ವಿಪಕ್ಷ ನಾಯಕ ಆರ್ ಅಶೋಕ್ 
ರಾಜ್ಯ

ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರ್ತೀನಿ: ಹಿಂದೂಗಳ ತಂಟೆಗೆ ಹೋದರೆ ಹುಷಾರ್: ಸರ್ಕಾರಕ್ಕೆ ಅಶೋಕ್ ವಾರ್ನಿಂಗ್

ಗಣಪತಿ ಹಬ್ಬಕ್ಕೆ ಟಿ. ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಹಲವು ನಿರ್ಬಂಧಗಳನ್ನು ಹಾಕಿರುವುದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದು ಹಿಂದೂಗಳ ತಂಟೆಗೆ ಹೋದರೆ ಹುಷಾರ್. ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಗಣಪತಿ ಹಬ್ಬಕ್ಕೆ ಟಿ. ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಹಲವು ನಿರ್ಬಂಧಗಳನ್ನು ಹಾಕಿರುವುದಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದು ಹಿಂದೂಗಳ ತಂಟೆಗೆ ಹೋದರೆ ಹುಷಾರ್. ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನೆಮ್ಮದಿಯಿಂದ ಗಣೇಶೋತ್ಸವ ಮಾಡಲೂ ಬಿಡ್ತಿಲ್ಲ. ಇಡೀ ರಾಜ್ಯಾದ್ಯಂತ ಸರ್ಕಾರದಿಂದ ಕಿರುಕುಳ ನಡೆಯುತ್ತಿದೆ. ಇನ್ಸ್​​ಪೆಕ್ಟರ್​ ಧನಂಜಯ್ ಹೀಗೆ ಮಾತನಾಡಿದ್ದಾರೆ ಎಂದರೆ ಇದರ ಹಿಂದೆ ದೊಡ್ಡ ಷಢ್ಯಂತ್ರ ಇದೆ. ಸರ್ಕಾರದ ಕುಮ್ಮಕ್ಕಿದೆ. ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಎಂದು ವಾಗ್ದಾಳಿ ನಡೆಸಿದರು.

ಟಿ. ನರಸೀಪುರದಲ್ಲಿ ಇನ್ಸ್​​ಪೆಕ್ಟರ್​ ಧನಂಜಯ್ ದುರಹಂಕಾರದಿಂದ ಮಾತನಾಡಿದ್ದಾರೆ. ಮಸೀದಿ ಮುಂದೆ ಮೆರಣಿಗೆ ಮಾಡುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ ಅಂದಿದ್ದಾರೆ. ನೀವೇನು ರೌಡಿನಾ ಗ್ರಹಚಾರ ಬಿಡಿಸೋಕೆ ಅಥವಾ ಮೆರವಣಿಗೆ ಮಾಡೋರು ರೌಡಿಗಳಾ ಎಂದು ಪ್ರಶ್ನಿಸಿದರು. ಡಿಕೆ ಶಿವಕುಮಾರ್ ಚುನಾವಣೆ ಬಂದ ತಕ್ಷಣ ದೇವಸ್ಥಾನಗಳಿಗೆ ಹೋಗ್ತಾರೆ, ಕುಂಕುಮ ಹಾಕ್ತಾರೆ, ನದೀಲಿ ಮುಳುಗ್ತಾರೆ. ನಾನೂ ದೊಡ್ಡ ಹಿಂದೂ ಅಂತ ಬಿಂಬಿಸಿಕೊಳ್ತಾರೆ. ಇದೇನಾ ನಿಮ್ಮ ಹಿಂದೂ ಕಾಳಜಿ? ಭಕ್ತಾದಿಗಳಿಗೆ ಧಮಕಿ ಹಾಕೋದೇ ಕರ್ನಾಟಕ ಮಾಡೆಲ್ಲಾ? ಚುನಾವಣೆ ಬಂದಾಗ ಮಾತ್ರ ಕಪಟ ಹಿಂದುತ್ವ ತೋರುತ್ತೀರಾ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ ಭೀತಿ: ಏಕಾಏಕಿ ವಾಲಿದ ನಾಲ್ಕಂತಸ್ತಿನ ಕಟ್ಟಡ, ನೆಲಸಮಗೊಳಿಸಲು MCD ಸೂಚನೆ

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

BRICS summit 2026: ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣ ವಿರುದ್ಧ ಪ್ರಧಾನಿ ವಿರುದ್ಧ ಮೋದಿ ಎಚ್ಚರಿಕೆ! Video

‘ಹೂಡಿಕೆ ತರಲು ಹೋಗಿದ್ದಾರೋ?, ಸ್ನೇಹಿತನ Race ನೋಡಲು ಹೋಗಿದ್ದಾರೋ?’.. ವಿಜಯ್‌ಗೆ DMK ಪ್ರಶ್ನೆ, 'ತಪ್ಪೇನು?' TVK ಖಡಕ್ ತಿರುಗೇಟು

ಶೀಘ್ರದಲ್ಲೇ ಶಾಲೆಗಳ ಟೈಮ್ ಬದಲು? ಟ್ರಾಫಿಕ್ ಕಿರಿಕಿರಿ ತಪ್ಪಿಸಲು ವೇಳಾಪಟ್ಟಿ ಬದಲಾವಣೆಗೆ ಸರ್ಕಾರದ ಚಿಂತನೆ