ಜೀವನಶೈಲಿ

ಯುವತಿಯರ ನಕಾರಾತ್ಮಕ ವ್ಯಕ್ತಿತ್ವಕ್ಕೆ ಮದ್ಯಸೇವನೆಯೂ ಕಾರಣ!

Srinivas Rao BV
ನ್ಯೂಯಾರ್ಕ್: ಅನಗತ್ಯವಾಗಿ ತೂಕ ಇಳಿಸಿಕೊಳ್ಳುವುದು ಅಥವಾ ಹೆಚ್ಚಿಸಿಕೊಳ್ಳುವ ಬಯಸುವ, ಪ್ರೌಢಶಾಲಾ ಯುವತಿಯರು ನಕಾರಾತ್ಮಕ ವ್ಯಕ್ತಿತ್ವಕ್ಕೆ ಮದ್ಯಸೇವನೆಯೂ ಕಾರಣ ಎಂದು ಸಮೀಕ್ಷೆಯೊಂದು ಹೇಳಿದೆ. 
ನಕಾರಾತ್ಮಕ ವ್ಯಕ್ತಿತ್ವ, ನಕಾರಾತ್ಮಕ ನಡವಳಿಕೆಗಳಿಗೆ ಕಾರಣವಾಗಲಿದೆ ಇದಕ್ಕೆ ಮದ್ಯ ಸೇವನೆ ಕಾರಣ ಎಂದು ಬೋಸ್ಟನ್ ನಲ್ಲಿರುವ ಟಫ್ಟ್ಸ್ ವಿವಿ ಸ್ಕೂಲ್ ನ ಹಿರಿಯ ಪ್ರಾಧ್ಯಾಪಕರು ಅಭಿಪ್ರಾಯಪಟ್ಟಿದ್ದಾರೆ. " ಪ್ರೌಢ ಶಾಲೆಯ ಯುವತಿಯರಲ್ಲಿರುವ ನಕಾರಾತ್ಮಕ ವ್ಯಕ್ತಿತ್ವಕ್ಕೂ  ಮದ್ಯ ಸೇವನೆಗೂ ಸಂಬಂಧವಿರುವುದನ್ನು ಸಮೀಕ್ಷೆ ಮೂಲಕ ಕಂಡುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 
ಮದ್ಯ ಹಾಗೂ ಡ್ರಗ್ಸ್ ಕುರಿತ ಅಧ್ಯಯನಗಳನ್ನು ಪ್ರಕಟಿಸುವ ಜರ್ನಲ್ ನಲ್ಲಿ ಸಮೀಕ್ಷೆಯ ವರದಿ ಪ್ರಕಟವಾಗಿದೆ. ವ್ಯಕ್ತಿತ್ವದ ಮೇಲೆ ಮದ್ಯ ಸೇವನೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ನ್ಯಾಷನಲ್ ಯೂತ್ ರಿಸ್ಕ್ ಬಿಹೇವಿಯರ್ ಸರ್ವಿಜಿಲೆನ್ಸ್ ಸಿಸ್ಟಂ ನ 2013 ರಿಂದ ಅಂಕಿ-ಅಂಶಗಳನ್ನು ಪಡೆಯಲಾಗಿದ್ದು, 14 ಹಾಗೂ 18 ವಯಸ್ಸಿನ ಮೇಲ್ಪಟ್ಟ 6,579 ಯುವತಿಯರನ್ನು ಸಮೀಕ್ಷೆಗೊಳಪಡಿಸಲಾಗಿದೆ. 
SCROLL FOR NEXT