ಎಲ್ಇಡಿ ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯ!
ಎಲ್ಇಡಿ ಪರದೆಗಳು ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಗಳ ಅಪಾಯ ಹೆಚ್ಚು ಎಂದು ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡ ಹೇಳಿದೆ.
ಲಂಡನ್: ಎಲ್ಇಡಿ ಪರದೆಗಳು ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಗಳ ಅಪಾಯ ಹೆಚ್ಚು ಎಂದು ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡ ಹೇಳಿದೆ.
ಬ್ರಿಟನ್ ನ ಎಕ್ಸೆಟರ್ ವಿಶ್ವವಿದ್ಯಾಲಯ ಹಾಗೂ ಬಾರ್ಸಿಲೋನಾ ಇನ್ಶ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಈ ಬಗ್ಗೆ ಸಂಶೋಧನೆ ನಡೆದಿದ್ದು, ಎಲ್ಇಡಿ ಪರದೆಯಿಂದ ಹೊರಸೂಸುವ ನೀಲಿ ಬೆಳಕಿಗೂ ಸ್ತನ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯ ಹೆಚ್ಚುವುದಕ್ಕೂ ಒಂದಕ್ಕೊಂದು ಸಂಬಂಧವಿರುವುದು ದೃಢಪಟ್ಟಿದೆ.
ಒಳಾಂಗಣದಲ್ಲಿ ಎಲ್ ಇಡಿಗಳು ಹೊರಸೂಸುವ ನೀಲಿ ಬೆಳಕು ಹಾಗೂ ಹೊರಾಂಗಣದಲ್ಲಿ ಎಲ್ಇಡಿಗಳು ಹೊರಸೂಸುವ ನೀಲಿ ಬೆಳಕಿಗೆ ತೆರೆದುಕೊಳ್ಳುವ ಸ್ಪೇನ್ ಹಾಗೂ ಬಾರ್ಸಿಲೋನಾದಲ್ಲಿನ 20-85 ವರ್ಷದ ಸುಮಾರು 4,000 ಜನರನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ಎಲ್ಇಡಿ ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಗೆ ತುತ್ತಾಗುವ ಅಪಾಯ ಶೇ.1.5 ರಿಂದ 2 ಪಟ್ಟು ಹೆಚ್ಚಾಗಿರುವುದನ್ನು ಕಂಡುಕೊಳ್ಳಲಾಗಿದೆ. ಈ ಕುರಿತ ಅಧ್ಯಯನ ವರದಿ ಪರಿಸರ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟಗೊಂಡಿದೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.