ಸಾಂದರ್ಭಿಕ ಚಿತ್ರ 
ಜೀವನಶೈಲಿ

ಅನಿಯಮಿತ ಕೆಲಸದ ಸಮಯ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ತಗ್ಗಿಸಬಹುದು

ಅನಿಯಮಿತ ದುಡಿಮೆ ಪುರುಷರಲ್ಲಿ ಲೈಂಗಿಕ ಕ್ರಿಯೆಯ ಶಕ್ತಿಯನ್ನು ಕುಂಠಿತಗೊಳಿಸಿ...

ನವದೆಹಲಿ: ಅನಿಯಮಿತ ದುಡಿಮೆ ಪುರುಷರಲ್ಲಿ ಲೈಂಗಿಕ ಕ್ರಿಯೆಯ ಶಕ್ತಿಯನ್ನು ಕುಂಠಿತಗೊಳಿಸಿ ಮಕ್ಕಳಾಗುವ ಅವಕಾಶವನ್ನು ಕಡಿಮೆ ಮಾಡುತ್ತದೆ.
ಹೆಚ್ಚಿನ ದುಡಿಮೆಯಿಂದ ನಿದ್ರಾಭಂಗವಾಗುತ್ತದೆ. ಇದರಿಂದ ಅನೇಕ ಖಾಯಿಲೆಗಳು ಕೂಡ ಬರುತ್ತದೆ ಎನ್ನುತ್ತದೆ ಅಧ್ಯಯನ. ಸ್ಥೂಲಕಾಯ, ಹೃದ್ರೋಗ ಸಮಸ್ಯೆಯಂತಹ ಖಾಯಿಲೆಗಳು ತಲೆದೋರುತ್ತವೆ.
ಒಬ್ಬ ಮನುಷ್ಯನಿಗೆ ದಿನಕ್ಕೆ ಸರಾಸರಿ 7ರಿಂದ 8 ಗಂಟೆಯ ನಿದ್ದೆಯ ಅವಶ್ಯಕತೆಯಿದೆ. ಇಂದಿನ ಒತ್ತಡದ ವೇಗದ ಜೀವನಶೈಲಿಯಲ್ಲಿ ಅನಿಯಮಿತ ಕೆಲಸದ ಸಮಯಗಳು, ಹೆಚ್ಚಿನ ಅವಧಿಯ ದುಡಿಮೆ ಮತ್ತು ಇತರ ಅಂಶಗಳು ನಿದ್ದೆ ಮತ್ತು ವಿಶ್ರಾಂತಿಯನ್ನು ಕಡಿಮೆ ಮಾಡುತ್ತದೆ.
ದೆಹಲಿಯ ಐವಿಎಫ್ & ಫೋರ್ಟಿಸ್ ಲಾ ಫೆಮ್ಮ್ ಆಸ್ಪತ್ರೆಯ ನಿರ್ದೇಶಕ ಡಾ.ಹೃಷಿಕೇಶ್ ಡಿ ಪೈ, ಶಿಫ್ಟ್ ಗಳಲ್ಲಿ ಕೆಲಸ ಮಾಡುವವರಿಗೆ ಇಂತಹ ಆರೋಗ್ಯ ಸಮಸ್ಯೆಗಳು ತೀವ್ರವಾಗಿ ಕಾಡುತ್ತವೆ ಎಂದು ಹೇಳುತ್ತಾರೆ.
ಕೆಲಸದ ಶೈಲಿ ಉದ್ಯೋಗಿಗಳ ಆರೋಗ್ಯ, ಅವರ ನಿದ್ದೆ, ಆಹಾರ ಸೇವನೆ ಮೇಲೆ ಕೂಡ ಪರಿಣಾಮ ಬೀರುತ್ತದೆ.
ನಿದ್ದೆಯ ಕೊರತೆಯಿಂದ ಮೂತ್ರದ ಸಮಸ್ಯೆ, ಸೋಂಕು ಉಂಟಾಗುವ ಸಾಧ್ಯತೆಯಿದೆ.ಅನಿಯಮಿತ ಜೀವನಶೈಲಿಯಿಂದ ಪುರುಷರಲ್ಲಿ  ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುತ್ತದೆ.
ಟೆಸ್ಟಾಸ್ಟೆರಾನ್ ಹಾರ್ಮೋನ್ ಗಳು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಪ್ರಚೋದಿಸಲು ಇರುವ ಹಾರ್ಮೋನ್ ಆಗಿದೆ. ಈ ಹಾರ್ಮೋನ್ ನ ಮಟ್ಟ ಕಡಿಮೆಯಾದರೆ ಕಡಿಮೆ ಗುಣಮಟ್ಟದ ಸೆಮೆನ್ ಉತ್ಪಾದನೆಯಾಗುತ್ತದೆ ಮತ್ತು ಮುಂದೆ ಮಕ್ಕಳು ಹುಟ್ಟಲು ತೊಂದರೆಯಾಗಬಹುದು.
ಪುರುಷರ ಆರೋಗ್ಯದಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ಜೀವನ ಶೈಲಿಯಿಂದ, ಲಿಂಗ-ಬಾಗುವ ರಾಸಾಯನಿಕಗಳು ಪರಿಸರದಲ್ಲಿ ಇರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ಲೈಂಗಿಕ ಫಲವತ್ತತೆಯ ಮಟ್ಟ ಕಡಿಮೆಯಾಗಿದೆ.
ಅತಿ ಹೆಚ್ಚು ಮತ್ತು ಅತಿ ಕಡಿಮೆ ನಿದ್ದೆ ಮಾಡುವುದರಿಂದ ದೇಹದ ಸಿರ್ಕಾಡಿಯನ್ ರಿದಮ್ ಮೇಲೆ ಪರಿಣಾಮ ಬೀರುತ್ತದೆ. ಸಿರ್ಕಾಡಿಯನ್ ರಿದಮ್ ಸ್ಲೀಟ್ ಹಾರ್ಮೋನ್ ಮೆಲಟೋನಿನ್ ಮತ್ತು ಕಾರ್ಟಿಸೋಲ್ನ ಉತ್ಪಾದನೆಯನ್ನು ನಿಯಂತ್ರಿಸುತ್ತದೆ, ಇದು ಒತ್ತಡವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಕೆಲವು ಟಿಪ್ಸ್ ಗಳು: 
1. ಸತತವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದನ್ನು ಆದಷ್ಟು ತಪ್ಪಿಸಿಕೊಳ್ಳಿ.
2. ಆಗಾಗ ಬದಲಾಗುತ್ತಿರುವ ಶಿಫ್ಟ್ ಗಳನ್ನು ಕೂಡ ತಪ್ಪಿಸಿಕೊಳ್ಳಿ.
3. ನಿಮ್ಮ ಕೆಲಸದ ಸ್ಥಳದಲ್ಲಿ ಸಾಕಷ್ಟು ಗಾಳಿ, ಬೆಳಕು ಬರುತ್ತಿರಲಿ.
4. ಮನೆಯಲ್ಲಿ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ.
5. ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ.
6. ಪ್ರತಿದಿನ ಸರಿಯಾದ ಸಮಯಕ್ಕೆ ಮಲಗುವುದು, ಸರಿಯಾದ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT