ಸಾಂದರ್ಭಿಕ ಚಿತ್ರ 
ರಾಜ್ಯ

ಕಲಬುರಗಿ: RSS ಬಹುತ್ವ ಭಾರತಕ್ಕೆ ಅಂಟಿದ ಕ್ಯಾನ್ಸರ್‌; ಬಸವಾದಿ ಶಿವಶರಣ ಹಿಂದೂ ಸಮಾವೇಶಕ್ಕೆ ಹೆಚ್ಚಿದ ವಿರೋಧ!

ಬಲಪಂಥೀಯರ ಸಮಾವೇಶದಿಂದ ಲಿಂಗಾಯತರು ದಾರಿ ತಪ್ಪದಂತೆ ನೋಡಿಕೊಳ್ಳಲು ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದ ಜಾಮ್ದಾರ್, ಕೆಲವು ಶಕ್ತಿಗಳು ಈ ಸಮ್ಮೇಳನದ ಮೂಲಕ ಉದ್ದೇಶಪೂರ್ವಕವಾಗಿ ಲಿಂಗಾಯತ ಸಮುದಾಯವನ್ನು ಪ್ರಚೋದಿಸುತ್ತಿವೆ.

ಬೆಂಗಳೂರು: ಸೆಪ್ಟೆಂಬರ್ 27 ರಂದು ನಡೆಯಲಿರುವ 'ಬಸವಾದಿ ಶಿವಶರಣ ಹಿಂದೂ ಸಮ್ಮೇಳನ'ದ (ಹಿಂದೂ ಸಮಾವೇಶ) ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಲಿಂಗಾಯತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟವೊಂದು ಸೆಪ್ಟೆಂಬರ್ 25 ರ ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆಯನ್ನು ನಡೆಸುವುದಾಗಿ ಘೋಷಿಸಿದೆ.

ಸಮುದಾಯದಾದ್ಯಂತ ಇರುವ ಬಸವ-ಪರ ಗುಂಪುಗಳು ಈ ಮುಂಬರುವ ಕಾರ್ಯಕ್ರಮದ ವಿರುದ್ಧ ಸಂಘಟಿತವಾಗುತ್ತಿವೆ ಎಂದು 'ಜಾಗತಿಕ ಲಿಂಗಾಯತ ಮಹಾಸಭೆ'ಯ ಮುಖ್ಯಸ್ಥರಾಗಿರುವ ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಸ್.ಎಂ. ಜಾಮ್ದಾರ್ ಅವರು TNIEಗೆ ತಿಳಿಸಿದ್ದಾರೆ.

ಬಲಪಂಥೀಯರ ಸಮಾವೇಶದಿಂದ ಲಿಂಗಾಯತರು ದಾರಿ ತಪ್ಪದಂತೆ ನೋಡಿಕೊಳ್ಳಲು ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದ ಜಾಮ್ದಾರ್, ಕೆಲವು ಶಕ್ತಿಗಳು ಈ ಸಮ್ಮೇಳನದ ಮೂಲಕ ಉದ್ದೇಶಪೂರ್ವಕವಾಗಿ ಲಿಂಗಾಯತ ಸಮುದಾಯವನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು. ಆದರೆ ನಾವು ಎಚ್ಚರವಾಗಿದ್ದೇವೆ , ನಾವು ಇದನ್ನು ವಿರೋಧಿಸುತ್ತೇವೆ ಮತ್ತು ಎಲ್ಲಾ ಬಸವ-ಪರ ಗುಂಪುಗಳು ಇದನ್ನು ವಿರೋಧಿಸುತ್ತವೆ. ನಾವು ನಾಳೆ ಬೃಹತ್ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಅವರು ಹೇಳಿದರು.

ಲಿಂಗಾಯತ ಮಠಾಧೀಶರಾದ ಕನ್ನೇರಿ ಸ್ವಾಮೀಜಿ ಭಾಗವಹಿಸುವ ನಿರೀಕ್ಷೆಯಿರುವ ಈ ಸಮಾವೇಶಕ್ಕೆ ಸಮುದಾಯದ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನು ಬಸವ ಯುಗದ ತತ್ವಶಾಸ್ತ್ರವನ್ನು ಬೇರೊಂದು ಸೈದ್ಧಾಂತಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಪ್ರಯತ್ನವೆಂದು ಪರಿಗಣಿಸಿದ್ದಾರೆ.

