ಪೊಲೀಸ್ ಠಾಣೆ ಎದುರು ಜಮಾಯಿಸಿದ ಪ್ರತಿಭಟನಾಕಾರರು 
ರಾಜ್ಯ

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ-ಮದರಸಾ ಮೇಲೆ ಕಲ್ಲು ತೂರಾಟ: ಬಿಗುವಿನ ವಾತಾವರಣ, ಪೊಲೀಸ್ ಬಂದೋಬಸ್ತ್! Video

ಮಸೀದಿಯತ್ತ ಕಲ್ಲು ತೂರಿದ ಕಿಡಿಗೇಡಿಗಳು ಕಿಟಕಿ ಗಾಜುಗಳು ಒಡೆದಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಯುವಕರ ಗುಂಪು ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದೆ.

ಕಾರವಾರ: ಭಟ್ಕಳ: ತಾಲ್ಲೂಕಿನ ತಲಾಂದ ಸಾರ್ವಜನಿಕ ಗಣೆಶೋತ್ಸ ವಿಸರ್ಜನೆ ಮೆರವಣಿಗೆ ಸಾಗುವ ವೇಳೆ ಬುಧವಾರ ತಡ ರಾತ್ರಿ ಮಾರ್ಗ ಮಧ್ಯೆ ಗುಳ್ಮಿಯ ಇಸ್ಮಾಯಿಲ್ ಮಸೀದಿ ಎದುರು ಕಲ್ಲು ತೂರಾಟ ನಡೆದಿದೆ.

ತಲಾಂದದಿಂದ ಹೊರಟ ಮೆರವಣಿಗೆಯು ಗುಳ್ಳೆ ರೈಲ್ವೆ ಬ್ರಿಡ್ಜ್ ದಾಟಿ ರೈಲ್ವೆ ಸ್ಟೇಷನ್ ರಸ್ತೆಯ ಮೂಲಕ ಸಾಗುತ್ತಿದ್ದಾಗ, ಮಾರ್ಗಮಧ್ಯದಲ್ಲಿದ್ದ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ತಾಜುಸುನ್ನಾ ಅರೇಬಿಕ್ ಮದರಸಾದ ಮೇಲೆ ಅಪರಿಚಿತರು ಕಲ್ಲುಗಳನ್ನು ತೂರಿದ್ದಾರೆ.

ಮಸೀದಿಯತ್ತ ಕಲ್ಲು ತೂರಿದ ಕಿಡಿಗೇಡಿಗಳು ಕಿಟಕಿ ಗಾಜುಗಳು ಒಡೆದಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಯುವಕರ ಗುಂಪು ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದೆ. ಉದ್ದೇಶಪೂರ್ವಕವಾಗಿ ಶಾಂತಿ ಕದಡುವ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ಕಲ್ಲು ತೂರಾಟದ ಸುದ್ದಿ ಹರಡುತ್ತಿದ್ದಂತೆಯೇ ಮುಸ್ಲಿಂ ಸಮುದಾಯದ ನೂರಾರು ಜನರು ಭಟ್ಕಳ ನಗರ ಪೊಲೀಸ್ ಠಾಣೆಯ ಎದುರು ಜಮಾಯಿಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಬಂದರು ರಸ್ತೆ ನಿವಾಸಿ ಅಬ್ದುಲ್ ಅಲಿಂ ಹಾಗೂ ಶಾಹುಲ್ ಅಮೀನ್ ಗವಾಯಿ ಅವರು ನೀಡಿದ ದೂರಿನನ್ವಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಗಂಭೀರತೆ ಅರಿತು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೈತರು-ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಅಂತ್ಯ: ಪ್ರತಿ ಟನ್‌ ಕಬ್ಬಿಗೆ 3600 ರೂ. ದರ ನಿಗದಿ- ಸಚಿವ ಸತೀಶ್‌ ಜಾರಕಿಹೊಳಿ

"ಗೃಹಲಕ್ಷ್ಮಿ"ಯರಿಗೆ ಸರ್ಕಾರದಿಂದ ದೀಪಾವಳಿ ಬಂಪರ್ ಗಿಫ್ಟ್: 3 ಕಂತಿನ ಹಣ ಒಂದೇ ಬಾರಿ ಬಿಡುಗಡೆ!

'ನೀವು ರಾಂಗ್ ನಂಬರ್ ಡಯಲ್ ಮಾಡಿದ್ದೀರಿ; ಇದು ಧರಣಿ, ಪ್ರತಿಭಟನೆಯ ಕಾಲ, ಅದನ್ನೇ ಮಾಡಿ': SC, ST ಕ್ಷೇತ್ರಗಳ ರೊಟೇಷನ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಬಿಜೆಪಿ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯೇ? ಊಹಿಸಲೂ ಅಸಾಧ್ಯ ಎಂದ ಹೈಕೋರ್ಟ್, ಕಾರ್ಯಕರ್ತನ ಮೇಲಿನ FIR ರದ್ದು

ಪತ್ನಿಗೆ ಕೈಕೊಟ್ಟಾಗ ಧನಶ್ರೀ ಗರ್ಭೀಣಿ?: ಯುಜ್ವೇಂದ್ರ ಚಹಾಲ್ ಮಾಜಿ ಗೆಳತಿ ಆರ್‌ಜೆ ಮಹ್ವಾಶ್ ಸ್ಫೋಟಕ ಹೇಳಿಕೆ!