ನಂದಿನಿ ಸಾಂದರ್ಭಿಕ ಚಿತ್ರ 
ರಾಜ್ಯ

ನಂದಿನಿ ಹಾಲಿನ ದರ ಪ್ರತಿ ಲೀ.ಗೆ 10ರೂ. ಏರಿಕೆ? ಇಂದು ಸಿಎಂ ಮಹತ್ವದ ಸಭೆ, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ

ರಾಜ್ಯದ ಹಾಲು ಒಕ್ಕೂಟಗಳ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿ ಸಭೆ ನಡೆಸಲಿದ್ದಾರೆ.

ಬೆಂಗಳೂರು: ನಂದಿನ ಹಾಲಿ ದರ ಪ್ರತಿ ಲೀಟರ್ 10 ರೂ.ಗೆ ಏರಿಕೆಯಾಗುವ ಸಾಧ್ಯತೆಯಿದ್ದು, ಗ್ರಾಹಕರಿಗೆ ಇಂದು ಭಾರಿ ಹೊಡೆತ ಬೀಳುವ ಸಾಧ್ಯತೆಯಿದೆ.

ಈ ಸಂಬಂಧ ರಾಜ್ಯದ ಹಾಲು ಒಕ್ಕೂಟಗಳ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿ ಸಭೆ ನಡೆಸಲಿದ್ದಾರೆ. ಒಂದು ವೇಳೆ ಸರ್ಕಾರ ಇದಕ್ಕೆ ಸಮ್ಮತಿ ನೀಡಿದರೆ ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟವಾಗುವ ಹಾಲು ಸೇರಿ ಹಾಲಿನ ಸಂಬಂಧಿತ ಉತ್ಪನ್ನಗಳ ದರ ಏರಿಕೆಯಾಗಲಿವೆ.

ಹಾಲಿನ ದರ ಪ್ರತಿ ಲೀ.ಗೆ 10ರೂ ಏರಿಕೆ? ಕೆಎಂಎಫ್ ವಾರ್ಷಿಕ ಮಹಾಸಭೆಯ ಬಳಿಕ ಮಾತನಾಡಿದ ಬೆಂಗಳೂರು ಹಾಲು ಒಕ್ಕೂಟ ಲಿಮಿಟೆಡ್ (ಬಮೂಲ್‌) ಅಧ್ಯಕ್ಷ ಡಿಕೆ ಸುರೇಶ್, ಪ್ರಸ್ತುತ ಹೈನುಗಾರಿಕೆ ತೀವ್ರ ಸಂಕಷ್ಟದಲ್ಲಿದ್ದು, ಹಾಲಿನ ಬೆಲೆ ಏರಿಕೆ ಅನಿರ್ವಾಯವಾಗಿದೆ. ಈ ಸಂಬಂಧ ಇಂದು ಬೆಳ್ಳಿಗೆ 11 ಗಂಟೆಗೆ ಸಿಎಂ ಡಿಕೆಶಿಯವರನ್ನು ಭೇಟಿಯಾಗುತ್ತಿದ್ದು, ಈ ವೇಳೆ ಕನಿಷ್ಠ ಪ್ರತಿ ಲೀಟರ್‌ 10ರೂ. ದರ ಏರಿಸುವಂತೆ ಮನವಿ ಮಾಡಲು ರೈತರು ಒತ್ತಾಯ ಮುಂದಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದ ರೈತರು ಸಾಕಷ್ಟು ಪಾಲು ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಕಳೆದ ಆರೇಳು ತಿಂಗಳಿಂದ ಬೆಲೆ ಏರಿಕೆ ಎಲ್ಲಾ ಕಡೆ ಆಗಿದ್ದು, ಮೇವಿನ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿದೆ, ಹಾಗೆಯೇ ಎಲ್ಲಾ ಕಚ್ಚಾ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ, ಬೆಲೆ ಏರಿಕೆಗೆ ಒತ್ತಾಯಿಸುವುದು ಅನಿವಾರ್ಯ. ಈ ಹಿನ್ನಲೆಯಲ್ಲಿ ಒಕ್ಕೂಟದ ಸಮಸ್ಯೆಗಳು, ಆಡಳಿತ ವೆಚ್ಚ, ಉತ್ಪಾದನೆ ಸೇರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ಇದೇ ವೇಳೆ, ಇತ್ತೀಚೆಗೆ ಪ್ಲಾಸ್ಟಿಕ್ ಸ್ಯಾಚೆಟ್‌ಗಳ ಬೆಲೆ ಮತ್ತು ಸಾಗಣೆ ಶುಲ್ಕಗಳು ಸಹ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಸಂಬಂಧ ಕೆಎಂಎಫ್ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಅಧಿಕೃತ ಪ್ರಸ್ತಾವನೆಯನ್ನು ಕಳುಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಹಾಲಿನ ದರ ಏರಿಕೆ ಸಂಬಂಧ ಕಳೆದ ವಾರ ಸರ್ಕಾರಕ್ಕೆ ಬೇಡಿಕೆಯಿಟ್ಟು ಮಾತನಾಡಿದ ಕರ್ನಾಟಕ ಹಾಲು ಉತ್ಪಾದಕರ ಸಂಘದ ಪ್ರತಿನಿಧಿಗಳು, ರಾಜ್ಯದಲ್ಲಿ ಉಂಟಾಗಿರುವ ಬರಗಾಲದಿಂದಾಗಿ ಮೇವಿನ ಲಭ್ಯತೆ ಕಡಿಮೆಯಾಗಿ ಬೆಲೆಗಳು ಗಗನಕ್ಕೇರಿವೆ. ಜಾನುವಾರುಗಳ ಮೇವಿಗಾಗಿ ಬಳಸುವ ಕಚ್ಚಾ ವಸ್ತುಗಳಾದ ಜೋಳ ಮತ್ತು ಭತ್ತದ ಹೊಟ್ಟುಗಳ ಬೆಲೆಗಳು ಸಹ ಶೇ. 25 ರಷ್ಟು ಹೆಚ್ಚಾಗಿದೆ. ಇದು ಹಾಲು ಉತ್ಪಾದಕರನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದರು.

