ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಪಲ್ಟಿಯಾದ ಲಾರಿ Online Desk
ರಾಜ್ಯ

ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಪಲ್ಟಿಯಾದ ಲಾರಿ; ರಸ್ತೆ ತುಂಬಾ ಈರುಳ್ಳಿ ಬೆಳ್ಳುಳ್ಳಿ ರಾಶಿ! ಕಳ್ಳರ ಭಯಕ್ಕೆ ಕಾವಲಿಗೆ ನಿಂತ ಖಾಕಿ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಲಾರಿ ಪಲ್ಟಿಯಾದ ಪರಿಣಾಮ ರಸ್ತೆಯ ತುಂಬಾ ಈರುಳ್ಳಿ, ಬೆಳ್ಳುಳ್ಳಿ ರಾಶಿ ರಾಶಿಯಾಗಿ ಹರಡಿದ್ದು, ಅವುಗಳನ್ನು ಯಾರೂ ಕೊಂಡೊಯ್ಯದಂತೆ ಲಾಠಿ ಹಿಡಿದು ಕಾಯುತ್ತಿದ್ದ ಪೊಲೀಸರು ಎಲ್ಲರ ಗಮನ ಸೆಳೆದರು. ಆ ಕುರಿತ ವರದಿ ಇಲ್ಲಿದೆ:

ಕೆಜಿಎಫ್‌ (ಕೋಲಾರ): ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಭಾನುವಾರ ಬೆಳ್ಳಂಬೆಳಿಗ್ಗೆ ಅಚ್ಚರಿಯ ದೃಶ್ಯವೊಂದು ಎದುರಾಯಿತು. ಅದುವೇ, ರಸ್ತೆಯ ತುಂಬಾ ರಾಶಿ ರಾಶಿಯಾಗಿ ಹರಡಿದ್ದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಅವುಗಳನ್ನು ಯಾರೂ ಕೊಂಡೊಯ್ಯದಂತೆ ಲಾಠಿ ಹಿಡಿದು ಕಾಯುತ್ತಿದ್ದ ಪೊಲೀಸರು ಎಲ್ಲರ ಗಮನ ಸೆಳೆದರು. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ಹಾದುಹೋಗುವ ಚೆನ್ನೈ - ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ, ಬೆಂಗಳೂರಿನಿಂದ ಆಂಧ್ರಪ್ರದೇಶದ ಚಿತ್ತೂರಿಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಲೋಡ್ ಮಾಡಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಇನ್ನು, ಲಾರಿ ಮಗುಚಿ ಬಿದ್ದ ರಭಸಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ರಸ್ತೆಯುದ್ದಕ್ಕೂ ಸಂಪೂರ್ಣವಾಗಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡವು,  ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಲಾರಿಯ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಏತನ್ಮಧ್ಯೆ, ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ದುಬಾರಿಯಾಗಿರುವುದರಿಂದ, ರಸ್ತೆಯಲ್ಲಿ ಬಿದ್ದ ಸರಕನ್ನು ಸಾರ್ವಜನಿಕರು ಹಾಗೂ ಸ್ಥಳೀಯರು ಲೂಟಿ ಮಾಡಬಹುದು ಎಂಬ ಭೀತಿಯಿತ್ತು. ಈ ಕಾರಣಕ್ಕಾಗಿ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಬೇತಮಂಗಲ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದು, ಸರಕು ಕಳ್ಳತನವಾಗದಂತೆ ಕಾವಲು ನಿಂತರು. ಆದರೆ, ಎಕ್ಸ್‌ಪ್ರೆಸ್‌ವೇ ಮಧ್ಯದಲ್ಲೇ ಲಾರಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಹಾಗಾಗಿ, ಪೊಲೀಸರು ಕಾವಲು ಕಾಯುವುದರ ಜೊತೆಗೆ ಕ್ರೇನ್ ಬಳಸಿ ಲಾರಿಯನ್ನು ಪಕ್ಕಕ್ಕೆ ಸರಿಸಿ, ರಸ್ತೆಯನ್ನು ಸ್ವಚ್ಛಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಅಷ್ಟೇ ಅಲ್ಲ, ಭಾರತಕ್ಕೂ ಕಾದಿತ್ತು ಕಂಟಕ: 9/11 ರಕ್ತಚರಿತ್ರೆಗೂ ಮುನ್ನ INDIA ಮೇಲಿತ್ತು ಲಾಡೆನ್ ಕಣ್ಣು: 25 ವರ್ಷಗಳ ಬಳಿಕ ಕರಾಳ ರಹಸ್ಯ ಬಯಲು..!

ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!

ಪ್ರಧಾನಿ ಮೋದಿ ಆಯೋಜಿಸಿದ್ದ BRICS ಗಾಲಾ ಡಿನ್ನರ್‌ಗೆ ಚೀನಾ ಅಧ್ಯಕ್ಷ Xi Jinping ಗೈರು: ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ..!

ಅಮೆರಿಕಾ ಸರ್ವಾಧಿಕಾರತ್ವ-ಆರ್ಥಿಕ ನಿರ್ಬಂಧಗಳಿಗೆ ಅಂತ್ಯ ಹಾಡಲು 'BRICS' ಒಕ್ಕೂಟ ಸ್ಥಾಪನೆ: Iran

ಮತ್ತೆ ಒಟ್ಟಾಗಿ ಕಾಣಿಸಿಕೊಂಡ ಸಿಎಂ ವಿಜಯ್, ತ್ರಿಶಾ ಕೃಷ್ಣನ್! ದಳಪತಿ ಫ್ಯಾನ್ಸ್ ಫುಲ್ ಖುಷ್, Video