ಕಾಂಟ್ಯಾಕ್ಟ್ ಲೆನ್ಸ್‌ 
ಜೀವನಶೈಲಿ

ಕೊರೋನಾ ವೈರಸ್ ತಗ್ಗುವ ತನಕ ಕಾಂಟ್ಯಾಕ್ಟ್ ಲೆನ್ಸ್‌ ಬಳಕೆ ಬೇಡ: ಡಾ.ಭುಜಂಗ ಶೆಟ್ಟಿ

ಕೋವಿಡ್-೧೯ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ನೇತ್ರ ಹಾಗೂ ಆರೋಗ್ಯಸೇವಾ ತಜ್ಞ ಡಾ.ಕೆ.ಭುಜಂಗ ಶೆಟ್ಟಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವವರು ಸೋಂಕು ನಿವಾರಣೆಯಾಗುವ ತನಕ ಕನ್ನಡಕಗಳನ್ನು ಬಳಸುವುದು ಸೂಕ್ತ ಎಂದು ಸಲಹೆ  ನೀಡಿದ್ದಾರೆ.

ಬೆಂಗಳೂರು: ಕೋವಿಡ್-೧೯ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಖ್ಯಾತ ನೇತ್ರ ಹಾಗೂ ಆರೋಗ್ಯಸೇವಾ ತಜ್ಞ ಡಾ.ಕೆ.ಭುಜಂಗ ಶೆಟ್ಟಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವವರು ಸೋಂಕು ನಿವಾರಣೆಯಾಗುವ ತನಕ ಕನ್ನಡಕಗಳನ್ನು ಬಳಸುವುದು ಸೂಕ್ತ ಎಂದು ಸಲಹೆ  ನೀಡಿದ್ದಾರೆ.

ಕೊರೋನಾವೈರಸ್ ತಡೆಗೆ ಮುಖದ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ, ಆದರೆ ಈ ವೈರಸ್ ಕಣ್ಣುಗಳಿಂದಲೂ ದೇಹ ಪ್ರವೇಶಿಸುತ್ತದೆ. ಆದರೆ ಕನ್ನಡಕಗಳನ್ನು ಧರಿಸುವುದರಿಂದ ಈ ವೈರಸ್ ಹರಡುವುದನ್ನು ತಡೆಯಲು ಸಾಧ್ಯ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗ  ಶೆಟ್ಟಿ ಹೇಳುತ್ತಾರೆ.

ಜನರು ಕೊರೊನಾವೈರಸ್ ಸೋಂಕು ಬಾಯಿ ಮತ್ತು ಮೂಗಿನಿಂದ ದೇಹ ಪ್ರವೇಶಿಸಲಿದೆ. ಇದೇ ರೀತಿ ವೈರಸ್ ಕಣ್ಣುಗಳಿಂದಲೂ ಪ್ರವೇಶಿಸುವ ಸಾಧ್ಯತೆ ಇದೆ. ಒಂದು ದಿನಕ್ಕೆ ಮನುಷ್ಯರು ಅವರ ಮುಖ ಮತ್ತು ಕಣ್ಣುಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಕನಿಷ್ಠ ಹತ್ತಾರು ಬಾರಿ  ಸ್ಪರ್ಶಿಸುತ್ತಾರೆ. ಇನ್ನು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವವರು ಅವರ ಕಣ್ಣುಗಳು ಹಾಗೂ ಮುಖವನ್ನು ಆಗಾಗ್ಗೆ ಮುಟ್ಟಿಕೊಳ್ಳುತ್ತಾರೆ. ಇದರಿಂದ ಸೋಂಕಿನ ರಿಸ್ಕ್ ಹೆಚ್ಚಾಗುತ್ತದೆ. ಆದ್ದರಿಂದ ಲೆನ್ಸ್ ಧರಿಸಿರುವವರು ಪರಿಸ್ಥಿತಿ ಸುಧಾರಿಸುವವರೆಗೆ ಕನ್ನಡಕಗಳನ್ನು ಬಳಸುವುದು ಸೂಕ್ತ ಎಂದು  ಸಲಹೆ ಮಾಡಿದ್ದಾರೆ.

ಕನ್ನಡಕಗಳು ಕಣ್ಣುಗಳನ್ನು ಮಾಸ್ಕ್‌ಗಳಂತೆ ರಕ್ಷಿಸುತ್ತದೆ. ವೈರಸ್ ಹನಿಗಳು ನಿಮ್ಮ ಕಣ್ಣುಗಳ ಸಂಪರ್ಕಕ್ಕೆ ಬರದಂತೆ ತಡೆಯುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾವು ಹೆಚ್ಚುವರಿ ರಕ್ಷಣೆಗಾಗಿ ಮನೆಯಿಂದ ಹೊರ ಹೋಗುವಾಗ ಕನ್ನಡಕಗಳನ್ನು ಧರಿಸುವುದು ಸೂಕ್ತ ಎನ್ನುತ್ತಾರೆ ಡಾ.  ಭುಜಂಗಶೆಟ್ಟಿ. ಈ ವೈರಸ್‌ನಿಂದ ತೀವ್ರ ಬಾಧಿತವಾದ ಅಮೆರಿಕಾದಲ್ಲಿ ಅಲ್ಲಿನ ಅಕಾಡೆಮಿ ಆಫ್ ಆಪ್ತಲ್ಮಾಲಜಿಯ ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರು ಕನ್ನಡಕ ಧರಿಸುವಂತೆ ಶಿಫಾರಸು ಮಾಡಿದ್ದಾರೆ. ಕಾಂಟ್ಯಾಕ್ಟ್ ಲೆನ್ಸ್‌ಗಳು ಕಿರಿಕಿರಿ ಮತ್ತು ತುರಿಕೆ ಉಂಟು ಮಾಡಿ ಮುಖವನ್ನು ಮುಟ್ಟುವಂತೆ  ಮಾಡುತ್ತವೆ ಎಂದು ಹೇಳಿದ್ದಾರೆ.

ಚೆನ್ನಾಗಿ ಕಾಣಲು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸಬೇಕಿದ್ದರೆ ಅಂತಹವರು ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಬೇಕು ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು ಮತ್ತು ಮುಖ ಸ್ಪರ್ಶಿಸುವುದು, ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಬೇಕು ಎಂದಿದ್ದಾರೆ. ಕೊರೊನಾವೈರಸ್ ಸೋಂಕಿತ  ಪ್ರದೇಶಗಳಾದ ಬಾಗಿಲ ಹಿಡಿಕೆ, ಕೀಗಳು, ಮೇಜುಗಳು ಮತ್ತು ಹೊರಗಿನ ವಸ್ತುಗಳನ್ನು ಮುಟ್ಟಿದ ನಂತರ ತಮ್ಮ ಮುಖ ಸ್ಪರ್ಶಿಸಿದಾಗ ವೈರಾಣು ಮಾನವ ದೇಹ ಪ್ರವೇಶಿಸುತ್ತದೆ. ಕನ್ನಡಕಗಳು ಕಣ್ಣುಗಳನ್ನು ಗಾಳಿಯಲ್ಲಿ ಹರಡುತ್ತಿರುವ ಯಾವುದೇ ವೈರಸ್, ಅಣುಗಳಿಂದ ರಕ್ಷಿಸುತ್ತದೆ.  ಆರೋಗ್ಯ ಸೇವಾ ವೃತ್ತಿಪರರಿಗೆ ಮುಖ ಮುಚ್ಚುವ ಗಾಜುಗಳ ಬಳಕೆ ಕಡ್ಡಾಯವಾಗಿದೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT