ನೀತಿ ಆಯೋಗ  
ರಾಜ್ಯ

ಕರ್ನಾಟಕದಲ್ಲಿ ಇವಿ ಕ್ರಾಂತಿ: ನೀತಿ ಆಯೋಗದ ಇಂಡೆಕ್ಸ್‌ನಲ್ಲಿ 3ನೇ ರ‍್ಯಾಂಕ್ ಪಡೆದ ರಾಜ್ಯ..!

ನೀತಿ ಆಯೋಗದ ಪ್ರಕಾರ, 84 ಅಂಕಗಳೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, 78 ಅಂಕಗಳೊಂದಿಗೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ 73 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಬಳಿಕ ಚಂಡೀಗಢ 71 ಹಾಗೂ ಗೋವಾ 65 ಅಂಕಗಳನ್ನು ಗಳಿಸಿವೆ.

ಬೆಂಗಳೂರು: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕರ್ನಾಟಕ ಗಮನಾರ್ಹ ಪ್ರಗತಿ ಸಾಧಿಸಿದ್ದು, ದೇಶದ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ. ನೀತಿ ಆಯೋಗ ಬಿಡುಗಡೆ ಮಾಡಿದ ಇಂಡಿಯಾ ಎಲೆಕ್ಟ್ರಿಕ್ ಮೊಬಿಲಿಟಿ ಇಂಡೆಕ್ಸ್‌ (ಐಇಎಂಐ) 2025ರಲ್ಲಿ ಕರ್ನಾಟಕ 73 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ.

ಈ ಮೂಲಕ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವ ಪ್ರಮುಖ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿ ಗುರುತಿಸಿಕೊಂಡಿದೆ. ಮಹಾರಾಷ್ಟ್ರದೊಂದಿಗೆ ಕರ್ನಾಟಕವನ್ನು ‘ಅತ್ಯುತ್ತಮ ಸಾಧನೆ ತೋರಿದ ರಾಜ್ಯಗಳ’ ಪಟ್ಟಿಯಲ್ಲಿ ಸೇರಿಸಲಾಗಿದೆ.

ನೀತಿ ಆಯೋಗದ ಪ್ರಕಾರ, 84 ಅಂಕಗಳೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, 78 ಅಂಕಗಳೊಂದಿಗೆ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ 73 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದೆ. ಬಳಿಕ ಚಂಡೀಗಢ 71 ಹಾಗೂ ಗೋವಾ 65 ಅಂಕಗಳನ್ನು ಗಳಿಸಿವೆ.

65 ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ‘ಅತ್ಯುತ್ತಮ ಸಾಧನೆ ತೋರಿದ’ ವರ್ಗದಲ್ಲಿ ಸೂಚ್ಯಂಕ ವರ್ಗೀಕರಿಸುತ್ತದೆ.

ಚಾರ್ಜಿಂಗ್ ಮೂಲಸೌಕರ್ಯ ಸಿದ್ಧತೆ ವಿಭಾಗದಲ್ಲಿ ಕರ್ನಾಟಕ 97 ಅಂಕ ಗಳಿಸಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಅಗತ್ಯವಿರುವ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರಾಜ್ಯ ಸಾಧಿಸಿರುವ ಪ್ರಗತಿಯನ್ನು ಇದು ತೋರಿಸುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, “ಕರ್ನಾಟಕದ ಎಲೆಕ್ಟ್ರಿಕ್ ಮೊಬಿಲಿಟಿ ಉಪಕ್ರಮಗಳಲ್ಲಿ ಬೆಸ್ಕಾಂನ ಇವಿ ಮಿತ್ರ, ಏಕೀಕೃತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಅಪ್ಲಿಕೇಶನ್, ಏಕಗವಾಕ್ಷಿ ಅನುಮತಿ ವ್ಯವಸ್ಥೆ ಹಾಗೂ ಇವಿ ವೇಗವರ್ಧಕ ಘಟಕ ಸೇರಿವೆ.

ವಾಹನ ಮಾರಾಟ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಪ್ರತ್ಯೇಕ ತಯಾರಿಕಾ ವಲಯಗಳನ್ನು ಒಳಗೊಂಡ ಸಮರ್ಪಿತ ಎಲೆಕ್ಟ್ರಿಕ್ ವಾಹನ ನೀತಿಯನ್ನು 2017ರಲ್ಲೇ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದ್ದಾರೆ.

ದೇಶದ ಒಟ್ಟಾರೆ ಎಲೆಕ್ಟ್ರಿಕ್ ವಾಹನ ನೋಂದಣಿಗಳಲ್ಲಿ ಕರ್ನಾಟಕದ ಪಾಲು ಶೇ.8.81ರಷ್ಟಿದೆ. ಮಹಾರಾಷ್ಟ್ರದ ನಂತರ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಎಲೆಕ್ಟ್ರಿಕ್ ವಾಹನ ನೋಂದಣಿಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಇ-ಬಸ್ ನೋಂದಣಿಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದ ನಂತರ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂಗಾರು ಹಿಂತೆಗೆತ ಆರಂಭ; ‘Arnab’ ಚಂಡಮಾರುತ ಭೀತಿ, ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!

ಮುಂಬೈ ಗಣೇಶೋತ್ಸವ ವೇಳೆ ದುರಂತ: ವಿದ್ಯುತ್ ತಗುಲಿ 8 ವರ್ಷದ ಬಾಲಕಿ ಸೇರಿ ಇಬ್ಬರ ಸಾವು!

ಬೆಂಗಳೂರಿಗೆ ಗುಡ್‌ನ್ಯೂಸ್; ಮಾನ್ಸೂನ್ ಅಂತ್ಯವಾದರೂ ಭಾರಿ ವರ್ಷಧಾರೆ, ಮಂಗಳವಾರದಿಂದ ಮತ್ತಷ್ಟು ಚುರುಕು!

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ ಭೀತಿ: ಅಮೆರಿಕಕ್ಕೆ Iran 'Deadline'.. Trumpಗೆ ಕತಾರ್ ಮೂಲಕ 7 ಷರತ್ತುಗಳ ರವಾನೆ, ಟೆಹ್ರಾನ್‌ ಇಟ್ಟ ಬೇಡಿಕೆಗಳೇನು..?

ಹೊರಗುತ್ತಿಗೆ, ದಿನಗೂಲಿ ನೌಕರರಿಗೆ ಗುಡ್‌ನ್ಯೂಸ್; ಕನಿಷ್ಠ ವೇತನ ಹೆಚ್ಚಳ ತಡೆದಿದ್ದ ಸರ್ಕಾರದ ಸುತ್ತೋಲೆಗಳಿಗೆ ಹೈಕೋರ್ಟ್ ಬ್ರೇಕ್!