ನೂಣನವಿನಕೆರೆ ಶ್ರೀ 
ರಾಜ್ಯ

CM ಡಿಕೆ ಶಿವಕುಮಾರ್ ವ್ಯಕ್ತಿತ್ವ ವಜ್ರಕ್ಕಿಂತ ಕಠಿಣ, ಆದ್ರೆ ಹೃದಯ ಮೃದು: ನೂಣನವಿನಕೆರೆ ಶ್ರೀ ಅಚ್ಚರಿ ಹೇಳಿಕೆ

ಡಿಕೆ ಶಿವಕುಮಾರ್ ಅವರು ತಮ್ಮ ಹಿಂದಿನ ವ್ಯಕ್ತಿತ್ವವನ್ನು ಬದಲಿಸಿಕೊಂಡು ಎಲ್ಲರ ಆತ್ಮೀಯ ನಾಯಕರಾಗಿ ಮಿಂಚುತ್ತಿದ್ದಾರೆ.

ತುಮಕೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ವಕ್ತಿತ್ವ ವಜ್ರಕ್ಕಿಂತ ಕಠಿಣವಾಗಿದ್ದರೂ, ಹೃದಯದಿಂದ ಮೃದು ಸ್ವಭಾವದವರು ಎಂದು ನೂಣನವಿನಕೆರೆಯ ಶಿವಯೋಗಿಶ್ವರ್ ಶ್ರೀಗಳು ಶುಕ್ರವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳೊಂದೆ ಮಾತನಾಡಿದ ಶಿವಯೋಗಿಶ್ವರ್ ಶ್ರೀಗಳು, ಡಿ.ಕೆ ಶಿವಕುಮಾರ್ ಅವರು ಈ ಮಠದ ಆರ್ಶಿವಾದದಿಂದ ಬೆಳೆದಿದ್ದಾರೆ. ತಮಗೆ ಕಷ್ಟಗಳು ಬಂದ ಸಮಯದಲ್ಲೂ ಮಠದ ಆರ್ಶಿವಾದ ಪಡೆದಿದ್ದಾರೆ. ಅವರು ಮಠದ ಮಗನಾಗಿ ಬಂದಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಅವರು ತಮ್ಮ ಹಿಂದಿನ ವ್ಯಕ್ತಿತ್ವವನ್ನು ಬದಲಿಸಿಕೊಂಡು ಎಲ್ಲರ ಆತ್ಮೀಯ ನಾಯಕರಾಗಿ ಮಿಂಚುತ್ತಿದ್ದಾರೆ. ತಾಯಿ ವಾತ್ಸಲ್ಯದಂತೆ ರಾಜ್ಯದ ಎಲ್ಲಾ ಜನರನ್ನು ಪ್ರೀತಿಸುತ್ತಿದ್ದಾರೆ. ಅವರು ಇನ್ನಷ್ಟು ಉನ್ನತ ಸ್ಥಾನಕ್ಕೇರುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಮಠ ಎಂದಿಗೂ ರಾಜಕೀಯವಾಗಿ ಯಾರಿಗೂ ಸಲಹೆ ನೀಡಿಲ್ಲ. ರಾಜಕೀಯದಲ್ಲಿ ಧರ್ಮ ಭಾಗಿಯಾಗುದಿಲ್ಲ. ನಾವು ಮಾನವ ಸೇವೆ ಮಾಡುವ ಸಲಹೆ ಮಾತ್ರ ನೀಡುತ್ತೇವೆ. ಡಿಕೆಶಿ ಸರಳ ಸಜ್ಜಿನಿಕೆಯ ಮಾತೃ ಹೃದಯಿ ವ್ಯಕ್ತಿಯಾಗಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

ರಿಷಬ್ ಶೆಟ್ಟಿಯಿಂದ ಹೊಸ ಸಿನಿಮಾ; ಯುವ ಪ್ರತಿಭೆಗಳಿಗೆ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ? ಆಡಿಷನ್ ಯಾವಾಗ? ಇಲ್ಲಿದೆ ವಿವರ...

32 ವರ್ಷಗಳ ಪೊಲೀಸ್ ಶೋಧ ಅಂತ್ಯ; 1994ರ ಡಬಲ್ ಮರ್ಡರ್, ಡಕಾಯಿತಿ ಆರೋಪಿ ಕೊನೆಗೂ ಅರೆಸ್ಟ್! ಬಂಧನವೇ ರೋಚಕ

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ನೋಟಿಸ್; ಸಿಡಿದೆದ್ದ VHP

SIR: ವಿವಾದಗಳ ನಡುವೆಯೇ 3.27 ಕೋಟಿ ಹೊಸ ಮತದಾರರ ಸೇರ್ಪಡೆ! ಚುನಾವಣಾ ಆಯೋಗ ಹೇಳಿದ್ದೇನು?