ವಾಷಿಂಗ್ ಟನ್: ಪುರುಷರಿಗಿಂತ ಮಹಿಳೆಯರಿಗೆ ಧೂಮಪಾನ ತ್ಯಜಿಸುವುದು ಸವಾಲಿನ ಸಂಗತಿ ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.
ಯಾವುದೇ ವ್ಯಕ್ತಿ ಧೂಮಪಾನ ಮಾಡಿದರೆ ತಂಬಾಕು ಹಾಗೂ ನಿಕೋಟಿನ್ ನೇರವಾಗಿ ಶ್ವಾಸಕೋಶಕ್ಕೆ ಸೇರುತ್ತದೆ. ಆದರೆ ಸ್ಕಿನ್ ಪ್ಯಾಚಸ್ ನಿಂದಾಗಿ ಹಾಗೂ ತಂಬಾಕು ಜಗಿಯುವುದರಿಂದ ನಿಕೋಟಿನ್ ಚರ್ಮ ಹಾಗೂ ಜೀರ್ಣವ್ಯವಸ್ಥೆಯೊಳಗೂ ಸೇರುತ್ತದೆ. ತಂಬಾಕು, ನಿಕೋಟಿನ್ ನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಗಂಡು ಹಾಗೂ ಹೆಣ್ಣು ಇಲಿಗಳ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರಿದೆ.
ನರಮಂಡಲಕ್ಕೆ ಸಂಬಂಧಿಸಿರುವ ಕಾಂಪೌಂಡ್ ಗಳ ಪ್ರಮಾಣ, ಬ್ಯಾಕ್ಟೀರಿಯಾ ಜೀನ್ಗಳು ಗಂಡು ಹಾಗೂ ಹೆಣ್ಣು ಇಲಿಗಳಲ್ಲಿ ಭಿನ್ನವಾಗಿದ್ದು, ಹೆಣ್ಣಿನಲ್ಲಿ ಧೂಮಪಾನ ವ್ಯಸನಕ್ಕೀಡಾಗುವ ಅಂಷಗಳು ಹೆಚ್ಚು ಕಂಡುಬಂದಿದ್ದು, ಗಂಡಿನಲ್ಲಿ ಕಡಿಮೆ ಪ್ರಮಾಣ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಧೂಮಪಾನ ತ್ಯಜಿಸುವುದು ಪುರುಷರಿಗಿಂತ, ಮಹಿಳೆಯರಿಗೆ ಕಷ್ಟ ಎಂದು ಸಂಶೋಧಕರು ವಿಶ್ಲೇಷಿಸುತ್ತಿದ್ದಾರೆ.