ನಾವು ಬೆಳಿಗ್ಗೆ 11.30ಕ್ಕೆ ಕನ್ನಡ ಭವನದಿಂದ ಸುಮಾರು 2 ಕಿ.ಮೀ ದೂರದ ಜಗತ್ ವೃತ್ತದವರೆಗೆ ರ್ಯಾಲಿ ನಡೆಸುವ ಮೂಲಕ ಪ್ರತಿಭಟಿಸುತ್ತೇವೆ. ಅಲ್ಲಿ ನಮ್ಮ ಈ ಕಾರ್ಯಕ್ರಮವು ಸಾರ್ವಜನಿಕ ವಿಚಾರ ಸಂಕಿರಣದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು 'ಪ್ರೊ ಬಸವ' (Pro Basava) ಸಂಘಟನೆಯ ಮುಖ್ಯಸ್ಥರಾದ ಮೀನಾಕ್ಷಿ ಬಾಳಿ ಪ್ರತಿಭಟನೆಯ ಕಾರ್ಯತಂತ್ರವನ್ನು ವಿವರಿಸಿದರು.

ಲಿಂಗಾಯತ ಧರ್ಮದ ಸ್ಥಾಪಕ ದಾರ್ಶನಿಕ ಹಾಗೂ ಸಂಪ್ರದಾಯವಾದವನ್ನು ತಿರಸ್ಕರಿಸಿದ್ದ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಬೋಧನೆಗಳನ್ನು ಕೆಲವು ಗುಂಪುಗಳು ತಿರುಚುತ್ತಿವೆ ಎಂದು ಬಾಲಿ ಹೇಳಿದರು. ಬಲಪಂಥೀಯ ಗುಂಪುಗಳ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು ಮತ್ತು ಇದು ಭಾರತಕ್ಕೆ ವ್ಯಾಪಿಸಿರುವ ಒಂದು ಅಪಾಯ ಎಂದು ಬಣ್ಣಿಸಿದರು. ಲಿಂಗಾಯತ ಮಠಾಧೀಶ ಕನ್ಹೇರಿ ಸ್ವಾಮೀಜಿಯನ್ನು ಮುಂದೆ ಮಾಡಿಕೊಂಡು ಕಲಬುರಗಿಗೆ ಕಾಲಿಡುತ್ತಿದೆ. ಹಿಂದೂ ಸಮಾವೇಶದ ಹೆಸರಿನಲ್ಲಿ ಕೆಲವರು ಬಿಜೆಪಿ ಚುನಾವಣಾ ಕುತಂತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಲಿಂಗಾಯತ ಚಿಂತಕ ಪ್ರೊ. ಆರ್.ಕೆ. ಹುದುಗಿ ಮಾತನಾಡಿ, "ಲಿಂಗಾಯತ ಧರ್ಮವನ್ನು ತಿರುಚುವ ಇಂತಹ ಪ್ರಯತ್ನ ಇದೇ ಮೊದಲೇನಲ್ಲ ಈ ಹಿಂದೆ ಪುಸ್ತಕ ಮತ್ತು ಚಲನಚಿತ್ರದ ಮೂಲಕ ಲಿಂಗಾಯತ ನಂಬಿಕೆಗಳು ಹಾಗೂ ಅಸ್ಮಿತೆಯನ್ನು ಹಾಳುಗೆಡವಲು ಪ್ರಯತ್ನಗಳು ನಡೆದಿದ್ದವು. ನಾವು ಅದನ್ನು ವಿರೋಧಿಸಿ ಮತ್ತಷ್ಟು ಬಲವಾಗಿ ಹೊರಹೊಮ್ಮಿದ್ದೇವೆ" ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!

'ಯಾರು ಚಿತ್ರೀಕರಿಸುತ್ತಿದ್ದರು?': ಜಮುಯಿ ದುರಂತಕ್ಕೆ ವಿಪಕ್ಷಗಳೇ ಕಾರಣ-ಬಿಜೆಪಿ ಸಚಿವ

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಬಿಹಾರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ? ಮಂದಾರ್ ಬೆಟ್ಟದಲ್ಲಿ ಯುವತಿಗೆ ಕಾಮುಕರಿಂದ ಕಿರುಕುಳ; ಒಂದೇ ವಾರದಲ್ಲಿ 3ನೇ ಪ್ರಕರಣ..!

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!