ಹಾಲಿನ ದರ ಹೆಚ್ಚಳದ ಸುಳಿವು ಕೊಟ್ಟ ಸಿಎಂ: ಹಾಲಿನ ದರ ಏರಿಸುವ ಕುರಿತು ಒಕ್ಕೂಟಗಳ ಬೇಡಿಕೆ ಕುರಿತು ಸಿಎಂ ಡಿಕೆ ಶಿವಕುಮಾರ್‌ ಸಕಾರಾತ್ಮಕ ಪರಿಗಣಿಸಿದ್ದು, ಹಾಲಿನ ದರ ಹೆಚ್ಚಳದ ಸುಳಿವು ನೀಡಿದ್ದರು. ಸದ್ಯ ಇಂದು ನಡೆಯುವ ಸಭೆಯ ಬಳಿಕ ಅಂತಿಮ ನಿರ್ಧಾರ ಹೊರ ಬೀಳಲಿದ್ದು, ಹಾಲಿನ ದರ ಪ್ರತಿ ಲೀಟರ್‌ಗೆ ಎಷ್ಟು ಬೆಲೆ ಏರಿಕೆಯಾಗಿಲಿದೆ ಎಂದು ಹೊರಬೀಳಲಿದೆ.

ಇನ್ನು ಹಾಲು ಒಕ್ಕೂಟಗಳ ಈ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ನಂದಿನಿ ಬ್ರ್ಯಾಂಡ್‌ನ ಹಾಲಿನ ದರದ ಜೊತೆಗೆ ಮೊಸರು, ಬೆಣ್ಣೆ, ತುಪ್ಪದಂತಹ ಹಾಲಿನ ಉತ್ಪನ್ನಗಳು ಸೇರಿದಂತೆ ನಂದಿನಿ ಬ್ರ್ಯಾಂಡ್‌ನಡಿ ಮಾರಾಟವಾಗುತ್ತಿರುವ ಸಿಹಿತಿಂಡಿಗಳ ಬೆಲೆ ಸಹ ಏರಿಕೆಯಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ

'ಅಮಾಯಕ ಜೀವ ಬಲಿಯಾಗುತ್ತಿವೆ, ಇದು ಸಂಪೂರ್ಣ ಅಸಮರ್ಥನೀಯ’; ಹಡಗು, ನಾವಿಕರ ಮೇಲಿನ ದಾಳಿ ಖಂಡಿಸಿದ EAM Jaishankar

'ಲಂಚ'ದ ಹೇಳಿಕೆ: ಅಬಕಾರಿ ಸಚಿವ ಶಿವಲಿಂಗೇಗೌಡರ ವಿರುದ್ಧ ದೂರು ದಾಖಲು!

'ಭಯೋತ್ಪಾದಕ ದೇಶ ಕೂಡ ಪ್ರಶ್ನೆ ಕೇಳುತ್ತಿದೆ': ಪಾಕ್ ಪತ್ರಕರ್ತನ ಬೆವರಿಳಿಸಿದ ಎಸ್ ಜೈಶಂಕರ್! Video

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್