್ಕೆ ಮಾಡುತ್ತಿದೆ, ಜ್ಞಾನೇಶ್ ಕುಮಾರ್ ಕೆಳಗಿಳಿಯಬೇಕು': ಕಾಂಗ್ರೆಸ್ ನೇತೃತ್ವದ INDIA ಬಣದ ರ‍್ಯಾಲಿಗೆ CJP ಬೆಂಬಲ