ಮುಖ್ಯಮಂತ್ರಿ ಡಿಕೆ.ಶಿವಕುಮಾರ್ 
ರಾಜ್ಯ

KIADB, PWD ಇಲಾಖೆಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯರ್ಥ; ಸರ್ಕಾರದ ಆರ್ಥಿಕ ಶಿಸ್ತಿಗೆ ‘CAG’ ಶಾಕ್, ಕಣ್ಣು ಮುಚ್ಚಿ ಕುಳಿತಿದೆಯೇ ಆಡಳಿತ ಯಂತ್ರ?

ಸೆಪ್ಟೆಂಬರ್‌ 21ರಂದು ರಾಜ್ಯ ವಿಧಾನಮಂಡಲದ ಮುಂದೆ ಮಂಡಿಸಲಾದ ವರದಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಂಡುಬಂದಿರುವ ಹಲವು ಲೋಪಗಳು ಹಾಗೂ ಮೇಲ್ವಿಚಾರಣೆಯ ಕೊರತೆಯನ್ನು ಉಲ್ಲೇಖಿಸಲಾಗಿದೆ.

ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಗಂಭೀರ ಲೋಪದೋಷ, ವಿಳಂಬ ನೀತಿ ಮತ್ತು ಆರ್ಥಿಕ ಶಿಸ್ತುಬದ್ಧತೆಯ ಕೊರತೆಯನ್ನು ಭಾರತೀಯ ಮಹಾಲೇಖಪಾಲರ (CAG) ವರದಿ ಬಹಿರಂಗಪಡಿಸಿದೆ.

ರಾಜ್ಯ ವಿಧಾನಮಂಡಲದಲ್ಲಿ ಮಂಡಿಸಲಾದ ಈ ನಾಗರಿಕ ಅನುಸರಣೆ ಆಡಿಟ್ ವರದಿಯು (ಮಾರ್ಚ್ 2024 ರವರೆಗಿನ ಮೌಲ್ಯಮಾಪನ), ಸರ್ಕಾರದ ಪ್ರಮುಖ ಇಲಾಖೆಗಳ ಆಡಳಿತಾತ್ಮಕ ವೈಫಲ್ಯಗಳನ್ನು ಮತ್ತು ಸಾರ್ವಜನಿಕ ಹಣದ ದುರುಪಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯವೈಖರಿಯಲ್ಲಿ ಕಂಡುಬಂದಿರುವ ವಿಳಂಬ ಮತ್ತು ಲೋಪಗಳನ್ನು ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ (ಸಿಎಜಿ) ವರದಿ ಎತ್ತಿ ತೋರಿಸಿದೆ.

ಕರ್ನಾಟಕದ ಪ್ರಧಾನ ಲೆಕ್ಕಪರಿಶೋಧಕ (ಆಡಿಟ್‌-2) ಅಶೋಕ್‌ ಸಿನ್ಹಾ ಅವರು ವಿವಿಧ ಇಲಾಖೆಗಳ ಕುರಿತ ಸಿಎಜಿಯ ಅನುಸರಣೆ ಲೆಕ್ಕಪರಿಶೋಧನಾ (ಸಿವಿಲ್‌) ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದರು.

ಸೆಪ್ಟೆಂಬರ್‌ 21ರಂದು ರಾಜ್ಯ ವಿಧಾನಮಂಡಲದ ಮುಂದೆ ಮಂಡಿಸಲಾದ ವರದಿಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಂಡುಬಂದಿರುವ ಹಲವು ಲೋಪಗಳು ಹಾಗೂ ಮೇಲ್ವಿಚಾರಣೆಯ ಕೊರತೆಯನ್ನು ಉಲ್ಲೇಖಿಸಲಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 2019ರ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗೆ ಭೂಮಿ ಲಭ್ಯತೆ ಖಚಿತಪಡಿಸಿಕೊಳ್ಳದೆ ಹಾಗೂ ಪೂರ್ವ ಪರಿಸರ ಅನುಮತಿ ಪಡೆಯದೆ ಹಲವು ಕಾಮಗಾರಿಗಳನ್ನು ಕೈಗೊಂಡಿರುವುದು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ. ಇದರಿಂದ ಯೋಜನೆಗಳ ಅನುಷ್ಠಾನದಲ್ಲಿ ಗಣನೀಯ ವಿಳಂಬವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಕೆಐಎಡಿಬಿಯ ಮೂರು ವಲಯಗಳನ್ನು ಪರಿಶೀಲಿಸಿದಾಗ, ಹಂಚಿಕೆ ಮಾಡಲಾಗಿದ್ದ 1,751 ಘಟಕಗಳ ಪೈಕಿ 1,074 ಘಟಕಗಳು ಅಂದರೆ ಶೇ.61.34ರಷ್ಟು ಘಟಕಗಳು ಕಾರ್ಯನಿರ್ವಹಿಸದೆ, ಖಾಲಿಯಾಗಿರುವ ಅಥವಾ ಅನುಷ್ಠಾನಗೊಳ್ಳದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ಘಟಕಗಳು ಒಟ್ಟು 945.03 ಎಕರೆ ಪ್ರದೇಶವನ್ನು ಒಳಗೊಂಡಿವೆ.

