ಜೀವನಶೈಲಿ

ಸ್ಮಾರ್ಟ್‏ಪೋನ್ ವ್ಯಸನದಿಂದ 'ಅತಿ-ಸಾಮಾಜಿಕ' ನಡವಳಿಕೆಯ ಅನಾವರಣ!

Nagaraja AB

ಟೊರೊಂಟೊ : ಸ್ಮಾರ್ಟ್ ಪೋನ್ ಗಳ ವ್ಯಸನದಿಂದ ಅತಿ ಸಾಮಾಜಿಕ ನಡವಳಿಕೆ ಅನಾವರಣಗೊಳ್ಳಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂತಹ ಅತಿ ಸಾಮಾಜಿಕ ನಡವಳಿಕೆಯಿಂದ ಆರೋಗ್ಯಕರ ಮನುಷ್ಯರು ಸಮಾಜದಲ್ಲಿ ಬೆರೆಯದಂತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸ್ಮಾರ್ಟ್ ಪೋನ್ ಗಳ ವ್ಯಸನಿಗಳು ಹಾಗೂ ಇತರರನ್ನು  ನೋಡಿದಾಗ  ಹಿಂದಿನದ್ದನ್ನು ನೆನಪು ಮಾಡಿಕೊಳ್ಳುವಲ್ಲಿಯೂ  ಹಿಂದೆ ಬಿದ್ದಿದ್ದು, ಇತರ ಜನರೊಂದಿಗೆ ಬೇರೆಯುತ್ತಿಲ್ಲ ಎಂಬುದುನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. .

 ಗುರಿ ಸಾಧನೆ ಹಾಗೂ ಗುರುತಿಸಿಕೊಳ್ಳುವ ಮನೋಬಾವದಲ್ಲಿಯೂ ದಾರಿ ತಪ್ಪುವಂತಹ ಸಾಧ್ಯತೆಯೂ ಹೆಚ್ಚಾಗಿದೆ. ಸಮೃದ್ಧ ಸಿದ್ಧ ಆಹಾರ ದೊರೆತ್ತಿದ್ದರೂ ಮಾನಸಿಕ ಒತ್ತಡದಿಂದಾಗಿ ಡಯಾಬಿಟಿಸ್, ಅಜೀರ್ಣ, ಮತ್ತಿತರ ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚಾಗಬಹುದು ಎಂದು ಕೆನಡಾದ ಮ್ಯಕ್ ಗಿಲ್ ವಿಶ್ವವಿದ್ಯಾಲಯ ಪ್ರೋಪೆಸರ್ ಸ್ಯಾಮುಯೆಲ್ ವೈಸಿರ್ ಹೇಳುತ್ತಾರೆ.

ಈ ಮಧ್ಯೆ ಸ್ಮಾರ್ಟ್ ಪೋನ್ ನ್ನು ಆರೋಗಕರ ಸಮಾಜದ ದೃಷ್ಟಿಯಿಂದ ಬಳಸುವುದು ಅಗತ್ಯ. ಆದರೆ, ಅತಿಯಾಗಿ ಬಳಸುವುದರಿಂದ
 ಮಿದುಳಿನ ಮೇಲೂ ಪರಿಣಾಮ ಬೀರುವ ಮೂಲಕ ಅನಾರೋಗ್ಯಕರ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

SCROLL FOR NEXT