ಜಗನ್ ಮೋಹನ್ ರೆಡ್ಡಿ-ಶರ್ಮಿಳಾ 
ರಾಜ್ಯ

ಬೆಂಗಳೂರಿಗೂ ವಿಸ್ತರಿಸಿದ ಕೌಟುಂಬಿಕ ಕಲಹ: ಶರ್ಮಿಳಾ ಮಗಳ ಮದುವೆಗೆ 'ಯಲಹಂಕ ಪ್ಯಾಲೇಸ್‌' ನೀಡಲು ಜಗನ್ ನಕಾರ; ಬೇರೆ ಸ್ಥಳದಲ್ಲಿ ಮದುವೆ!

ಆಂಧ್ರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರು ತಮ್ಮ ಪುತ್ರಿ ಅಂಜಲಿ ರೆಡ್ಡಿ ಅವರ ವಿವಾಹವನ್ನು ಜಗನ್ ಮೋಹನ್ ರೆಡ್ಡಿ ಹಾಗೂ ತಮ್ಮ ಜಂಟಿ ಒಡೆತನದಲ್ಲಿರುವ ‘ಯಲಹಂಕ ಪ್ಯಾಲೇಸ್‌’ನಲ್ಲಿ ನಡೆಸಲು ತೀರ್ಮಾನಿಸಿದ್ದರು.

ಬೆಂಗಳೂರು: ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಪುತ್ರ, ಮಾಜಿ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಹಾಗೂ ಅವರ ಪುತ್ರಿ ವೈ.ಎಸ್‌. ಶರ್ಮಿಳಾ ರೆಡ್ಡಿ ನಡುವಿನ ಕೌಟುಂಬಿಕ ಕಲಹ ಇದೀಗ ಬೆಂಗಳೂರಿಗೂ ವಿಸ್ತರಿಸಿದೆ.

ಆಂಧ್ರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರು ತಮ್ಮ ಪುತ್ರಿ ಅಂಜಲಿ ರೆಡ್ಡಿ ಅವರ ವಿವಾಹವನ್ನು ಜಗನ್ ಮೋಹನ್ ರೆಡ್ಡಿ ಹಾಗೂ ತಮ್ಮ ಜಂಟಿ ಒಡೆತನದಲ್ಲಿರುವ ‘ಯಲಹಂಕ ಪ್ಯಾಲೇಸ್‌’ನಲ್ಲಿ ನಡೆಸಲು ತೀರ್ಮಾನಿಸಿದ್ದರು. ಆದರೆ ಇದಕ್ಕ ಅವರ ಸಹೋದರ ಜಗನ್ ಅವರು ವಿರೋಧ ವ್ಯಕ್ತಪಿಸಿದ್ದು, ಇದೀಗ ಮದುವೆಯನ್ನು ಬೇರೆ ಸ್ಥಳದಲ್ಲಿ ನಡೆಸಲು ನಿರ್ಧರಿಸಿದ್ದಾರೆ.

ತಮ್ಮ ಮಗಳ ಮದುವೆಗೆ ಯಲಹಂಕ ಪ್ಯಾಲೇಸ್‌ ಬಳಸಲು ಸಹೋದರ ಜಗನ್ ಮೋಹನ್ ರೆಡ್ಡಿ ನಿರಾಕರಿಸಿದ ಕೆಲವು ದಿನಗಳ ನಂತರ, ವೈ.ಎಸ್. ಶರ್ಮಿಳಾ ಅವರು ಮದುವೆ ಸಮಾರಂಭವನ್ನು ಬೇರೆಡೆ ನಡೆಸಲು ನಿರ್ಧರಿಸಿರುವುದಾಗಿ ಶನಿವಾರ ತಿಳಿಸಿದ್ದಾರೆ.

ಈ ಕಾರ್ಯಕ್ರಮವು ಯಾವುದೇ ವಿವಾದಕ್ಕೆ ಎಡೆಮಾಡಿಕೊಡದಂತೆ ನಡೆಸುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಶರ್ಮಿಳಾ ಹೇಳಿದ್ದಾರೆ.

ಬೆಂಗಳೂರಿನ ಯಲಹಂಕ ಪ್ಯಾಲೇಸ್‌ನಲ್ಲಿ ತಮ್ಮ ಸೋದರ ಸೊಸೆ ಅಂಜಲಿ ರೆಡ್ಡಿ ಅವರ ಮದುವೆ ಸಮಾರಂಭವನ್ನು ನಡೆಸಲು ಅನುಮತಿ ನೀಡಲು, ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಜಗನ್ ಮೋಹನ್ ರೆಡ್ಡಿ ಇತ್ತೀಚೆಗೆ ನಿರಾಕರಿಸಿದ್ದರು.

