ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಹಾರ್ನ್ ಬಳಕೆ ಸುರಕ್ಷತಾ ಕ್ರಮಕ್ಕಿಂತ ಹೆಚ್ಚಾಗಿ ಅಭ್ಯಾಸವಾಗಿ ಹೋಗಿದೆ! ಸಮೀಕ್ಷೆ

ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಕೇವಲ ಶೇ. 30 ರಷ್ಟು ಜನರು ಮಾತ್ರ, ಅಪಾಯದ ಮುನ್ನೆಚ್ಚರಿಕೆ ಅಥವಾ ತಪ್ಪಾದ ಡ್ರೈವಿಂಗ್ ಸೂಚಿಸಲು ಹಾರ್ನ್ ಬಳಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳ ಹಾರ್ನ್ ಬಳಕೆಯು ಸುರಕ್ಷತಾ ಕ್ರಮಕ್ಕಿಂತ ಹೆಚ್ಚಾಗಿ ಒಂದು ಅಭ್ಯಾಸವಾಗಿರುವಂತೆ ತೋರುತ್ತದೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಕೇವಲ ಶೇ. 30 ರಷ್ಟು ಜನರು ಮಾತ್ರ, ಅಪಾಯದ ಮುನ್ನೆಚ್ಚರಿಕೆ ಅಥವಾ ತಪ್ಪಾದ ಡ್ರೈವಿಂಗ್ ಸೂಚಿಸಲು ಹಾರ್ನ್ ಬಳಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಅರ್ಧಕ್ಕಿಂತ ಹೆಚ್ಚು ಜನರು ಇದು ಅಭ್ಯಾಸವಾಗಿ ಹೋಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಯಾಂತ್ರಿಕವಾಗಿ ಹಾರ್ನ್ ಮಾಡುವುದು, ಅಸಹನೆ, ಹತಾಶೆ ಮತ್ತು ಅಡ್ಡಾದಿಡ್ಡಿ ಡ್ರೈವಿಂಗ್ ಕೂಡಾ ಸೇರಿವೆ.

'ಬ್ಯೂಟಿಫುಲ್ ಭಾರತ್' (Beautiful Bharat) ಎಂಬ ನಾಗರಿಕ ಸ್ವಯಂಸೇವಕರ ಗುಂಪು, ಭಾನುವಾರ ಆಯೋಜಿಸಿದ್ದ 'ವಿಶ್ವ ಕಿವುಡುತನ ದಿನ'ದ (World Deaf Day) ಅಂಗವಾಗಿ 'ಲೆಟ್ಸ್ ಹಿಯರ್ ದ ಬರ್ಡ್ಸ್ ಚಿರ್ಪ್ ಅಗೇನ್' (Let’s Hear the Birds Chirp Again - ಪಕ್ಷಿಗಳ ಕಲರವವನ್ನು ಮತ್ತೆ ಕೇಳೋಣ) ಎಂಬ ಅಭಿಯಾನದ ಭಾಗವಾಗಿ 'ನೋ ಹಾಂಕಿಂಗ್ ಸರ್ವೆ' (No Honking Survey) ನಡೆಸಿದೆ.

