ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 
ರಾಜ್ಯ

ರಾಜ್ಯದ ಮೂರು ಜಿಲ್ಲೆಗಳಲ್ಲಿ ಭೀಕರ ಬರ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆ.ಶಿವಕುಮಾರ್

ಕರ್ನಾಟಕವು ದೇಶದಲ್ಲೇ ಎರಡನೇ ಅತಿ ದೊಡ್ಡ ಒಣಭೂಮಿ ಪ್ರದೇಶವನ್ನು ಹೊಂದಿದ್ದು, ಬರವು ನೈಸರ್ಗಿಕ ಸವಾಲಾಗಿದೆ. ಇದನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ.

ಬಾಗಲಕೋಟೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಬಳ್ಳಾರಿ, ವಿಜಯನಗರ ಹಾಗೂ ಬಾಗಲಕೋಟೆ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದರು.

ಬಳಿಕ ಬಾಗಲಕೋಟೆ ಜಿಲ್ಲೆಗೆ ಖುದ್ದಾಗಿ ಭೇಟಿ ನೀಡಿದ ಅವರು ಶಿರೂರು ಗ್ರಾಮದಲ್ಲಿ ಬೆಳೆಗಳನ್ನು ಪರಿಶೀಲಿಸಿ, ರೈತರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಈ ಮೂಲಕ ಬೆಳೆ ಹಾನಿಯ ಪ್ರಮಾಣವನ್ನು ಅಂದಾಜಿಸಿದರು.

ಜಿಲ್ಲಾ ಬರ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕವು ದೇಶದಲ್ಲೇ ಎರಡನೇ ಅತಿ ದೊಡ್ಡ ಒಣಭೂಮಿ ಪ್ರದೇಶವನ್ನು ಹೊಂದಿದ್ದು, ಬರವು ನೈಸರ್ಗಿಕ ಸವಾಲಾಗಿದೆ. ಇದನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ ಎಂದು ಹೇಳಿದರು.

ಕೇಂದ್ರದ ಬರ ಪರಿಶೀಲನಾ ತಂಡಕ್ಕೆ ಅಧಿಕಾರಿಗಳು ಯಾವುದೇ ತಪ್ಪು ಮಾಹಿತಿ ನೀಡಬಾರದು ಎಂದು ಸಿಎಂ ಎಚ್ಚರಿಕೆ ನೀಡಿದರು. “ಸತ್ಯವನ್ನು ತಿಳಿಸಿ. ಬರ ಪರಿಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿ” ಎಂದು ಸೂಚಿಸಿದರು.

ಬೆಳೆ ವಿಮೆ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಬೇಕು. ರೈತರನ್ನು ದಾರಿ ತಪ್ಪಿಸುವ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬರದಿಂದ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಕಡಿಮೆ ಮಾಡಲು ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕೇಂದ್ರದ ಬರ ಪರಿಶೀಲನಾ ತಂಡಕ್ಕೆ ವಾಸ್ತವ ಪರಿಸ್ಥಿತಿಯ ನಿಖರ ಮಾಹಿತಿಯನ್ನು ಒದಗಿಸಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ ಶೇ.40ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಿದ ಸಿಎಂ, ತಾವು ಭೇಟಿ ನೀಡಿದ ನಾಲ್ಕು ತಾಲೂಕುಗಳಲ್ಲಿ ಬೆಳೆಗಳು ಸರಿಯಾಗಿ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದರು. “ಹೊಲಗಳು ಹಸಿರಾಗಿ ಕಾಣಿಸಿಕೊಳ್ಳಬಹುದು. ಆದರೆ, ಅದರಿಂದ ರೈತರಿಗೆ ಫಸಲು ಬಂದಿದೆ ಎಂದರ್ಥವಲ್ಲ” ಎಂದು ತಿತಳಿಸಿದರು.

ಬೆಳೆ ವಿಮೆಗೆ ಸಂಬಂಧಿಸಿದಂತೆ ಅಕ್ರಮಗಳ ಕುರಿತು ದೂರುಗಳು ಬಂದಿವೆ. ಈ ಬಗ್ಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬಾಗಲಕೋಟೆಯಲ್ಲಿ ಫಸಲ್‌ ಬಿಮಾ ಯೋಜನೆಯಲ್ಲಿ ಸುಮಾರು 30 ಕೋಟಿ ರೂ. ಮೊತ್ತದ ಹಗರಣ ನಡೆದಿದೆ ಎಂಬ ವರದಿಗಳಿವೆ. ಈ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky

ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

Video: 'ಪೊಲೀಸರು ಬುದ್ದಿ ಕಲಿಸಿದ್ದಾರೆ, ತಪ್ಪನ್ನ ಕ್ಷಮಿಸಲ್ಲ'; ಮಗ ಸಾಮ್ರಾಟ್‌ ಬಗ್ಗೆ ಕೊನೆಗೂ ಮೌನ ಮುರಿದ ನಟ Duniya Vijay

‘ಹೂತುಹಾಕಬೇಕು ಎನ್ನುವವರಲ್ಲ ನಾವು’.. ‘ಮಹಿಳೆಯರಿಗೆ ಶಿಕ್ಷಣ, ಅವಕಾಶ ನೀಡುತ್ತಿದ್ದೇವೆ’: ‘ಮನೆಯಲ್ಲೇ ಇರಬೇಕು’ ಹೇಳಿಕೆಗೆ ಮುಸ್ಲಿಂ ಧರ್ಮಗುರು ಸ್ಪಷ್ಟನೆ, Video

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!