ಜೀವನಶೈಲಿ

ಆರೋಗ್ಯಕರ ಜೀವನಶೈಲಿಗೆ ಕಡಿಮೆ ಪ್ರಮಾಣದಲ್ಲಿ ತಿನ್ನಿ

Sumana Upadhyaya
ಪೌಷ್ಟಿಕಯುಕ್ತ ಆಹಾರಗಳನ್ನು ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕರ ಜೀವನಶೈಲಿಯ ಗುಟ್ಟಿನ ಮಂತ್ರವಾಗಿದೆ. ಇಂತಹ ಸಲಹೆಗಳು ಹೊಸದೇನಿರಲಿಕ್ಕಿಲ್ಲ. ನಾವು ತಿನ್ನುವ ಆಹಾರದ ಜೊತೆಗೆ ಬಳಸುವ ತಟ್ಟೆ ಕೂಡ ಮುಖ್ಯವಾಗಿರುತ್ತದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಪರ್ವತದ ನಡುವೆ ಆತ್ಮಾಂತನ್ ಎಂಬ ಕ್ಷೇಮ ತಾಣವಿದೆ. ಇಲ್ಲಿನ ಅತಿಥಿಗಳಿಗೆ ಆಹಾರವನ್ನು ತಿಂಡಿಯ ತಟ್ಟೆಯಲ್ಲಿ ನೀಡಲಾಗುತ್ತದೆ. ತಿಂಡಿ ತಟ್ಟೆಯಲ್ಲಿ ತಿನ್ನುವುದು ಹಿತವೆನಿಸದಿದ್ದರೂ ಕೂಡ ಪ್ರತಿ ಎರಡು ಗಂಟೆಗೊಮ್ಮೆ ಸ್ವಲ್ಪ ಸ್ವಲ್ಪ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ಇಲ್ಲಿನ ಕಾರ್ಯಕಾರಿ ಶೆಫ್ ಶುಬೆಂದು ಕದಮ್. 
ಪ್ರೊ. ಬ್ರಿಯಾನ್ ವಾನ್ಸಿಂಕ್ ಮತ್ತು ಕೊಯೆರ್ಟ್ ವಾನ್ ಇಟ್ಟರ್ಸಮ್ ಅವರು ಪ್ರಕಟಿಸಿದ ಜರ್ನಲ್ ಆಫ್ ಎಕ್ಸ್ಪರಿಮೆಂಟಲ್ ಸೈಕಾಲಜಿಯಲ್ಲಿ, ಹಸಿವಿನ ಪ್ರಮಾಣವನ್ನು ಹೊರತುಪಡಿಸಿ ಜನರು ಸಾಮಾನ್ಯವಾಗಿ ಒಂದು ಪ್ಲೇಟ್ ಅಥವಾ ಬೌಲ್ ಆಹಾರವನ್ನು ಅಪೇಕ್ಷೆ ಪಡುತ್ತಾರೆ. ಅಂದರೆ ಮನುಷ್ಯನ ಆಹಾರ ಸೇವನೆ ಕುರಿತು ತಟ್ಟೆಯ ಗಾತ್ರ ಆತನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. 
ಆರಂಭದಲ್ಲಿ ಅತಿಥಿಗಳಿಗೆ ತಿಂಡಿ-ಊಟದ ತಟ್ಟೆ ನೋಡಿ ಶಾಕ್ ಆಗುತ್ತಿತ್ತು. ಆದರೆ ನಮ್ಮ ಹೊಟ್ಟೆ ತುಂಬಿದೆ ಎಂಬ ಮಾನಸಿಕ ಸ್ಥಿತಿಯಿಂದ ತಿನ್ನುವುದರಿಂದ ನಮ್ಮ ಕ್ರಮಕ್ಕೆ ಹೊಂದಿಕೊಳ್ಳುತ್ತಾರೆ. ನಮ್ಮ ಹೊಟ್ಟೆಯ ಗಾತ್ರ ಎರಡು ಅಂಗೈಯಷ್ಟು ಮಾತ್ರ. ಅಷ್ಟು ಆಹಾರವನ್ನು ಮಾತ್ರ ನಮಗೆ ಒಂದು ಸಲಕ್ಕೆ ತಿನ್ನಲು ಸಾಧ್ಯ.ತಿಂದ ಆಹಾರ ಸಾಕು ಎಂದು ಮೆದುಳಿಗೆ ಸಂದೇಶ ರವಾನೆ ಮಾಡಲು 20 ನಿಮಿಷ ತೆಗೆದುಕೊಳ್ಳುತ್ತದೆ. ಹೀಗಾಗಿ ಆಹಾರವನ್ನು ತಿನ್ನುವಾಗ ಪ್ರತಿ ತುತ್ತನ್ನು ಚೆನ್ನಾಗಿ ಜಗಿದು ನಿಧಾನವಾಗಿ ತಿನ್ನಬೇಕೆನ್ನುವುದು ಎನ್ನುತ್ತಾರೆ ಚೆಫ್.
ಪ್ರತಿ ಎರಡು ಗಂಟೆಗೊಮ್ಮೆ ಸಣ್ಣ ಊಟ ಜೊತೆಗೆ ನೀರು ಕುಡಿಯಬೇಕು. ಪುಣೆಯ ಮ್ಯಾರಥಾನ್ ಮತ್ತು ಸಾಫ್ಟ್ ವೇರ್ ಎಂಜಿನಿಯರ್ ಸುಧಾಕರ್ ಪ್ರತಿದಿನ ಕಚೇರಿಗೆ ಮಧ್ಯಾಹ್ನದ ಊಟಕ್ಕೆ ಹುರಿದ ನೆಲಗಡಲೆ, ಹಣ್ಣುಗಳು, ಸಲಾಡ್ ಮತ್ತು ಒಣ ಹಣ್ಣುಗಳನ್ನು ಕೊಂಡೊಯ್ಯುತ್ತಾರೆ.
SCROLL FOR NEXT