ಸಂಗ್ರಹ ಚಿತ್ರ 
ರಾಜ್ಯ

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: ನಗರದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿ; BMTCಗೆ ಉಪ ಲೋಕಾಯುಕ್ತ ಸೂಚನೆ

ಚಾಲಕ ಮತ್ತು ನಿರ್ವಾಹಕರು ಹರಸಾಹಸ ಪಟ್ಟು ಅವರನ್ನು ಆಸ್ಪತ್ರೆಗೆ ಸೇರಿಸಲು ಬರೋಬ್ಬರಿ 30 ನಿಮಿಷಗಳಿಗಿಂತ ಹೆಚ್ಚು ಸಮಯ ವ್ಯರ್ಥವಾಗಿತ್ತು.

ಬೆಂಗಳೂರು: ರಾಜಧಾನಿಯ ಎಲ್ಲಾ ಬಿಎಂಟಿಸಿ (BMTC) ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ತುರ್ತು ಸೇವೆಗಾಗಿ ಅತ್ಯಗತ್ಯ ಪ್ರಥಮ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ತಕ್ಷಣವೇ ಕಲ್ಪಿಸುವಂತೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಬಿಎಂಟಿಸಿಗೆ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ರಾಮಮೂರ್ತಿನಗರದಿಂದ ಶಿವಾಜಿನಗರಕ್ಕೆ ಪ್ರಯಾಣಿಸುತ್ತಿದ್ದ ಹಿರಿಯ ನಾಗರಿಕರೊಬ್ಬರು ಬಸ್ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ತೀವ್ರ ಅಪಸ್ಮಾರದಿಂದ (ಫಿಟ್ಸ್) ಕುಸಿದು ಬಿದ್ದಿದ್ದರು. ಆದರೆ, ನಿಲ್ದಾಣದಲ್ಲಿ ಯಾವುದೇ ಪ್ರಥಮ ಚಿಕಿತ್ಸಾ ಕಿಟ್ ಅಥವಾ ವೈದ್ಯಕೀಯ ನೆರವು ಸಿಗಲಿಲ್ಲ.

ಚಾಲಕ ಮತ್ತು ನಿರ್ವಾಹಕರು ಹರಸಾಹಸ ಪಟ್ಟು ಅವರನ್ನು ಆಸ್ಪತ್ರೆಗೆ ಸೇರಿಸಲು ಬರೋಬ್ಬರಿ 30 ನಿಮಿಷಗಳಿಗಿಂತ ಹೆಚ್ಚು ಸಮಯ ವ್ಯರ್ಥವಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾದ ಈ ಆಘಾತಕಾರಿ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತರು ಸ್ವಯಂಪ್ರೇರಿತ (Suo Motu) ಮೊಕದ್ದಮೆ ದಾಖಲಿಸಿಕೊಂಡು ಈ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಅಕ್ಟೋಬರ್ 12ರೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

ಅಪಸ್ಮಾರದಿಂದ ಬಸ್‌ನಲ್ಲೇ ಕುಸಿದುಬಿದ್ದಿದ್ದ ಹಿರಿಯ ನಾಗರಿಕರಿಗೆ ತಕ್ಷಣ ವೈದ್ಯಕೀಯ ನೆರವು ದೊರೆತಿರಲಿಲ್ಲ. ಅವರನ್ನು ಶಿವಾಜಿನಗರದಿಂದ ಆಸ್ಪತ್ರೆಗೆ ಕರೆದೊಯ್ಯಲು ಕೂಡ ವ್ಯವಸ್ಥೆ ಮಾಡಲಾಗಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚಾಲಕ ಹಾಗೂ ನಿರ್ವಾಹಕರು ಸೇರಿ ಅವರನ್ನು ಬಸ್‌ನಿಂದ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲು ಸುಮಾರು 30 ನಿಮಿಷಗಳು ಬೇಕಾಯಿತು ಎಂದು ತಿಳಿಸಲಾಗಿದೆ.

ಶಾಂತಿನಗರ ಬಸ್ ನಿಲ್ದಾಣ ಹೊರತುಪಡಿಸಿ ಬಿಎಂಟಿಸಿಯ ಯಾವುದೇ ಬಸ್ ನಿಲ್ದಾಣದಲ್ಲೂ ಪ್ರಥಮ ಚಿಕಿತ್ಸಾ ಸೌಲಭ್ಯವಿಲ್ಲ ಎಂಬ ಅಂಶವೂ ವರದಿಯಿಂದ ಬೆಳಕಿಗೆ ಬಂದಿದೆ.

ಬಿಎಂಟಿಸಿ ಅಧಿಕಾರಿಗಳ ಈ ವೈಫಲ್ಯವು ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಿರುವ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ಫಣೀಂದ್ರ ಅಭಿಪ್ರಾಯಪಟ್ಟಿದ್ದಾರೆ.

ಬಿಎಂಟಿಸಿ ಅಧಿಕಾರಿಗಳ ಆಡಳಿತಾತ್ಮಕ ವೈಫಲ್ಯವನ್ನು ಸರಿಪಡಿಸುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಸೆಕ್ಷನ್ 12(1)ರಡಿ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?

ವಿಶ್ವಕಪ್ 2026: ಶಫಾಲಿ ವರ್ಮಾ ಗೆ ಫೆವಿಲಿಯನ್ ಗೆ ಹೋಗು ಎನ್ನುವಂತೆ ಕೈ ಸನ್ನೆ, ಪಾಕ್ ನಾಯಕಿ ವಿರುದ್ಧ ಭಾರತೀಯರ ಆಕ್ರೋಶ, ಟ್ರೋಲ್! Video

Miss World 2026: ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಂಡ ಡೊಮಿನಿಕನ್ ರಿಪಬ್ಲಿಕ್‌ನ ಬ್ಯೂಟಿ! ಭಾರತದ ನಿಕಿತಾ ಪೂರ್ವಾಲ್ ಗೆ ನಿರಾಸೆ