ಜೀವನಶೈಲಿ

ಈ ರಿಂಗ್ ಹಾಕೊಂಡ್ರೆ 1 ವರ್ಷ ಮಕ್ಕಳಾಗಲ್ಲ!

Srinivas Rao BV
ಬೇಡವಾದ ಗರ್ಭಧಾರಣೆ ತಡೆಗಟ್ಟುವುದಕ್ಕೆ ಕಾಲಾನುಕ್ರಮದಲ್ಲಿ ಹತ್ತು ಹಲವು ಸುಧಾರಿತ ಕ್ರಮಗಳನ್ನು ಕಂಡುಹಿಡಿಯಲಾಗಿದ್ದು, ಈಗ ಸಂಶೋಧಕರು ಮತ್ತೊಂದು ಸುಧಾರಿತ ಕ್ರಮವನ್ನು ಕಂಡು ಹಿಡಿದಿದ್ದಾರೆ. 
ಗರ್ಭಧಾರಣೆ ತಡೆಗಟ್ಟುವುದಕ್ಕಾಗಿಯೇ ರಿಂಗ್ ನ್ನು ತಯಾರಿಸಲಾಗಿದ್ದು, ಇದನ್ನು ಧರಿಸಿದರೆ 1 ವರ್ಷ ಗರ್ಭಧಾರಣೆಯನ್ನು ತಡೆಗಟ್ಟಬಹುದಾಗಿದೆ.  ಅನ್ನೋವೆರ ಎಂಬ ಗರ್ಭ ನಿರೋಧಕ ರಿಂಗ್ (vaginal ring)  ನ್ನು  1 ವರ್ಷಗಳ ಕಾಲ ಬಳಕೆ ಮಾಡಲು ಸಾಧ್ಯವಾಗುವಂತೆ ತಯಾರಿಸಲಾದೆ. 
ಗರ್ಭನಿರೋಧಕ ಔಷಧವನ್ನು ಬಿಡುಗಡೆ ಮಾಡುವ ರೀತಿಯಲ್ಲಿ ಈ ರಿಂಗ್ ನ್ನು ವಿನ್ಯಾಸಗೊಳಿಸಲಾಗಿದ್ದು, ಶೇ.2.98 ರಷ್ಟು ಮಾತ್ರ  ವೈಫಲ್ಯದ ಪ್ರಮಾಣ ಇದೆ ಎಂದು ಎಂಡೋಕ್ರೈನ್ ಸೊಸೈಟಿಯಲ್ಲಿ ನೀಡಲಾದ ಪ್ರಸ್ತುತಿ ವೇಳೆ ತಿಳಿಸಲಾಗಿದೆ. 
ಗರ್ಭಧಾರಣೆ ತಡೆಗಟ್ಟುವುದಕ್ಕೆ ತೆಗೆದುಕೊಳ್ಳುವ ಉಳಿದ ಕ್ರಮಗಳಿಗಿಂತ ಈ ಹೊಸ ಕ್ರಮ ಶೇ.97 ರಷ್ಟು ಯಶಸ್ವಿಯಾಗಿರಲಿದೆ ಎಂದು ಸಂಶೋಧಕ ಡೇವಿಡ್ ಎಫ್ ಆರ್ಚರ್ ಹೇಳಿದ್ದಾರೆ. ಗರ್ಭ ನಿರೋಧಕ ರಿಂಗ್ ಶೀಘ್ರವೇ ಮಾರುಕಟ್ಟೆಗೆ ಬರಲಿದೆ.
SCROLL FOR NEXT