ಬೆಂಗಳೂರು: ಅನೈತಿಕ ಸಂಬಂಧಕ್ಕೆ ಗಂಡನ ಕೊಲೆ; ಮುಖ, ಮರ್ಮಾಂಗಕ್ಕೆ ಗಾಯ, ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ!

ಬಿದರಹಳ್ಳಿಯ ಕಿತ್ತಗನೂರು ಮುಖ್ಯ ರಸ್ತೆಯಲ್ಲಿರುವ ಮನೆಯೊಂದರಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಪತ್ತೆಯಾಗಿದ್ದಾರೆ. ಮೃನತ ಮುಖ ಮತ್ತು ವೃಷಣಗಳ ಮೇಲೆ ಗಾಯಗಳಾಗಿದೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
Updated on

ಬೆಂಗಳೂರು: ಬಿದರಹಳ್ಳಿಯ ಕಿತ್ತಗನೂರು ಮುಖ್ಯ ರಸ್ತೆಯಲ್ಲಿರುವ ಮನೆಯೊಂದರಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಪತ್ತೆಯಾಗಿದ್ದಾರೆ. ಮೃನತ ಮುಖ ಮತ್ತು ವೃಷಣಗಳ ಮೇಲೆ ಗಾಯಗಳಿದ್ದು, ಉಸಿರುಗಟ್ಟಿದ ಲಕ್ಷಣಗಳು ಕಂಡುಬಂದಿರುವುದರಿಂದ ಪೊಲೀಸರು ಇದನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ಮೃತನನ್ನು 40 ವರ್ಷದ ಮುಬಾರಕ್ ಬಾಷಾ ಎಂದು ಗುರುತಿಸಲಾಗಿದೆ. ಪತ್ನಿ ಶಾಹಿನಾಳ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ದಂಪತಿಗಳ ನಡುವೆ ಆಗಾಗ್ಗೆ ಜಗಳಗಳಾಗುತ್ತಿದ್ದವು. ತಮಿಳುನಾಡಿನ ಕೃಷ್ಣಗಿರಿಯ ನಿವಾಸಿಯಾಗಿರುವ ಮುಬಾರಕ್ ಸಹೋದರ ಶಾಹುಲ್ ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 9 ರಂದು ರಾತ್ರಿ 1 ಗಂಟೆ ಸುಮಾರಿಗೆ ಕುಟುಂಬಕ್ಕೆ ಸಾವಿನ ವಿಷಯ ತಿಳಿಸಲಾಯಿತು. ಮುಬಾರಕ್ ಸ್ನಾನಗೃಹದಲ್ಲಿ ಮೃತಪಟ್ಟಿದ್ದಾರೆ ಎಂದು ಶಾಹಿನಾ ತಿಳಿಸಿದ್ದರು.

ಶಾಹುಲ್ ಮತ್ತು ಕುಟುಂಬದ ಇತರ ಸದಸ್ಯರು ಬೆಂಗಳೂರಿಗೆ ಆಗಮಿಸಿ ಮೃತದೇಹವನ್ನು ನೋಡಲು ಬಯಸಿದ್ದರು. ಆದರೆ ಇದಕ್ಕೆ ಶಾಹಿನಾ ನಿರಾಕರಿಸಿದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಾಹುಲ್ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಮುಬಾರಕ್ ಅವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಶಾಹುಲ್ ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ, ವೈದ್ಯರು ಮುಬಾರಕ್ ಅವರ ಮೂಗಿನ ಕೆಳಗೆ ಗೀಚಿದ ಗುರುತು, ಗಲ್ಲದ ಮೇಲೆ ಗಾಯಗಳು ಮತ್ತು ಮೂಗಿನ ಮೇಲ್ಭಾಗದಲ್ಲಿ ಗಾಯವೊಂದನ್ನು ಗಮನಿಸಿದರು. ಉಸಿರುಗಟ್ಟುವಿಕೆಯಿಂದ ಮುಬಾರಕ್ ಮೃತಪಟ್ಟಿದ್ದಾರೆ ಮತ್ತು ಅವರ ವೃಷಣಗಳಿಗೆ ಗಾಯವಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಬಂಧಿತ್ತು.

ಶಾಹಿನಾ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ನಹೀಮ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದರು ಎಂದು ಶಾಹುಲ್ ಆರೋಪಿಸಿದರು. ಸೆಪ್ಟೆಂಬರ್ 9ರ ರಾತ್ರಿ ಮುಬಾರಕ್‌ಗೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟ ನಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com