ಯದುವೀರ್ ಮತ್ತು ಪ್ರತಾಪ್ ಸಿಂಹ  oline desk
ರಾಜ್ಯ

ಶೋಭಾಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ, FIR: ಪ್ರತಾಪ್ ಸಿಂಹ ಅಭಿಪ್ರಾಯ ಅವರ ವೈಯಕ್ತಿಕ, ಪಕ್ಷದ್ದಲ್ಲ- ಯದುವೀರ್ ಒಡೆಯರ್

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರ ಪರವಾಗಿ ನಿಲ್ಲುತ್ತೀರಾ? ಎಂಬ ಪ್ರಶ್ನೆಯನ್ನು ಮಾಧ್ಯಮದ ಪ್ರತಿನಿಧಿಗಳು ಮೈಸೂರು ಸಂಸದ ಯದುವೀರ್ ಅವರಿಗೆ ಕೇಳಿದರು. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಸದ ಯದುವೀರ್...

ಮೈಸೂರು: ಟಿ ನರಸಿಪುರದಲ್ಲಿ ನಡೆದ ಶೋಭಾಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರರ ವಿರುದ್ಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರ ಪರವಾಗಿ ನಿಲ್ಲುತ್ತೀರಾ? ಎಂಬ ಪ್ರಶ್ನೆಯನ್ನು ಮಾಧ್ಯಮದ ಪ್ರತಿನಿಧಿಗಳು ಮೈಸೂರು ಸಂಸದ ಯದುವೀರ್ ಅವರಿಗೆ ಕೇಳಿದರು. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಸದ ಯದುವೀರ್, "ಅಲ್ಲಿ ಕಾನೂನಾತ್ಮಕವಾಗಿ ಏನು ಕ್ರಮ ತೆಗೆದುಕೊಳ್ಳಬೇಕಿದೆ ಅದನ್ನು ತೆಗೆದುಕೊಂಡಿದ್ದಾರೆ. ನಾವೂ ಕೂಡ ಕಾನೂನಾತ್ಮಕವಾಗಿ ಅದನ್ನು ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ನಿಯಮ ಬಾಹಿರವಾಗಿ ಭಾಷಣ ಮಾಡಲಾಯಿತಾ? ಎಂಬುದನ್ನು ನಾನು ನೋಡಿಲ್ಲ. ಅದನ್ನು ಸರ್ಕಾರ ತೀರ್ಮಾನ ಮಾಡುತ್ತೆ. ನ್ಯಾಯಾಲಯ ಇದೆ. ಅಲ್ಲಿ ತೀರ್ಪು ಬರಲಿದೆ. ಕಾನೂನಿನಲ್ಲಿ ಕ್ರಮಕ್ಕೆ ಅವಕಾಶ ಇದ್ದರೆ, ನಮಗೂ ಕಾನೂನು ಅನ್ನೋದು ಇದೆ. ಇದು ಕೇವಲ ಪ್ರಾರಂಭವಷ್ಟೇ, ಕಾನೂನಾತ್ಮಕವಾಗಿ ಎದುರಿಸೋಕೆ ಅವರಿಗೆ ಅವಕಾಶ ಇದೆ ಅದನ್ನು ಅವರು ಮಾಡುತ್ತಾರೆ" ಎಂದು ಹೇಳಿದ್ದಾರೆ.

ಈ ಹಂತದಲ್ಲಿ ಬಿಜೆಪಿ ಪಕ್ಷ ಪ್ರತಾಪ್ ಸಿಂಹ ಅವರ ಪರವಾಗಿ ಇರುತ್ತದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಯದುವೀರ್, ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದು ಅವರ ಅಭಿಪ್ರಾಯ ಪಕ್ಷದ ಅಭಿಪ್ರಾಯ ಅಲ್ಲ. ಅವರ ವೈಯಕ್ತಿಕ ಅಭಿಪ್ರಾಯವಾಗಿರುವುದರಿಂದ ಅವರು ಕಾನೂನಾತ್ಮಕವಾಗಿ ಪ್ರಕರಣವನ್ನು ಎದುರಿಸುತ್ತಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ - ರಾಹುಲ್ ಗಾಂಧಿ

ಚಳಿ ಚಳಿ ತಾಳೆನು ಈ ಚಳಿಯಾ! ಹಿರಿಯ ನಟಿ ಅಂಬಿಕಾ ವಿರುದ್ಧ 46 ಕೋಟಿ ರೂ. ಮೌಲ್ಯದ ಚೆಕ್ ವಂಚನೆ ಪ್ರಕರಣ, ದೂರು ದಾಖಲು

CSKಗೆ ಮುಖ್ಯ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ: ಕೊನೆಗೂ ವದಂತಿಗಳಿಗೆ ತೆರೆ!

ನಂದಿಗ್ರಾಮ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಗೆ ಅ. 5ರವರೆಗೆ ನ್ಯಾಯಾಂಗ ಬಂಧನ!