ನ್ಯೂಯಾರ್ಕ್: ವ್ಯಾಯಾಮದ ಮೂಲಕ ಮೆದುಳಿನ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯ, ಹೀಗೆ ವ್ಯಾಯಾಮ ಮಾಡುವ ಕಾರಣ ಮೂಳೆಗಳಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಹಾರ್ಮೋನ್ ಅನು ಸಂಶೋಧಕರು ಗುರುತಿಸಿದ್ದಾರೆ.
ಈ ಹಾರ್ಮೋನ್ ಮೇಲಿನ ಅಧ್ಯಯನದಿಂದಾಗಿ ವ್ಯಾಯಾಮದಂತಹಾ ಕೆಲಸದಿಂದ ಜೀಅನಶೈಲಿ ಬದಲಾದರೆ ಅದು ಮೆದುಳಿನ ಮೇಲೆ ಹೇಗೆ ಪರಿನಾಮ ಬಿರುತ್ತದೆ ಎನ್ನುವುದನ್ನು ಕುರಿತಂತೆ ಹೊಸ ಒಳನೋಟ ದೊರಕಿದೆ.
ಸಾಧಾರಣವಾಗಿ ಎಲ್ಲರೂ ತಮ್ಮ ಜೀವಿತಾವಧಿಯಲ್ಲಿ ವಯಸ್ಸಾಗುತ್ತಾ ಬಂದಂತೆ ನೆನಪಿನ ಶಕ್ತಿ ಕುಂದುತ್ತಾ ಸಾಗುತ್ತದೆ.ಅದರ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ತಡೆಯಲಿ ಈ ಸಂಶೋಧನೆ ಅತ್ಯಂತ ಮುಖ್ಯವಾಗಲಿದೆ ಎಂದು ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎರಿಕ್ ಆರ್ ಕಾಂಡೆಲ್ ಹೇಳಿದರು.
"ಈ ಸಂಶೋಧನೆಯು ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕುಂದುವಿಕೆಯ ಬಗ್ಗೆ ಮಾತ್ರವಲ್ಲ, ಮೆದುಳಿನಲ್ಲಿರುವ ಪ್ರಮುಖ ಪ್ರೋಟೀನ್ ಗಳೊಡನೆ ಮೂಳೆಗೆ ಸಂಬಂಧಿಸಿದ ನೈಸರ್ಗಿಕ ಹಾರ್ಮೋನು ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದನ್ನು ಸಹ ವಿವರಿಸಿದೆ."
ಹಲವು ವರ್ಷಗಳಿಂದ ಈ ರೀತಿಯ ನೆನಪಿನ ಶಕ್ತಿ ಕುಗ್ಗುವುದನ್ನು ಔಷಧವಿರದ ಖಾಯಿಲೆ ಎಂದು ಗುರುತಿಸಲಾಗಿತ್ತು. ಆದರೆ ಈಗ ವಿಜ್ಞಾನಿಗಳು ಆಲ್ಝೈಮರ್ನ ರೋಗವು ಹಿಪೋಕಂಪಾಸ್ ನಲ್ಲಿನ ಕೆಳಭಾಗದಲ್ಲಿರುವ ಎಂಟಾರ್ಹಿನಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಮೆದುಳಿನ ಭಾಗದಲ್ಲಿ ಪ್ರಾರಂಭವಾಗುತ್ತದೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಮತ್ತೊಂದೆಡೆ, ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕುಗ್ಗುವಿಕೆಯು ಸಹ ಹಿಪೋಕಂಪಾಸ್ ನಿಂದಲೇ ಪ್ರಾರಂಬವಾಗುತ್ತದೆ.ಹಿಪೋಕಂಪಾಸ್ ನ ಡೆಂಟೇಟ್ ಗೈರಸ್ ಎಂಬ ಭಾಗದಲ್ಲಿ ಇದು ಮೊದಲಿಗೆ ಕಾಣಿಸಿಕೊಳ್ಳುತ್ತದೆ.
ಸಂಶೋಧಕರ ತಂಡವು 'RbAp48 protein' ಎಂದು ಗುರುತಿಸಲಾಗಿರುವ ಪ್ರೋಟೀನ್ ನಲ್ಲಿ ಉಂಟಾಗುವ ಕೊರತೆಯು ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕುಗ್ಗುವಿಕೆಗೆ ಬಹು ಮುಖ್ಯ ಕಾರಣ ಎಂದು ಹೇಳಿದೆ.ಇದು ಆಲ್ಝೈಮರ್ಸ್ ಅಲ್ಲ. ಇಂತಹಾ ಪ್ರೋಟೀನ್ ಪ್ರಮಾಣದ ಕುಗ್ಗುವಿಕೆ ಮಾನವ ಹಾಗೂ ಇಲಿಗಳಲ್ಲಿ ಸಮಾನ ಪ್ರಮಾಣದಲ್ಲಿ ಕಂಡುಬಂದಿದೆ.
RbAp48 ಪ್ರೋಟೀನ್ ಎರಡು ರೀತಿಯ ಅಭಿವ್ಯಕ್ತಿಯನ್ನು ನಿಯಂತ್ರಣದಲ್ಲಿಡಲಿದೆ ಎನ್ನುವುದನ್ನು ಸಂಶೋಧಕರ ತಂಡ ನಡೆಸಿದ್ದ ಸರಣಿ ಸಂಶೋಧನೆಯಿಂದ ತಿಳಿದುಕೊಂಡಿದೆ. ಇದು ಪ್ರಾಣಿಗಳಲ್ಲಿ ಯಾವ ಪರಿಣಾಮ ಉಂಟು ಮಾಡುವುದಿಲ್ಲ.ಆದರೆ ಮಾನವರಿಗೆ ನೆನಪಿನ ಶಕ್ತಿ ಪುನಶ್ಚೇತನಕ್ಕೆ ಇದರ ಅವಶ್ಯಕತೆ ಇದೆ.ಜನರಲ್ಲಿ ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕುಗ್ಗುವಿಕೆ ತಡೆಯಲು ವ್ಯಾಯಾಮವು ಅತ್ಯುತ್ತಮ ಮಾರ್ಗ ಎಂದು ಈ ಸಂಶೋಧನೆ ಸಾಬೀತು ಪಡಿಸಿದೆ.
ಇಲಿಗಳ ಮೇಲಿನ ಪ್ರಯೋಗದಿಂದ ವಾಕಿಂಗ್ ನಂತಹಾ ಮದ್ಯಮ ಗತಿಯ ವ್ಯಾಯಾಮದಿಂದ ದೇಹದಲ್ಲಿ ಮೂಳೆಗೆ ಸಂಬಂಧಿಸಿದ ಹಾರ್ಮೋನ್ ಉತ್ಪತ್ತಿ ಅಧಿಕವಾಗಲಿದೆ ಎಂದು ವರದಿಯಲ್ಲಿ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos