ಲಾಸ್ ಏಂಜಲೀಸ್: ಮುಜುಗರ ಹಾಗೂ ಉತ್ಸಾಹವನ್ನು ವ್ಯಕ್ತಪಡಿಸುವುದಕ್ಕೆ ಸಾಮಾನ್ಯವಾಗಿ ಬಳಸುವ 2 ಶಬ್ದಗಳು 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ ಸಂಶೋಧನೆಯೊಂದು ಹೇಳಿದೆ.
ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬಳಕೆ ಮಾಡುವ ಓಹ್ ಮತ್ತು ಆಹ್... ಶಬ್ದಗಳು ಬರೊಬ್ಬರಿ 24 ರೀತಿಯ ಭಾವನೆಗಳನ್ನು ಸೂಚಿಸುತ್ತವೆ ಎಂಮ್ದು ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಂಶೋಧಕರು ಹೇಳಿದ್ದಾರೆ. ಈ ಶಬ್ದಗಳನ್ನು ಕೇಳಿದ 2,000 ಜನರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿರುವ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಂಶೋಧಕರು ನಾವು ಅಂದುಕೊಂಡಿದ್ದಕ್ಕಿಂತಲೂ ಆ ಎರಡು ಶಬ್ದಗಳು ಹಲವು ಸಂಗತಿಗಳನ್ನು ರವಾನಿಸುತ್ತವೆ ಎಂದು ಹೇಳಿದ್ದಾರೆ.
ಈ ಹಿಂದಿನ ಅಧ್ಯಯನದ ವರದಿಯಲ್ಲಿ ಈ ಎರಡು ಶಬ್ದಗಳನ್ನು ಉದ್ಘರಿಸುವುದರಿಂದ ಕೇವಲ 13 ರೀತಿಯ ಭಾವನೆಗಳಷ್ಟೆ ವ್ಯಕ್ತವಾಗುತ್ತವೆ ಎಂದು ಹೇಳಲಾಗಿತ್ತು. ಆದರೆ ಈಗ 24 ರೀತಿಯ ಭಾವನೆಗಳು ವ್ಯಕ್ತವಾಗುತ್ತವೆ ಎಂಬುದನ್ನು ವಾಕ್ ಸಂವಹನ ಸಂಶೋಧಕರು ಅಭಿವೃದ್ಧಿಪಡಿಸಿದ ಇಂಟರಾಕ್ಟೀವ್ ಆಡಿಯೋ ಮ್ಯಾಪ್ ನ ಮೂಲಕ ಕಂಡುಕೊಳ್ಳಲಾಗಿದೆ ಎಂದು ಅಮೆರಿಕಾದ ಮನಃಶಾಸ್ತ್ರ ಜರ್ನಲ್ ನಲ್ಲಿ ಪ್ರಕಟಗೊಂಡ ಮಾಹಿತಿ ನೀಡಿದೆ.