ಜೀವನಶೈಲಿ

ಒಂಟಿಯಾಗಿರುವುದಕ್ಕಿಂತ ಒಂಟಿತನದ ಭಾವನೆ ಜೀವಕ್ಕೆ ಹೆಚ್ಚು ಅಪಾಯಕಾರಿ

Srinivas Rao BV
ಒಂಟಿಯಾಗಿರುವುದಕ್ಕಿಂತಲೂ ಒಂಟಿತನದ ಭಾವನೆ ಹೆಚ್ಚು ಅಪಾಯಕಾರಿ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ. 
ಒಂಟಿತನದ ಭಾವನೆ ಕಾಡುವ ಪುರುಷ ಹಾಗೂ ಮಹಿಳೆಯರು ನಿಜವಾಗಿಯೂ ಒಂಟಿಯಾಗಿರುವವರಿಗಿಂತ ಹೆಚ್ಚಾಗಿ ಮಾನಸಿಕ ಅನಾರೋಗ್ಯ ಹಾಗೂ ಹೃದಯ ಸಮಸ್ಯೆಗಳನ್ನು ಹೊಂದಿರುತ್ತಾರೆ ಎನ್ನುತ್ತಿದೆ  ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯ ಆಸ್ಪತ್ರೆಯ ಅಧ್ಯಯನ ವರದಿ. 
"ವ್ಯಕ್ತಿಯ ಆಯುಷ್ಯ ಕ್ಷೀಣಿಸುವುದನ್ನು, ಮಾನಸಿಕ ಅನಾರೋಗ್ಯ, ಹೃದಯ ಸಂಬಂಧಿ ಸಮಸ್ಯೆಗಳನ್ನು ಆ ವ್ಯಕ್ತಿಯನ್ನು ಕಾಡುವ ಒಂಟಿತನದಿಂದ ಊಹಿಸಬಹುದು. ಆದರೆ ನಿಜವಾಗಿಯೂ ಒಂಟಿಯಾಗಿ ಬದುಕುವುದಕ್ಕಿಂತ ಒಂಟಿತನದ ಭಾವನೆ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಅಧ್ಯಯನ ವರದಿಯಲ್ಲಿ ತೊಡಗಿದ್ದ ವೈದ್ಯ ವಿದ್ಯಾರ್ಥಿನಿ ಅನ್ನೆ ವಿಂಗ್ಗಾರ್ಡ್ ಕ್ರಿಸ್ಟೇನ್ಸೆನ್, ಡಾಕ್ಟರ್ ವಿದ್ಯಾರ್ಥಿ. 
ಒಂಟಿಯಾಗಿರುವುದು ಅವಧಿಗೂ ಮುನ್ನವೇ ಬರುವ ಸಾವು ಹಾಗೂ ಅನಾರೋಗ್ಯದ ಅಪಾಯವನ್ನು ದುಪ್ಪಟ್ಟಾಗಿಸಿದರೆ, "ನಾನು ಒಂಟಿಯಾಗಿದ್ದೇನೆ" ಎನ್ನುವ ಭಾವನೆ ಆತಂಕ, ಖಿನ್ನತೆ ಹಾಗೂ ಸಾವಿನ ಅಪಾಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿ ಹೇಳಿದೆ. 
ಡಬ್ಲಿನ್ ನಲ್ಲಿ ನಡೆಯಲಿರುವ 2018 ರ ನರ್ಸಿಂಗ್ ಕಾಂಗ್ರೆಸ್ ಯೂರೋ ಹೆಲ್ತ್ ಕೇರ್ ನಲ್ಲಿ ಅಧ್ಯಯನ ವರದಿಯನ್ನು ಮಂಡಿಸಲಾಗಿದೆ.  ಅನಿಯಮಿತ ಹೃದಯ ಬಡಿತ, ಹೃದಯ ಕವಾಟ ಸಮಸ್ಯೆ ಸೇರಿದಂತೆ ವಿದಿಧ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿದ್ದ 13, 463 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಅವರ ಸಮಾಜಿಕ ಸಂಬಂಧಗಳು ಇದಕ್ಕೆ ಕಾರಣವೇ? ಎಂಬುದರ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ. 
ಸಾಮಾಜಿಕ ಸಂಬಂಧಗಳಿಂದ ದೂರ ಇದ್ದವರು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗಿದ್ದು, ಜೀವನ ಶೈಲಿಯಂತೆಯೇ ಒಂಟಿತನದ ಭಾವನೆಯೂ ಸಹ ಅಪಾಯಕಾರಿ ಎಂಬುದು ತಿಳಿದುಬಂದಿದೆ ಎಂದು ಕ್ರಿಸ್ಟೇನ್ಸೆನ್ ಹೇಳಿದ್ದಾರೆ. 
SCROLL FOR NEXT