ಪ್ರಿನ್ಸಿಪಲ್ ಸಿಂಗ್  
ರಾಜ್ಯ

ನೆಲಮಂಗಲ: ರಸ್ತೆ ಅಪಘಾತ, ಲಾರಿ ಚಕ್ರಕ್ಕೆ ಸಿಲುಕಿ ಯೋಧ ಸಾವು!

ಮಿಲಿಟರಿ ಕ್ವಾಟ್ರಸ್‌ಗೆ ಸಾಮಗ್ರಿಗಳನ್ನು ತರಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಲಕ್ಕೂರು ಬಳಿ ಅಪಘಾತ ನಡೆದಿದೆ.

ನೆಲಮಂಗಲ: ರಸ್ತೆ ಅಪಘಾತದಲ್ಲಿ ಲಾರಿ ಚಕ್ರಕ್ಕೆ ಸಿಲುಕಿ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿ ಸಂಭವಿಸಿದೆ. ಮೃತರನ್ನು 35 ವರ್ಷದ ಪ್ರಿನ್ಸಿಪಲ್ ಸಿಂಗ್ ಎಂದು ಗುರುತಿಸಲಾಗಿದೆ.

ಮಿಲಿಟರಿ ಕ್ವಾಟ್ರಸ್‌ಗೆ ಸಾಮಗ್ರಿಗಳನ್ನು ತರಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಲಕ್ಕೂರು ಬಳಿ ಅಪಘಾತ ನಡೆದಿದೆ. ಲಾರಿ ಚಕ್ರಕ್ಕೆ ಸಿಲುಕಿ ಯೋಧ ಸಾವನ್ನಪ್ಪಿದ್ದಾರೆ.

ಪಂಜಾಬ್‌ ಮೂಲದ ಸಿಂಗ್‌, ದಾಬಸ್ ಪೇಟೆಯಲ್ಲಿ ಸಿಐಎಸ್ಎಫ್ ಕ್ವಾಟ್ರಸ್‌ನಲ್ಲಿ ವಾಸವಿದ್ದರು. ಸಿಐಎಸ್‌ಎಫ್‌ನಲ್ಲಿ ಕಾನ್‌ಸ್ಟೇಬಲ್‌ ರ‍್ಯಾಂಕ್‌ನ ಯೋಧರಾಗಿದ್ದರು. ಇಲಾಖೆಗೆ ಎಲೆಕ್ಟ್ರಿಕ್ ಸಾಮಗ್ರಿ ತರಲು ದಾಬಸ್ ಪೇಟೆಗೆ ಪ್ರಿನ್ಸಿಪಲ್ ಸಿಂಗ್ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯರಭಸಕ್ಕೆ ಸ್ಥಳದಲ್ಲೇ ಲಾರಿ ಚಕ್ರಕ್ಕೆ ಸಿಲುಕಿದ ಯೋಧ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಗಾರಕ್ಕೆ ಮೃತದೇಹ ರವಾನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಷ್ಟ್ರಪತಿಗಳಿಂದ ಅನಂತ್ ನಾಗ್​ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ; ಸ್ಟ್ಯಾಂಡಿಂಗ್ ಅವೇಶನ್; ರಕ್ಷಿತ್​ ಶೆಟ್ಟಿ ನಿರ್ಮಾಣದ 'ಮಿಥ್ಯ'ಗೆ 3 ರಾಷ್ಟ್ರ ಪ್ರಶಸ್ತಿ!

ಕಸ್ತೂರಿರಂಗನ್ ವರದಿ: ಕೇಂದ್ರದ ಇಸಿಎ ಅಧಿಸೂಚನೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ತಿರಸ್ಕೃತ; ಒಂದು ವರ್ಷದ ಕಾಲಾವಕಾಶ ಕೋರಿಕೆ!

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

Asian Games Women's Final: ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತಕ್ಕೆ ಅತೀ ದೊಡ್ಡ ಜಯ!

ನನ್ನ ಕಾರನ್ನೇ ತೆಗಸ್ತೀಯಾ, ನಿನ್ನ ವಿರುದ್ಧ ಪ್ರಕರಣವೊಂದಿದೆ ಹುಷಾರ್: ವಿಧಾನಸೌಧದ ಗೇಟ್ ಬಳಿ DCP ಯೋಗಿಶ್‌ಗೆ ಸಿದ್ದರಾಮಯ್ಯ ತರಾಟೆ!