ಶಿವಾನಂದ ನೀಲಣ್ಣನವರ್‌ 
ರಾಜ್ಯ

ಶಿವಾನಂದ ನೀಲಣ್ಣನವರ್‌ಗೆ ಇಡಿ ಶಾಕ್; ಬರೋಬ್ಬರಿ 427 ಕೋಟಿ ರೂ. ಮೌಲ್ಯದ ಆಸ್ತಿ ಸೀಜ್‌!

ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣನವರ್‌ ವಿರುದ್ಧ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು.

ಬೆಂಗಳೂರು: ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಬೆಳಗಾವಿಯ ಶಿವಂ ಅಸೋಸಿಯೇಟ್ ಸಂಸ್ಥೆ ಮಾಲೀಕ ಶಿವಾನಂದ ನೀಲಣ್ಣನವರ್‌ ಅವರಿಗೆ ಇ.ಡಿ ಶಾಕ್‌ ಕೊಟ್ಟಿದೆ. ಬರೋಬ್ಬರಿ 427 ಕೋಟಿ ರೂ. ಮೌಲ್ಯದ ಆಸ್ತಿ ಸೀಜ್ ಮಾಡಲಾಗಿದೆ.

ಫಿಕ್ಸೆಡ್ ಡೆಪಾಸಿಟ್‌ ಇಟ್ಟಿದ್ದ 367‌ ಕೋಟಿ‌‌‌, ಬ್ಯಾಂಕ್ ಖಾತೆಯಲ್ಲಿದ್ದ 44 ಕೋಟಿ, ಸ್ಥಿರಾಸ್ತಿಗಳು 13 ಕೋಟಿ, ಷೇರು ಮಾರುಕಟ್ಟೆ 1.31 ಕೋಟಿ ಸೇರಿದಂತೆ ಒಟ್ಟು 427 ಕೋಟಿ ರೂ. ಸೀಜ್‌ ಮಾಡಲಾಗಿದೆ. ಶಿವಂ ಅಸೋಸಿಯೇಟ್ಸ್‌ನಿಂದ 2,459 ಕೋಟಿ ರೂ. ವಂಚನೆ ಆಗಿರುವುದು ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಫಿಕ್ಸೆಡ್ ಡೆಪಾಸಿಟ್‌,‌ ಬ್ಯಾಂಕ್ ಖಾತೆ, ಷೇರು ಹೂಡಿಕೆ, ಕೃಷಿ ಜಮೀನು, ಬಂಗಲೆ ಜಪ್ತಿ ಮಾಡಿದೆ.

ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣನವರ್‌ ವಿರುದ್ಧ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಪ್ರಾಥಮಿಕ ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಆಗಿರುವ ವಿಚಾರ ಗೊತ್ತಾಗ್ತಿದ್ದಂತೆ‌ ಇ.ಡಿ ಎಂಟ್ರಿ ಕೊಟ್ಟಿದೆ.

2026ರ ಆಗಸ್ಟ್ ತಿಂಗಳಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿ 8 ಸ್ಥಳಗಳಲ್ಲಿ ಇ.ಡಿ‌‌ ರೇಡ್ ಮಾಡಿತ್ತು. ಈ ವೇಳೆ ದಾಖಲೆ, ಕೈಬರಹದ ಲೆಕ್ಕಪತ್ರಗಳು, ಮೊಬೈಲ್‌ ಸೇರಿದಂತೆ ಡಿಜಿಟಲ್ ಸಾಕ್ಷ್ಯ ಸೀಜ್ ಮಾಡಲಾಗಿತ್ತು. ಹಣ ಹೇಗೆ ಸಂಗ್ರಹಿಸಲಾಗಿದೆ, ವರ್ಗಾಯಿಸಲಾಗಿದೆ ಮತ್ತು ಎಲ್ಲಿ ಹೂಡಿಕೆ ಆಗಿದೆ ಅನ್ನೋದು ಬಯಲಾಗಿತ್ತು.

