ರಾಜ್ಯ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಶಿಕ್ಷೆ ಕೊಡಿಸಿದ್ದ ತನಿಖಾಧಿಕಾರಿಗಳು ಸೇರಿ ರಾಜ್ಯ 6 ಅಧಿಕಾರಿಗಳಿಗೆ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತನಿಖೆ ನಡೆಸಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ SIT ಹಾಗೂ ಸಿಐಡಿ ವಿಭಾಗದ ಮೂವರು ಅಧಿಕಾರಿಗಳು ಸೇರಿದಂತೆ ರಾಜ್ಯದ 6 ಅಧಿಕಾರಿಗಳು ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ಭಾಜನರಾಗಿದ್ದಾರೆ.

ನವದೆಹಲಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತನಿಖೆ ನಡೆಸಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್‌ಐಟಿ (SIT) ಹಾಗೂ ಸಿಐಡಿ (CID) ವಿಭಾಗದ ಮೂವರು ಅಧಿಕಾರಿಗಳು (ಇನ್ಸ್‌ಪೆಕ್ಟರ್ ಶೋಭಾ, ಎಎಸ್‌ಐ ರತ್ನಮ್ಮ ಮತ್ತು ಸಿಎಚ್‌ಸಿ ಬಾಲಕೃಷ್ಣ) ಸೇರಿದಂತೆ ರಾಜ್ಯದ 6 ಅಧಿಕಾರಿಗಳು ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರು ನಗರದ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಶೋಭ ಎನ್, ಬೆಂಗಳೂರಿನ ಪ್ರಧಾನ ಕಛೇರಿಯ ಪೊಲೀಸ್ ಇನ್ಸ್‌ಪೆಕ್ಟರ್‌ ಎಂ. ಶ್ರೀನಿವಾಸ್ ರಾವ್, ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಮಂಜುನಾಥ್, ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಬಾವುದ್ದೀನ್ ರುಕ್ಷುದ್ದೀನ್ ಗಡೇಕರ್, ಬೆಂಗಳೂರು ನಗರ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ (ASI) ರತ್ನಮ್ಮ ಕೆ ಹಾಗೂ ಬೆಂಗಳೂರಿನ ಸಿಐಡಿ ಘಟಕದ ಸಿಹೆಚ್‌ಸಿ ಬಾಲಕೃಷ್ಣ ವೈ ಅವರು ತನಿಖಾ ವಿಭಾಗದ ಪದಕಕ್ಕೆ ಭಾಜನರಾಗಿದ್ದಾರೆ.

ವಿಧಿವಿಜ್ಞಾನ ವಿಭಾಗದಲ್ಲಿ ನೀಡಲಾಗುವ ದಕ್ಷತಾ ಪದಕಕ್ಕೆ ಮೈಸೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ (RFSL) ಉಪನಿರ್ದೇಶಕರಾದ ಡಾ. ಚಂದ್ರಶೇಖರ್ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ರಾಹುಲ್ ಗಾಂಧಿಯನ್ನು ಅಣಕು ಪ್ರಧಾನಿ ಮಾಡಿ; ಪ್ರತಿದಿನ ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಅಂತ ಭಜನೆ ಮಾಡಿ': 'ಮಹಾಭಿಯೋಗ'ಕ್ಕೆ BJP ಟಾಂಗ್

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ಅಪ್ಪ ನೀನು ಆ ಪಕ್ಷಿಯನ್ನು ಕೊಂದಿದ್ದು ನನಗೆ ಇಷ್ಟ ಆಗಲಿಲ್ಲ: ಯಶ್ ಮಗ ಯಥರ್ವ್ ಕಣ್ಣೀರು!

ಮೇಕೇದಾಟು ಯೋಜನೆ ಬಗ್ಗೆ CM DK Shivakumar ಬಿಗ್ ಅಪ್ಡೇಟ್: ಜಲಾಶಯ ನಿರ್ಮಾಣ ಯಾವಾಗ? ಇಲ್ಲಿದೆ ಮಾಹಿತಿ..

ರೈತರನ್ನು ಉಳಿಸಲು ಸಕ್ಕರೆ MSP ದರವನ್ನು ಕೇಂದ್ರ 50 ರೂ ಗೆ ಏರಿಸಬೇಕು: ಸಿಎಂ ಡಿ.ಕೆ ಶಿವಕುಮಾರ್