ಉಪನ್ಯಾಸಕ ಗಂಗೂ 
ರಾಜ್ಯ

ಮಂಡ್ಯ: ಅಸಭ್ಯ ಮೆಸೇಜ್ ಕಳಿಸುತ್ತಿದ್ದ ಲೆಕ್ಚರರ್'ಗೆ ವಿದ್ಯಾರ್ಥಿನಿಯರಿಂದಲೇ ಧರ್ಮದೇಟು; ಥಳಿಸಲು ಬಂದವರ ಮುಂದೆ ತಲೆ ಚಚ್ಚಿಕೊಂಡು ಹೈಡ್ರಾಮಾ!

ಆರೋಪಿ ಉಪನ್ಯಾಸಕ ಗಂಗೂ, ತಮಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಮಂಡ್ಯ: ತನ್ನ ಮೊಬೈಲ್ ನಿಂದ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರೇ ಧರ್ಮದೇಟು ನೀಡಿ, ತಕ್ಕ ಪಾಠ ಕಲಿಸಿರುವ ಘಟನೆ ನಾಗಮಂಗಲ-ಮಂಡ್ಯ ರಸ್ತೆಯ ಪದವಿ ಕಾಲೇಜಿನಲ್ಲಿ ನಡೆದಿದೆ.

ಆರೋಪಿ ಉಪನ್ಯಾಸಕ ಗಂಗೂ, ತಮಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಉಪನ್ಯಾಸಕ ಗಂಗೂ, ಕಾಲೇಜಿನ ವಿದ್ಯಾರ್ಥಿನಿಯರ ಮೊಬೈಲ್ ನಂಬರ್‌ಗಳನ್ನು ಪಡೆದುಕೊಂಡು ಅವರಿಗೆ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದ. ಅಷ್ಟೇ ಅಲ್ಲದೆ, ಚಾಟಿಂಗ್‌ನಲ್ಲಿ 'ಐ ಲವ್‌ ಯೂ, ಐ ಲೈಕ್‌ ಯೂ' ಎಂದು ಕಳುಹಿಸುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಉಪನ್ಯಾಸಕನ ಕಾಟ ತಾಳಲಾರದೆ ಬೇಸತ್ತ ವಿದ್ಯಾರ್ಥಿನಿಯರು, ಕೊನೆಗೆ ತಾವೇ ಖುದ್ದು ಪಾಠ ಕಲಿಸಿದ್ದಾರೆ. ಉಪನ್ಯಾಸಕನ ಅಸಭ್ಯ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ನೇರವಾಗಿ ಕಾಲೇಜಿನ ಸ್ಟಾಫ್ ರೂಂಗೆ ನುಗ್ಗಿ ಉಪನ್ಯಾಸಕನ ಗ್ರಹಚಾರ ಬಿಡಿಸಿದ್ದಾರೆ.

ವಿದ್ಯಾರ್ಥಿನಿಯರೇ ಉಪನ್ಯಾಸಕನಿಗೆ ಧರ್ಮದೇಟು ನೀಡಿದ್ದು, ಥಳಿಸಲು ಬಂದವರ ಮುಂದೆ ತನ್ನ ತಲೆ ಚಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾನೆ. ಅಂತಿಮವಾಗಿ ತನ್ನ ತಪ್ಪು ಒಪ್ಪಿಕೊಂಡ ಉಪನ್ಯಾಸಕ ಕೈ ಮುಗಿದು ಕ್ಷಮೆ ಯಾಚಿಸಿದ್ದಾನೆ.

ವಿದ್ಯಾರ್ಥಿನಿಯರ ಈ ಧೈರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇಂತಹ ಕಾಮುಕ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದರಿನಾಥದಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ! ಬೆಂಗಳೂರು ಮೂಲದ ಐವರು ಪ್ರಯಾಣಿಕರು ಸೇರಿದಂತೆ ಆರು ಮಂದಿ ಸಾವು, VIDEO

ತಮಿಳುನಾಡು ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಐದು ವರ್ಷ ವಯೋಮಿತಿ ಸಡಿಲಿಕೆ ಘೋಷಿಸಿದ CM ವಿಜಯ್

ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಹೈಡ್ರಾಮಾ: ಪಕ್ಷದಿಂದ ಶಶಿಕಲಾ ಉಚ್ಚಾಟನೆ

Karnataka Rajyotsava Award 2026: ನಟ ಅಶೋಕ್ ಸೇರಿದಂತೆ ಈ ಬಾರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ!

ಶಕ್ತಿ ಯೋಜನೆಯಿಂದ ತುಂಬಾ loss; KSRTC, BMTC ಡೀಸೆಲ್ ಗೂ ಕಾಸಿಲ್ಲಾ- CM DK Shivakumar