ಜೀವನಶೈಲಿ

ಕಡಿಮೆ ನಿದ್ದೆ ಮಾಡ್ಬೇಡಿ, ಕೋಪ ಜಾಸ್ತಿ ಆಗುತ್ತೆ!

"ಕೋಪಗೊಳ್ಳುವುದಕ್ಕೆ ಹಲವಾರು ಕಾರಣಗಳಿರುತ್ತವೆ, ಈ ಪೈಕಿ ಕಡಿಮೆ ನಿದ್ದೆ ಮಾಡುವುದೂ ಸಹ ಒಂದು ಅಂದರೆ ನೀವು ನಂಬಲೇಬೇಕು" ಹೀಗಂತ ಅಮೆರಿಕದ ರಾಜ್ಯ ವಿಶ್ವವಿದ್ಯಾನಿಲಯ ಸಂಶೋಧನೆ ಹೇಳುತ್ತಿದೆ.

ನವದೆಹಲಿ: "ಕೋಪಗೊಳ್ಳುವುದಕ್ಕೆ ಹಲವಾರು ಕಾರಣಗಳಿರುತ್ತವೆ, ಈ ಪೈಕಿ ಕಡಿಮೆ ನಿದ್ದೆ ಮಾಡುವುದೂ ಸಹ ಒಂದು ಅಂದರೆ ನೀವು ನಂಬಲೇಬೇಕು" ಹೀಗಂತ ಅಮೆರಿಕದ ರಾಜ್ಯ ವಿಶ್ವವಿದ್ಯಾನಿಲಯ ಸಂಶೋಧನೆ ಹೇಳುತ್ತಿದೆ. 
ಎಕ್ಸ್ಪರಿಮೆಂಟಲ್ ಸೈಕಾಲಜಿ: ಜನರಲ್ ಜರ್ನಲ್ ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, ಕಡಿಮೆ ನಿದ್ದೆ ಮಾಡುವುದೂ ಸಹ  ಕೋಪಗೊಳ್ಳುವುದಕ್ಕೆ ಕಾರಣ ಎಂದು ಹೇಳಿದೆ. ಇದರ ಹೊರತಾಗಿಯೂ ಅನೇಕ ಅಧ್ಯಯನ ವರದಿಗಳು ನಿದ್ದೆ ಹಾಗೂ ಕೋಪಕ್ಕೆ ಸಂಬಂಧವಿದೆ ಎಂದು ಹೇಳಿವೆ, ಆದರೆ ಕೋಪಗೊಳ್ಳುವುದಕ್ಕೆ ಕಡಿಮೆ ನಿದ್ದೆ ಕಾರಣವೋ ಅಥವಾ, ನಿದ್ದೆ ಹಾಳಾಗುವುದಕ್ಕೆ ಕೋಪ ಕಾರಣವೋ ಎಂಬ ಬಗ್ಗೆ ಪ್ರಶ್ನೆಗಳು ಹಾಗೆಯೇ ಉಳಿದಿವೆ ಎಂದು ಪ್ರೊಫೆಸರ್ ಝ್ಲಾಟನ್ ಕಿರಿಸನ್ ಹೇಳಿದ್ದಾರೆ. 
ದಣಿದ ಸಂದರ್ಭದಲ್ಲಿ ಕಿರಿಕಿರಿಯ ಪರಿಸ್ಥಿತಿಗಳಲ್ಲಿ ಓರ್ವ ವ್ಯಕ್ತಿಯ ಹೊಂದಾಣಿಕೆ ಸಾಮರ್ಥ್ಯದ ಬಗ್ಗೆ ತಿಳಿದುಕೊಳುವುದಕ್ಕೆ ಈ ಸಂಶೋಧನೆ ಸಹಕಾರಿ ಎಂದು ಪ್ರೊಫೆಸರ್ ಗಳು ಹೇಳಿದ್ದಾರೆ.  ಅಧ್ಯಯನದ ಭಾಗವಾಗಿದ್ದವರಲ್ಲಿ ಕೆಲವರಿಗೆ ನಿದ್ದೆಗೆ ನಿರ್ಬಂಧ ವಿಧಿಸಲಾಗುತ್ತಿತ್ತು. ಈ ವೇಳೆ ಅವರ ಅವರ ಕೋಪವೂ ಹೆಚ್ಚಾಗುತ್ತಿತ್ತು. ಇದನ್ನೇ ಕಿರಿಕಿರಿ ಪರಿಸ್ಥಿತಿಗಳಲ್ಲಿ ಓರ್ವ ವ್ಯಕ್ತಿಯ ಹೊಂದಾಣಿಕೆ ಸಾಮಾರ್ಥ್ಯದೊಂದಿಗೆ ಹೋಲಿಕೆ ಮಾಡಲಾಯಿತು. ಮತ್ತೊಂದು ಗುಂಪಿಗೆ ಸಾಮಾನ್ಯವಾಗಿ ನಿದ್ದೆ ಮಾಡಲು ಅವಕಾಶ ನೀಡಲಾಗಿತ್ತು.  ಆದರೆ ನಿದ್ದೆ ಕಡಿಮೆಯಾದವರಲ್ಲಿ ಹೆಚ್ಚು ಬದಲಾವಣೆ ಕಂಡುಬಂದಿತ್ತು ಎಂದು ಝ್ಲಾಟನ್ ಕಿರಿಸನ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್