"ಮದುವೆ ನಡೆಯುವ ಸ್ಥಳದ ಸುತ್ತ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಯಾವುದೇ ಜಗಳ ಅಥವಾ ವಿವಾದಗಳಿಲ್ಲದೆ ಮದುವೆಯನ್ನು ನೆರವೇರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ, ಅಂಜಲಿ ರೆಡ್ಡಿ ಮತ್ತು ಸೋಮಲ ರಘುರಾಮ್ ರೆಡ್ಡಿ ಅವರ ಮದುವೆಯನ್ನು ಯಲಹಂಕದಲ್ಲಿರುವ ಮನೆಯಿಂದ ಬೇರೆಡೆ ಆಯೋಜಿಸಲು ನಾವು ನಿರ್ಧರಿಸಿದ್ದೇವೆ" ಎಂದು ಶರ್ಮಿಳಾ ಅವರು 'ಎಕ್ಸ್' (X) ಪೋಸ್ಟ್ ಮಾಡಿದ್ದಾರೆ.

ಜಗನ್‌ ಹಾಗೂ ಶರ್ಮಿಳಾ ಅವರ ತಂದೆ, ಆಂಧ್ರದ ಮಾಜಿ ಸಿಎಂ ವೈ.ಎಸ್. ರಾಜಶೇಖರ ರೆಡ್ಡಿ ಅವರು ಬೆಂಗಳೂರಿನ ಯಲಹಂಕದಲ್ಲಿ 20 ಎಕರೆ ಆಸ್ತಿ ಹೊಂದಿದ್ದರು. ಅದಕ್ಕೆ ಯಲಹಂಕ ಪ್ಯಾಲೇಸ್‌ ಎಂಬ ಹೆಸರು ಇರಿಸಿದ್ದರು. ಕುಟುಂಬದ ಅನೇಕ ಮದುವೆಗಳನ್ನು ಇಲ್ಲಿ ಮಾಡಿಸಿದ್ದರು. ನಿಧನಕ್ಕೂ ಮುನ್ನ ಈ ಜಾಗವನ್ನು ಶರ್ಮಿಳಾ ಮತ್ತು ಜಗನ್‌ಗೆ ಸಮಾನ ಭಾಗ ಮಾಡಿದ್ದರು. ಅದರ ಪ್ರಕಾರ ಯಲಹಂಕದಲ್ಲಿ ಶರ್ಮಿಳಾ ಹಾಗೂ ಜಗನ್‌ರ ಇಬ್ಬರ ಮನೆಗಳೂ ಯಲಹಂಕ ಪ್ಯಾಲೇಸ್‌ನ ಒಂದೇ ಕಾಂಪೌಂಡಲ್ಲಿವೆ. ಇಲ್ಲಿ ಏನೇ ಸಮಾರಂಭ ನಡೆದರೂ ಇಬ್ಬರಿಂದಲೂ ಪರಸ್ಪರ ಒಪ್ಪಿಗೆ ಅಗತ್ಯ. ಆ ಪ್ರಕಾರ ನ.25ರಂದು ಶರ್ಮಿಳಾ ಅವರ ಮಗಳು ಅಂಜಿಲಿ ಮದುವೆ ನಿಗದಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಂಜಾಬ್ ಚುನಾವಣೆ: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 40 ಮಂದಿಗೆ ಟಿಕೆಟ್, ಧುರಿಯಿಂದ ಭಗವಂತ್ ಮಾನ್ ಕಣಕ್ಕೆ!

'ನಿಮ್ ಅಪ್ಪ ಬಂದಿದ್ದಾರೆ ಬಾ': LKG ವಿದ್ಯಾರ್ಥಿನಿ ಮೇಲೆ 3ನೇ ತರಗತಿ ಬಾಲಕನಿಂದ ದಾರುಣ ಹಲ್ಲೆ, ಕಲ್ಲು, ಹೂ ಕುಂಡ ಎತ್ತಿಹಾಕಿ ರಾಕ್ಷಸೀಕೃತ್ಯ, Video

Raptadu: ಮರಕತ್ತರಿಸುವ ಚೈನ್ ಸಾ ಹಿಡಿದು ಶಾಲೆಗೆ ನುಗ್ಗಿದ ದುಷ್ಕರ್ಮಿ, ಭೀಕರ ದಾಳಿ, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ, ಓರ್ವಳ ಸ್ಥಿತಿ ಗಂಭೀರ! Video

ಜ್ಞಾನಭಾರತಿ ಬಳಿ ಸ್ಫೋಟಕ ರೀತಿಯ ವಸ್ತು ಪತ್ತೆ: ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ!

ಕರ್ವಾ ಚೌತ್ ದಿನವೇ ಪ್ರಿಯಕರನ ಜೊತೆ ಸೆ*, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ 'ಧರ್ಮದೇಟು', ಹೈಡ್ರಾಮಾ! Video