ಬಿ ಕೆ ಹರಿಪ್ರಸಾದ್, ಸಿ ಟಿ ರವಿ  
ರಾಜ್ಯ

ರಾಹುಲ್ ಗಾಂಧಿ ಮನಸ್ಸಿನಲ್ಲಿ ‘ಭಾರತ್ ಜೋಡೋ’ ಬದಲು ‘ಭಾರತ್ ತೋಡೋ’ ಇರಬಹುದು; ಹರಿಪ್ರಸಾದ್ ಹೇಳಿಕೆ ರಾಷ್ಟ್ರಘಾತುಕ: ಸಿ.ಟಿ ರವಿ; Video

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಉಮರ್ ಖಾಲಿದ್ ಅವರನ್ನು ಬೆಂಬಲಿಸಿ, ಅವರನ್ನು ‘ರಾಷ್ಟ್ರವಾದಿ’ ಎಂದು ಕರೆದಿರುವ ಬೆನ್ನಲ್ಲೇ ಸಿ.ಟಿ. ರವಿ ಈ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ನಾಯಕರು ಭಾರತವನ್ನು ವಿಭಜಿಸಲು ಬಯಸುವವರನ್ನು ಬೆಂಬಲಿಸುತ್ತಿದ್ದು, ದೇಶಭಕ್ತರನ್ನು ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಆರೋಪಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಉಮರ್ ಖಾಲಿದ್ ಅವರನ್ನು ಬೆಂಬಲಿಸಿ, ಅವರನ್ನು ‘ರಾಷ್ಟ್ರವಾದಿ’ ಎಂದು ಕರೆದಿರುವ ಬೆನ್ನಲ್ಲೇ ಸಿ.ಟಿ. ರವಿ ಈ ಹೇಳಿಕೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ’ ಯಾತ್ರೆಯ ಉದ್ದೇಶವನ್ನು ಪ್ರಶ್ನಿಸಿದ ಅವರು, “ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿ ‘ಭಾರತ್ ಜೋಡೋ’ ಬದಲು ‘ಭಾರತ್ ತೋಡೋ’ ಇರಬಹುದು ಎಂದು ನನಗನಿಸುತ್ತದೆ” ಎಂದು ಹೇಳಿದರು.

ಕಾಂಗ್ರೆಸ್ ನವರದ್ದು ಬೌದ್ಧಿಕ ದಿವಾಳಿತನ ಮಾತ್ರ ಅಲ್ಲ, ರಾಷ್ಟ್ರ ಘಾತುಕ ಹೇಳಿಕೆ, ರಾಷ್ಟ್ರ ಭಕ್ತರನ್ನು ಅಪಮಾನಿಸುವ ಹೇಳಿಕೆಯಾಗಿದೆ. ಬಿ.ಕೆ. ಹರಿಪ್ರಸಾದ್ ಅವರು ರಾಜಕೀಯ ವಿರೋಧಿ ಅಂದುಕೊಂಡಿದ್ದೆ. ಅವರು ರಾಷ್ಟ್ರ ವಿರೋಧಿ ಅಂತ ತಿಳಿದುಕೊಂಡಿರಲಿಲ್ಲ. ದೇಶ್ ತೇರೇ ತುಕ್ಡೆ ಹೋಂಗೆ ಎಂದಂತವನನ್ನು ರಾಷ್ಟ್ರೀಯವಾದಿ ಅಂದಿದ್ದು ಅಚ್ಚರಿ ಮಾತ್ರ ತಂದಿಲ್ಲ, ಬಹಳ ಆಘಾತ ತಂದಿದೆ.‌ ಅವನು ಯಾವ ರಾಷ್ಟ್ರಕ್ಕೆ ರಾಷ್ಟ್ರೀಯವಾದಿ? ಭಾರತವನ್ನು ವಿಭಜಿಸಿ, ತುಂಡು, ತುಂಡಾಗಿ ಮಾಡುವುದು ಕಾಂಗ್ರೆಸ್​ನ ಅಜೆಂಡಾ ಅನ್ನೋದು ಇದರಿಂದ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಕಸಬ್​ನನ್ನೂ ಹುತಾತ್ಮ ಅಂತ ಕರೆದರೆ, ಜೈಶ್​ ಎ ಮೊಹಮ್ಮದ್ ಸಂಘಟನೆಯವನನ್ನೂ ಹುತಾತ್ಮ ಅಂತ ಕರೆದರೆ ಹೇಗೆ ಅಪಹಾಸ್ಯಕ್ಕೆ ಒಳಗಾಗುತ್ತೀರೋ ಹಾಗೇ ನೀವು ಅಪಹಾಸ್ಯಕ್ಕೆ ಒಳಗಾಗುತ್ತೀರಿ. ಮೈ ಮರೆಯುವ ಪರಿಣಾಮವಾಗಿ, ಮತ ಬ್ಯಾಂಕ್​ನ ಪರಿಣಾಮವಾಗಿ ಹೇಳಿಕೆ ಕೊಟ್ಟರೆ ನೀವು ಕಾಂಗ್ರೆಸ್​ಗೇ ಮಾಡಿದ ಅಪಮಾನವಾಗುತ್ತದೆ. ನಿಮ್ಮ ಹೇಳಿಕೆ ದೇಶಕ್ಕಾಗಿ ಹೋರಾಡಿದವರಿಗೆ ಮಾಡಿದ ಅಪಮಾನವಾಗಿದೆ ಎಂದು ಸಿ ಟಿ ರವಿ ಕಿಡಿಕಾರಿದರು.

ನಿಮ್ಮ‌ ಹೇಳಿಕೆ ರಾಹುಲ್ ಗಾಂಧಿ ಹೇಳಿಕೆನಾ? ಸೋನಿಯಾ ಗಾಂಧಿ ಹೇಳಿಕೆನಾ?, ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆನಾ? ಇದು ಕಾಂಗ್ರೆಸ್​ನ ಹೇಳಿಕೆನಾ? ಎಂಬುದನ್ನು ಸ್ಪಷ್ಟಪಡಿಸಿ. ನಿಮ್ಮ ಹೇಳಿಕೆ ಭಾರತ್ ಜೋಡೋ ಅಲ್ಲ, ಭಾರತ ತೋಡೋ ಆಗಿದೆ. ಇಂಥ ಮನಸ್ಥಿತಿಯವರಿಗೆ ಅಜ್ಮಲ್ ಕಸಬ್ ಕೂಡಾ ದೇಶಭಕ್ತನಂತೆ ಕಾಣ್ತಾನೆ ಎಂದು ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅತಿದೊಡ್ಡ ಲೋಕಾಯುಕ್ತ ದಾಳಿ: ಭೂ ದಾಖಲೆ ತಿದ್ದುಪಡಿಗೆ ಬರೋಬ್ಬರಿ 50 ಲಕ್ಷ ರೂ.ಲಂಚ; ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರ್!

ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)

ಅಮೆರಿಕಾ ಸುಂಕದ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ, ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEA

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಜಕೀಯ ನಾಯಕರಿಂದ ಶುಭಾಶಯ, ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣನೆ..!

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ, ಮುಂದುವರೆದ ಕಾರ್ಯಾಚರಣೆ..!