ಚರಕ 
ಜೀವನಶೈಲಿ

ದಿನಕ್ಕೊಂದು ಗಂಟೆ ಚರಕದಲ್ಲಿ ನೂಲುವುದರಿಂದ ಮಾನಸಿಕ ಏಕಾಗ್ರತೆ ಹೆಚ್ಚಳ: ವರದಿ

ದಿನವೊಂದಕ್ಕೆ ಒಂದು ಗಂಟೆಯವರೆಗೆ ಚರಕದಲ್ಲಿ ನೂಲುವುದರಿಂದ ಮನಸ್ಸಿನ ಏಕಾಗ್ರತೆ ಕಾರ್ಯ ಸಾಮರ್ಥ್ಯ, ಮಕ್ಕಳ-ಯುವಕರ ತಾಳ್ಮೆ ಮತ್ತು ಮಾನಸಿಕ, ದೈಹಿಕ.....

ನವದೆಹಲಿ: ದಿನವೊಂದಕ್ಕೆ ಒಂದು ಗಂಟೆಯವರೆಗೆ ಚರಕದಲ್ಲಿ ನೂಲುವುದರಿಂದ ಮನಸ್ಸಿನ ಏಕಾಗ್ರತೆ ಕಾರ್ಯ ಸಾಮರ್ಥ್ಯ, ಮಕ್ಕಳ-ಯುವಕರ  ತಾಳ್ಮೆ ಮತ್ತು ಮಾನಸಿಕ, ದೈಹಿಕ ಸಮನ್ವಯವನ್ನು ಸುಧಾರಿಸುತ್ತದೆ ಎಂದು ಅದ್ಯಯನವೊಂದು ವಿವರಿಸಿದೆ.
ಬ್ರೈನ್ ಬಿಹೇವಿಯರ್ ರಿಸರ್ಚ್ ಫೌಂಡೇಶನ್ ಆಫ್ ಇಂಡಿಯಾ (ಬಿಬಿಆರ್ಎಫ್ಐ) ನಡೆಸಿದ ಅಧ್ಯಯನದಲ್ಲಿ ಚರಕದಿಂದ ನೂಲುವುದರ ಹಿಂದಿನ ಸಾಮಾಜಿಕ ಪ್ರಸ್ತುತತೆಯನ್ನು ವಿಶ್ಲೇಷಿಸಿಸಲಾಗಿದೆ.
ಒಂದು ತಿಂಗಳ ಕಾಲ ನಡೆಸಿದ ಸಂಶೋಧನೆಯಲ್ಲಿ, 10 ರಿಂದ 18 ವರ್ಷ ವಯಸ್ಸಿನ 30 ಮಕ್ಕಳು, ಯುವಕರು ಪಾಲ್ಗೊಂಡು ಪ್ರತಿನಿತ್ಯ ಚರಕದಲ್ಲಿ ನೂಲುವುದರ ಮೂಲಕ ಧನಾತ್ಮಕ ಮತ್ತು ಹಿತವಾದ ಪರಿಣಾಮಗಳನ್ನು ಕಂಡಿದ್ದಾರೆ. ಸಂಶೋಧನೆಯಲ್ಲಿ ಪಾಲ್ಗೊಂಡವರ ಬ್ರೈನ್ ಮ್ಯಾಪಿಂಗ್ ಹಾಗೂ ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (ಇಇಜಿ) ಮಾಡುವ ಮೂಲಕ ಪ್ರಯೋಗಕ್ಕೆ ಮುನ್ನಿನ ಹಾಗೂ ನಂತರದ ಬೆಳವಣಿಗೆಗಳನ್ನು ಕಂಡುಕೊಳ್ಳಲಾಗಿದೆ. ಅಲದೆ ಅವರುಗಳ ವಿಶೇಷ ವ್ಯಕ್ತಿತ್ವ, ಐಕ್ಯೂ ಮಾಪನವನ್ನು ಸಹ ನಡೆಸಲಾಗಿದೆ.
ತಾವು ನಡೆಸಿದ ಈ ಅದ್ಯಯನ ಎಲ್ಲಾ ವಲಯಗಳಲ್ಲಿ ಧನಾತ್ಮಕ ಅಂಶಗಳನ್ನು ತೋರಿಸಿದೆ ಎಂದು ಬಿಬಿಆರ್ಎಫ್ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಚರಕದಲ್ಲಿ ನೂಲುವುದರ ಕುರಿತು ವೈಜ್ಞಾನಿಕ ತಳಹದಿಯೊಂದು ದೊರೆತಂತಾಗಿದೆ ಎಂದು ಹೇಳಿದೆ.
ಸಂಸ್ಕೃತಿ ಸಚಿವಾಲಯ ಗಾಂಧಿ ದರ್ಶನ್ ಪ್ರಾಯೋಜಿಸಿದ್ದ ಈ ಅದ್ಯಯನ ಮಾನಸಿಕ ಸಮಸ್ಯೆಗಳು, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಮಾನಸಿಕ ಆರೋಗ್ಯದ ಮೇಲಿನ ವ್ಯಾಖ್ಯಾನದ ಕುರಿತು ಬೆಳಕು ಚೆಲ್ಲುತ್ತದೆ.
ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯವು ಹೆಚ್ಚು ಪ್ರಾಮುಖ್ಯವಾಗಿದೆ  ಏಮ್ಸ್ ನಲ್ಲಿ ರೋಗಿಗಳ ಕುಟುಂಬದ ಸದಸ್ಯರು  ರೋಗಿಗಳ ಮಾನಸಿಕ ಸ್ಥಿತಿ ಸುಧಾರಣೆಗಾಗಿ ನಮ್ಮ ಮನೋವಿಜ್ಞಾನ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ರಾಜೇಶ್ ಮಲ್ಹೋತ್ರ ಹೇಳಿದರು.
ಭಾರತದಲ್ಲಿ ಮಾನಸಿಕ ಆರೋಗ್ಯದ ಸ್ಥಿತಿಯನ್ನು ಕುರಿತು ಮಾತನಾಡಿದ ಅವರು, ಮಾನಸಿಕ ಆರೋಗ್ಯದ ಬಗ್ಗೆ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿದೆ. ಮುಖ್ಯವಾಗಿ ಜನರು ಈ ಸಮಸ್ಯೆಯ ಕುರಿತು ಮನಸ್ಸು ಬಿಚ್ಚಿ ಮಾತನಾಡಲು ಹಿಂಜರಿಯುತ್ತಾರೆ. ನಾವು ಸಮಾಜದ ಒಂದು ಅಂಗವಾಗಿದ್ದು ಈ ವರ್ತನೆಯನ್ನು ಬದಲಿಸಬೇಕಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

SCROLL FOR NEXT