ಆತ್ರೆಯ ಆಯುರ್ವೇದ ವಿದ್ಯಾಲಯ Online Desk
ರಾಜ್ಯ

500 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ! ಸಾಲದ ಸುಳಿಗೆ ಸಿಲುಕಿ ಆಯುರ್ವೇದಿಕ್ ಕಾಲೇಜ್ ಸೀಜ್: ಅತ್ರೇಯ ಆಯುರ್ವೇದ ಕಾಲೇಜು 2 ತಿಂಗಳಿಂದ ಬಂದ್

ತಮ್ಮ ಮಕ್ಕಳು ವೈದ್ಯರಾಗಲಿ ಎಂದು ಅಪ್ಪ-ಅಮ್ಮಂದಿರು ಸಾಲ ಸೋಲ ಮಾಡಿ ವೈದ್ಯಕೀಯ ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ, ಅದೇ ಕಾಲೇಜು ಸಾಲದ ಕಾರಣ ಕಳೆದ ಎರಡು ತಿಂಗಳಿಂದ ಬಂದ್ ಆದರೆ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಕಥೆ ಏನು? ಸಾಲ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಅಪ್ಪ-ಅಮ್ಮನ ಕನಸಿನ ಕಥೆ ಏನು?

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ತಮ್ಮ ಮಕ್ಕಳು ವೈದ್ಯರಾಗಲಿ ಎಂದು ಅಪ್ಪ-ಅಮ್ಮಂದಿರು ಸಾಲ ಸೋಲ ಮಾಡಿ ವೈದ್ಯಕೀಯ ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ, ಅದೇ ಕಾಲೇಜು ಸಾಲದ ಕಾರಣ ಕಳೆದ ಎರಡು ತಿಂಗಳಿಂದ ಬಂದ್ ಆದರೆ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಕಥೆ ಏನು? ಸಾಲ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಅಪ್ಪ-ಅಮ್ಮನ ಕನಸಿನ ಕಥೆ ಏನು? ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಬ್ಯಾಂಕ್ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (ದೇವನಹಳ್ಳಿ ಸಮೀಪ) ದಲ್ಲಿರುವ ಖಾಸಗಿ ಆಯುರ್ವೇದಿಕ್ ಕಾಲೇಜಾದ ಆತ್ರೆಯ ಆಯುರ್ವೇದ ವಿದ್ಯಾಲಯವನ್ನು ಸಿಟಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಎರಡು ತಿಂಗಳಿಂದ ಸೀಜ್ ಮಾಡಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಹಾಗಾದ್ರೆ, ಸೀಜ್ ಮಾಡಲು ಕಾರಣವೇನು?

ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಡಾ. ಪ್ರಶಾಂತ್ ಎಸ್. ಅವರ ನೇತೃತ್ವದ ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಸಂಸ್ಥೆಯು ಸಿಟಿ ಯೂನಿಯನ್ ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಮೊತ್ತವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿರಲಿಲ್ಲ. ಈ ಕಾರಣದಿಂದಾಗಿ ಬ್ಯಾಂಕ್ SARFAESI ಕಾಯ್ದೆಯಡಿ ನೋಟಿಸ್ ಜಾರಿ ಮಾಡಿ, ನ್ಯಾಯಾಲಯದ ಅನುಮತಿಯೊಂದಿಗೆ ಕಾಲೇಜು ಸ್ವತ್ತನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ಆದರೆ, ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಗಳು ಬ್ಯಾಂಕ್‌ನ ಈ ಕ್ರಮದ ವಿರುದ್ಧ ಈಗಾಗಲೇ ಕರ್ನಾಟಕ ಹೈಕೋರ್ಟ್ ಹಾಗೂ ಸಾಲ ವಸೂಲಾತಿ ನ್ಯಾಯಾಧೀಕರಣ ಮೊರೆ ಹೋಗಿದ್ದು, ಕಾನೂನು ಹೋರಾಟ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಅದರಲ್ಲೂ, ಯಾವುದೇ ಮುನ್ಸೂಚನೆ ನೀಡದೆ ಸಂಸ್ಥೆಗೆ ಬೀಗ ಹಾಕಿರುವುದರಿಂದ ಇಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ತೀವ್ರ ಆತಂಕಕ್ಕೆ ಸಿಲುಕಿದೆ. ತರಗತಿಗಳು ನಡೆಯದೆ, ಪರೀಕ್ಷೆಗಳೂ ಇಲ್ಲದೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಂಗಾಲಾಗಿದ್ದಾರೆ.

ಮುಂದುವರೆದು, ಪ್ರವೇಶಾತಿ ಸಮಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಬರೋಬ್ಬರಿ 4.5 ಲಕ್ಷ ರೂಪಾಯಿ ಶುಲ್ಕ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಆಡಳಿತ ಮಂಡಳಿ ಮೇಲೆ ಕೇಳಿಬಂದಿದೆ. ಇಷ್ಟೊಂದು ಭಾರಿ ಮೊತ್ತ ಪಡೆದ ಹೊರತಾಗಿಯೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಹಾಗೂ ನಿಯಮಾನುಸಾರ ಅನುಮತಿ ಇಲ್ಲದೆ ಕಾಲೇಜು ನಡೆಸಲಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ–ಚೀನಾ ಸಂಬಂಧ; ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?

BRICS ಶೃಂಗಸಭೆ: ದೆಹಲಿಗೆ ಆಗಮಿಸಿದ Vladimir Putin; ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ, ಭಾರತ-ರಷ್ಯಾ ಸ್ನೇಹಕ್ಕೆ ಮತ್ತಷ್ಟು ಬಲ..!

'Brand Bengaluru'ಯೋಜನೆಗೆ ಬಿಗ್ ಬೂಸ್ಟ್: ಸಿಲಿಕಾನ್ ಸಿಟಿ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡಲು GBA ಮಾಸ್ಟರ್ ಪ್ಲ್ಯಾನ್!

ಮಧು ಬಂಗಾರಪ್ಪ ದಿನಕ್ಕೊಂದು ಶೂ ಹಾಕ್ತಾರೆ, ಶಾಲಾ ಮಕ್ಕಳಿಗೆ ಕಿತ್ತೋಗಿರೋ ಶೂ ಕೊಡ್ತಾರೆ; ಚಿಂದಿ ಆಯುವವರು ಕೂಡ ಅದನ್ನು ತಗೊಳ್ಳಲ್ಲ- ಶ್ರೀರಾಮುಲು

Lalbaghಗೆ ತಪ್ಪಿದ ಗಂಡಾಂತರ: ನಾಗರಿಕರ ಆಕ್ರೋಶಕ್ಕೆ ಮಣಿದ ಸರ್ಕಾರ; ಸುರಂಗ ರಸ್ತೆ ಮಾರ್ಗ ಬದಲಾವಣೆಗೆ ಮುಂದು..!