2006ರ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯ ಬಳಿಕ ಅಭಿವೃದ್ಧಿಪಡಿಸಲಾದ 22 ಕೈಗಾರಿಕಾ ಪ್ರದೇಶಗಳ ಪೈಕಿ ನಾಲ್ಕು ಪ್ರದೇಶಗಳಿಗೆ ಕೆಐಎಡಿಬಿ ಪರಿಸರ ಅನುಮತಿ ಪಡೆಯಲು ವಿಫಲವಾಗಿದೆ ಎಂದು ವರದಿ ಹೇಳಿದೆ.

ಕಾನೂನು ವಿವಾದಗಳಿಂದ ಮುಕ್ತವಾಗಿರುವ ಭೂಮಿ ಲಭ್ಯವಿಲ್ಲದಿದ್ದರೂ ಕಿತ್ತೂರು, ಬಾಳೇಕುಂದ್ರಿ ಹಾಗೂ ಏರೋಸ್ಪೇಸ್‌ ಪಾರ್ಕ್‌ ಸಬ್‌-ಲೇಔಟ್‌ 11ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೆಐಎಡಿಬಿ ರೂ.281.34 ಕೋಟಿ ಹೂಡಿಕೆ ಮಾಡಿರುವುದನ್ನೂ ವರದಿ ಉಲ್ಲೇಖಿಸಿದೆ.

ಹಾಸನ ಕೈಗಾರಿಕಾ ಪ್ರದೇಶದಲ್ಲಿ 2006ರ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಕೈಗಾರಿಕಾ ಪ್ರದೇಶದ ಪಕ್ಕದಲ್ಲಿರುವ ಗಂಡೇಕಟ್ಟೆ ಮೀಸಲು ಅರಣ್ಯವನ್ನು ಪರಿಸರ ಸೂಕ್ಷ್ಮ ವಲಯವೆಂದು ವರ್ಗೀಕರಿಸಲಾಗಿದ್ದು, ಅದರ ಸುತ್ತ ಕೇವಲ 100 ಮೀಟರ್‌ ಬಫರ್‌ ವಲಯವನ್ನು ಮಾತ್ರ ಉಳಿಸಿರುವುದು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೆರೆ ಪ್ರದೇಶದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದ್ದ ಸ್ಥಳವನ್ನು ಆಯ್ಕೆ ಮಾಡಿದ್ದಕ್ಕಾಗಿ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯನ್ನೂ ಸಿಎಜಿ ವರದಿ ಪ್ರಶ್ನಿಸಿದೆ. ಪ್ರಸ್ತಾವಿತ ಸ್ಥಳ ಕೆರೆ ಪ್ರದೇಶದಲ್ಲಿದ್ದ ಕಾರಣ ಕಾಮಗಾರಿ ಸ್ಥಗಿತಗೊಂಡಿದ್ದು, ಇದರಿಂದ ರೂ.1.55 ಕೋಟಿ ವ್ಯರ್ಥವಾಗಿದೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಮುಳುವಾಯ್ತಾ ಓಲೈಕೆ ರಾಜಕಾರಣ?; ಯಾದವರು 7%, ಮುಸ್ಲಿಮರು 22%, ನಮ್ಮಲ್ಲೇ CM ಅಭರ್ಥಿ ಮಾಡಿ, ಅಖಿಲೇಶ್ ಯಾದವ್`ಗೆ ಮೌಲಾನಾ ಗಡುವು!

ಹಬ್ಬದ ಸಂಭ್ರಮದ ನಡುವೆ ದುರಂತ; ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!