ಗರ್ಭಿಣಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ (ಸಾಂದರ್ಭಿಕ ಚಿತ್ರ) 
ರಾಜ್ಯ

ಟ್ರ್ಯಾಕ್ಟರ್‌ ಸಾಲ, ವರದಕ್ಷಿಣೆ ಕಿರುಕುಳ ಆರೋಪ; 10 ತಿಂಗಳ ಮದುವೆ, 5 ತಿಂಗಳ ಗರ್ಭಿಣಿ ದುರಂತ ಅಂತ್ಯ!

ಮುನಿಲಕ್ಷ್ಮಿ ಅವರ ತಾಯಿ ಬೈರಮ್ಮ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶಂಕರಯ್ಯ, ಅವರ ತಾಯಿ ಭಾಗ್ಯಮ್ಮ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು: ಮದುವೆಯಾಗಿ ಕೇವಲ 10 ತಿಂಗಳಿಗೇ 5 ತಿಂಗಳ ಗರ್ಭಿಣಿ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ರಾಮನಗರದಲ್ಲಿ ನಡೆದಿದೆ.

ಐದು ತಿಂಗಳ ಗರ್ಭಿಣಿಯಾಗಿದ್ದ 19 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಕೆಂಪಯ್ಯನದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮೃತ ಮಹಿಳೆಯನ್ನು ಮುನಿಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಅವರು 10 ತಿಂಗಳ ಹಿಂದೆ ಶಂಕರಯ್ಯ ಎಂಬುವವರನ್ನು ವಿವಾಹವಾಗಿದ್ದರು. ಮುನಿಲಕ್ಷ್ಮಿ ಅವರ ತಾಯಿ ಬೈರಮ್ಮ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶಂಕರಯ್ಯ, ಅವರ ತಾಯಿ ಭಾಗ್ಯಮ್ಮ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ, ತನ್ನ ಮಗಳಿಗೆ ಆಕೆಯ ಪತಿ ಹಾಗೂ ಅತ್ತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಬೈರಮ್ಮ ಆರೋಪಿಸಿದ್ದಾರೆ. ಟ್ರ್ಯಾಕ್ಟರ್‌ ಸಾಲ ತೀರಿಸಲು 1 ಲಕ್ಷ ಹಣ ತರುವಂತೆ ಶಂಕರಯ್ಯ ಹಾಗೂ ಭಾಗ್ಯಮ್ಮ ಒತ್ತಡ ಹೇರಿದ್ದರು. ಹಣ ನೀಡದಿದ್ದಕ್ಕಾಗಿ ಮುನಿಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಗಳಿಗಾಗಿ ಆಕೆಯ ಪೋಷಕರು 50 ಸಾವಿರ ರೂ ಸಾಲ ಮಾಡಿ ನೀಡಿದ್ದರು. ಬಳಿಕ ಉಳಿದ ಹಣ ಹೊಂದಿಸಲು ಜಾನುವಾರುಗಳನ್ನು ಮಾರಿ ಒಟ್ಟು 1 ಲಕ್ಷ ರೂ ನೀಡಿದ್ದರು ಎನ್ನಲಾಗಿದೆ. ಆದರೆ, ಸೋಮವಾರ ಮುನಿಲಕ್ಷ್ಮಿ ಅವರು ಪತಿಯ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ವರದಕ್ಷಿಣೆ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಗ್ಲೋಬಲ್ ಸೌತ್' ನಿಯಮ-ರೂಪಿಸುವ ಶಕ್ತಿಯಾಗಬೇಕು, ಅದರ ನೇತೃತ್ವ ವಹಿಸಲು ಭಾರತ ಸಿದ್ಧ": BRICS ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಗಂಡನ ಕೊಲೆ; ಮುಖ, ಮರ್ಮಾಂಗಕ್ಕೆ ಗಾಯ, ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ!

BRICS 'ನವದೆಹಲಿ ಘೋಷಣೆ 2026' ಗೆ ಸರ್ವಾನುಮತದ ಅಂಗೀಕಾರ: ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಪ್ರಗತಿ

'ಹಿಂಸೆ ಅಥವಾ ಗ್ಲಾಮರ್‌ಗೆ ಸೀಮಿತವಾಗಿಲ್ಲ, ವಯಸ್ಕರಿಗಾಗಿ ಮಾಡಿದ ವಿಭಿನ್ನ ಕಥೆ'; ಯಶ್ ರ Toxic ಕುರಿತು ಟೀಕಾಕಾರರಿಗೆ ಬಟ್ಟೆ ಸುತ್ತಿ ಹೊಡೆದ ಹಾಲಿವುಡ್ ನಟ!

ನೀವೂ 80s ಟ್ರೆಂಡ್ ಫೋಟೋ ಹಾಕಿದ್ದೀರಾ?: ನಿಮ್ಮ ಜುಟ್ಟು ಈಗ AI ಕೈಲಿ! ಭವಿಷ್ಯದಲ್ಲಿ ನಿಮಗೆ ಎದುರಾಗಲಿದೆ ಈ ಸಮಸ್ಯೆ...