ಈ ಸಮೀಕ್ಷೆಯಲ್ಲಿ ಭಾಗವಹಿಸಿದ 259 ಮಂದಿಯ ಪೈಕಿ ಬರೋಬ್ಬರಿ ಶೇ.97 ರಷ್ಟು ರಷ್ಟು ಜನರು, ಬೆಂಗಳೂರಿನಲ್ಲಿ ಅತಿಯಾದ ಹಾರ್ನ್ ಬಳಕೆ ಒಂದು ದೊಡ್ಡ ಸಮಸ್ಯೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ವಾಹನ ಸವಾರರು ಹಾರ್ನ್ ಬಳಸುವ ಪ್ರಮಾಣವನ್ನು ಕಡಿಮೆ ಮಾಡಲು ಸಾಕಷ್ಟು ಅವಕಾಶವಿದೆ ಎಂಬುದನ್ನೂ ಬಹುತೇಕ ಮಂದಿ ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಪರಿಸರ ಮತ್ತು ಸುಸ್ಥಿರತೆಯ ಕಾರ್ಯಕರ್ತೆ ಹಾಗೂ 'ಬ್ಯೂಟಿಫುಲ್ ಭಾರತ್' ಸಂಸ್ಥೆಯ ಸ್ಥಾಪಕಿಯಾದ ಒಡೆಟ್ಟೆ ಕತ್ರಕ್ (Odette Katrak) ಮಾತನಾಡಿ, "ಹಿಂದಿನ ಬೆಂಗಳೂರಿನಲ್ಲಿ ಪಕ್ಷಿಗಳ ಕಲರವ ಕೇಳಿಸುತ್ತಿತ್ತು, ಆದರೆ ಇಂದು ನಮಗೆ ಕೇಳಿಸುವುದು ಕೇವಲ ವಾಹನಗಳ ಹಾರ್ನ್ ಶಬ್ದ ಮಾತ್ರ. 2016ರಲ್ಲೇ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು, ಆದರೆ 10 ವರ್ಷಗಳ ನಂತರವೂ ಹಾರ್ನ್ ಬಳಕೆಯ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ. ಅತಿಯಾದ ಹಾರ್ನ್ ಬಳಕೆಯು ಶ್ರವಣ ಶಕ್ತಿಯನ್ನು ಬೇಗನೆ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂಬ ವಿಷಯದತ್ತ ಗಮನ ಸೆಳೆಯಲು ಈ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಅತಿಯಾದ ಹಾರ್ನ್ ಬಳಕೆಯು ಶ್ರವಣ ಶಕ್ತಿಯ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ಸಾಬೀತಾಗಿದೆ. ಶಾಂತಿಯುತ ದೇಶಗಳ ಜನರಿಗೆ ಹೋಲಿಸಿದರೆ ಭಾರತದಲ್ಲಿನ ಜನರು ಏಳು ವರ್ಷ ಮುಂಚಿತವಾಗಿಯೇ ಶ್ರವಣ ಶಕ್ತಿಯ ನಷ್ಟವನ್ನು ಅನುಭವಿಸುತ್ತಾರೆ ಎಂದು ವರದಿಯು ತಿಳಿಸಿದೆ.

ವಾಹನದಲ್ಲಿರುವವರಿಗೆ ಹಾರ್ನ್ ಒಂದು ಪ್ರಮುಖ ಸುರಕ್ಷತಾ ಸಾಧನವೆಂದು ಪರಿಗಣಿಸಲಾಗಿರುವುದರಿಂದ, ಒಂದು ವೇಳೆ ಹಾರ್ನ್ ಕೆಲಸ ಮಾಡದಿದ್ದರೂ ತಾವು ಸುರಕ್ಷಿತವಾಗಿ ವಾಹನ ಚಲಾಯಿಸಲು ಸಾಧ್ಯ ಎಂಬುದು ಶೇ. 68 ರಷ್ಟು ಜನರ ನಂಬಿಕೆ. ಅಲ್ಲದೆ, ಅತಿಯಾದ ಹಾರ್ನ್ ಬಳಕೆಯು ಸಮುದಾಯದ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಶೇ.92 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ವಾಹನ ಬಳಕೆದಾರರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಹಾಗೂ ಸಂಚಾರ ಪೊಲೀಸರು ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸುವುದು ವರ್ತನೆಯಲ್ಲಿ ಬದಲಾವಣೆಯನ್ನು ತರಲು ಸಹಾಯ ಮಾಡುತ್ತದೆ ಶೇ.50 ರಷ್ಟು ಪ್ರತಿಕ್ರಿಯಿಸಿದ್ದಾರೆ. ಹಾರ್ನ್ ಬಳಕೆಯನ್ನು ಕಡಿಮೆ ಮಾಡಲು ಸಲಹೆಗಳನ್ನು ಕೇಳಿದಾಗ, ಹೆಚ್ಚಿನ ಜನರು ಶಿಕ್ಷಣ, ಅರಿವು ಮೂಡಿಸುವಿಕೆ ಮತ್ತು ಉತ್ತಮ ಸಂಚಾರ ನಿರ್ವಹಣೆ ಆಗಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

BDA 100ನೇ 'ಓಪನ್ ಹೌಸ್' ಸಭೆ: ನಿವಾಸಿಗಳಿಂದ ಉತ್ತಮ ಪ್ರತಿಕ್ರಿಯೆ!

LPU ಕ್ಯಾಂಪಸ್‌ನಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್ ವಾಹನಗಳಿಗೆ ಬೆಂಕಿ, ಪೊಲೀಸರಿಗೆ ಗಾಯ, ತನಿಖೆಗೆ SIT ರಚನೆ!

ಅಕ್ಟೋಬರ್ 7 ರ ದಾಳಿಯ ಮೊದಲು ಹಮಾಸ್‌ ಎಚ್ಚರಿಕೆ ನೀಡಿತ್ತು: ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ ಸ್ಫೋಟಕ ಮಾಹಿತಿ