ಜಮೀನಿನಲ್ಲಿ ರೈತರೊಬ್ಬರು ಹುಲ್ಲು ಕೊಯ್ಯುವಾಗ ಹುಲಿಯೊಂದು ಏಕಾಏಕಿ ಹುಲಿ ಮಾಡಿ ಕೊಂದು ಹಾಕಿರುವ ಘಟನೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು 60 ವರ್ಷದ ಬಸವಣ್ಣ ಎಂದು ಗುರುತಿಸಲಾಗಿದೆ. ಇನ್ನು ಹುಲಿ ಬಸವಣ್ಣನವರ ದೇಹದ ಕಾಲು ಭಾಗವನ್ನು ಹುಲಿ ತಿಂದು ಹಾಕಿದೆ. ಹುಲಿ ದಾಳಿಯಿಂದ ಬಡಗಲಪುರ ಸುತ್ತಲಿನ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಹುಲ್ಲು ಕೊಯ್ಯಲು ಜಮೀನಿಗೆ ತೆರಳಿದ್ದ ಬಸವಣ್ಣ ಕತ್ತಲಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕುತ್ತಾ ಜಮೀನಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಕುಟುಂಬಸ್ಥರು ಜಮೀನಿನಲ್ಲೇ ಶವದ ಬಳಿ ಕುಳಿತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ. ಬಿಳಿಗಿರಿ ಹುಲಿ ಸಂರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಆತಂಕದಲ್ಲಿಯೇ ಮೃತನ ಕುಟುಂಬದವರು ಮತ್ತು ಗ್ರಾಮಸ್ಥರು ಕಾಲ ಕಳೆಯುತ್ತಿದ್ದಾರೆ.