ಶಿವಾನಂದ ನೀಲಣ್ಣನವರ್‌ನನ್ನು ಆಗಸ್ಟ್ 8ರಂದು ಬಂಧಿಸಲಾಗಿತ್ತು. ತನಿಖೆ ವೇಳೆ 35,000 ಕ್ಕೂ ಹೆಚ್ಚು ಹೂಡಿಕೆದಾರರಿಂದ 2,459 ಕೋಟಿ ರೂ. ಹಣ ಸಂಗ್ರಹಿಸಿರುವ ವಿಚಾರ ಬಯಲಾಗಿದೆ. ಅಕ್ಟೋಬರ್ 9ರಂದು ಶಿವಾನಂದ್‌‌ ನೀಲಣ್ಣನವರ್‌ ಸೇರಿ ಐವರ ಮೇಲೆ ಇ.ಡಿ ಚಾರ್ಜ್‌ಶೀಟ್ ಮಾಡಿದೆ. ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಹೂಡಿಕೆದಾರರಿಂದ ಸಂಗ್ರಹಿಸಿದ ಹಣ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಇದರಿಂದ 185.95 ಕೋಟಿ ರೂ. ನಿವ್ವಳ ನಷ್ಟ ಉಂಟಾಗಿತ್ತು ಅನ್ನೋದು ತನಿಖೆಯಲ್ಲಿ ಬಯಲಾಗಿದೆ.

ಸುಮಾರು 25 ಕೋಟಿ ರೂ. ಹಣ ಎರಡು ಸಹಕಾರಿ ಕ್ರೆಡಿಟ್ ಸೊಸೈಟಿಗಳ ಮೂಲಕ ವರ್ಗಾಯಿಸಲಾಗಿತ್ತು. ಫಿಕ್ಸೆಡ್ ಡೆಪಾಸಿಟ್‌ ಸೃಷ್ಟಿಸಿ, ಅದರ ಆಧಾರದಲ್ಲಿ ಸಹಚರರ ಹೆಸರಿನಲ್ಲಿ ಸಾಲ ಪಡೆಯಲಾಗಿತ್ತು. ಈ ಸಾಲದ ಹಣವನ್ನು ಜಮೀನು ಖರೀದಿಸಲು ಬಳಸಲಾಗಿತ್ತು. ಪತ್ನಿ ಸಂಗೀತಾ ಮತ್ತು ಮಗ ಸಿದ್ಧಾಂತ್ ಬ್ಯಾಂಕ್ ಖಾತೆಗಳಿಗೂ ವರ್ಗಾಯಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಂಜಾಬ್ ಚುನಾವಣೆ: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 40 ಮಂದಿಗೆ ಟಿಕೆಟ್, ಧುರಿಯಿಂದ ಭಗವಂತ್ ಮಾನ್ ಕಣಕ್ಕೆ!

ಬೆಂಗಳೂರಿಗೂ ವಿಸ್ತರಿಸಿದ ಕೌಟುಂಬಿಕ ಕಲಹ: ಶರ್ಮಿಳಾ ಮಗಳ ಮದುವೆಗೆ 'ಯಲಹಂಕ ಪ್ಯಾಲೇಸ್‌' ನೀಡಲು ಜಗನ್ ನಕಾರ; ಬೇರೆ ಸ್ಥಳದಲ್ಲಿ ಮದುವೆ!

ಲಂಡನ್‌ನಿಂದ ಯಾರಿಗೂ ತಿಳಿಸದೆ ಗೌಪ್ಯವಾಗಿ ಪುಣೆಗೆ ಬಂದಿದ್ದ ಮಹಿಳೆ ಶವವಾಗಿ ಪತ್ತೆ; ಫುಡ್ ಡೆಲಿವರಿ ವಹಿವಾಟಿನಿಂದ ಬಯಲಾಯ್ತು ಸುಳಿವು!

ಪುಣೆ: 6 ವರ್ಷದ ಮಗನೊಂದಿಗೆ 18ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ; ಮತ್ತೊಂದು ಮದುವೆಯಾಗುವಂತೆ ಪತಿಗೆ ಡೆತ್​ನೋಟ್!

ಕೋರಮಂಗಲ: ರಸ್ತೆಯಲ್ಲೇ ಹೊತ್ತಿ ಉರಿದ BMTC ಬಸ್; ತಪ್ಪಿದ ದೊಡ್ಡ ಅನಾಹುತ!