ಮಡಿಕೇರಿ: ಮಡಿಕೇರಿ ಜಿಲ್ಲೆಯ ಕೆಲವೊಂದು ಗ್ರಾಮಗಳಲ್ಲಿ ಶುಕ್ರವಾರ ಬೆಳಿಗ್ಗೆ ಭೂಮಿ ಲಘುವಾಗಿ ಕಂಪಿಸಿದೆ.
ಲಘು ಭೂಕಂಪನವಾಗಿರುವುದರಿಂದ ಯಾವುದೇ ರೀತಿಯ ಜೀವ ಹಾನಿ ಹಾಗೂ ವಸ್ತು ಹಾನಿ ಆಗಿರುವ ವರದಿಯಾಗಿಲ್ಲ.
ಐಯ್ಯಂಗೇರಿಯಲ್ಲಿ ಇಂದು ಬೆಳಿಗಿನ ಜಾವ ಸುಮಾರು 2.30ರ ವೇಳೆಗೆ ಭೂಮಿ ಕಂಪಿಸಿದ ಅನುಭವ ಇಲ್ಲಿನ ನಿವಾಸಿಗಳಿಗಾಗಿದೆ. ಮಜೀದ್ ಎಂಬುವರ ಮನೆಗೆ ಭಾಗಶ: ಹಾನಿಯಾಗಿದೆ.
ಕಳೆದೊಂದು ತಿಂಗಳಿನಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗಿನಾದ್ಯಂತ ಪ್ರವಾಹ ಪರಿಸ್ಥಿತಿಯಿದ್ದು ಜನರನ್ನು ಚಿಂತೆಗೀಡುಮಾಡಿರುವ ನಡುವೆಯೇ ಇಂದು ಲಘು ಕಂಪನದ ಅನುಭವವಾಗಿರುವುದು ಮಡಿಕೇರಿ ಜನತೆಯಲ್ಲಿ ಆತಂಕ ಉಂಟುಮಾಡಿದೆ.