ಸಾಂದರ್ಭಿಕ ಚಿತ್ರ 
ಜೀವನಶೈಲಿ

ಲಾಕ್ ಡೌನ್ ಎಫೆಕ್ಟ್: ಕಾಲರಾದಂತಹ ಬೇಸಿಗೆ ಕಾಯಿಲೆಗಳ ಸಂಖ್ಯೆಯಲ್ಲಿ ತೀವ್ರ ಕುಸಿತ!

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ಬೇಸಿಗೆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಲರಾ, ಟೈಫಾಯ್ಡು ನಂತಹ ಜ್ವರಗಳು, ಕಣ್ಣಿನ ತೊಂದರೆಗಳ ಸಂಖ್ಯೆಯಲ್ಲಿ ತೀವ್ರ ರೀತಿಯಲ್ಲಿ ಕುಸಿತವಾಗಿದೆ. 

ಬೆಂಗಳೂರು:ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ಬೇಸಿಗೆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಲರಾ, ಟೈಫಾಯ್ಡು ನಂತಹ ಜ್ವರಗಳು, ಕಣ್ಣಿನ ತೊಂದರೆಗಳ ಸಂಖ್ಯೆಯಲ್ಲಿ ತೀವ್ರ ರೀತಿಯಲ್ಲಿ ಕುಸಿತವಾಗಿದೆ. 
ಮನೆಯಲ್ಲಿಯೇ ಇರುವ ಜನರು, ಬೇಯಿಸಿದ ಶುಚಿ ರುಚಿಯಾದ ಆಹಾರವನ್ನು ಸೇವಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. 

ಅದೃಷ್ಟವಶಾತ್ ಎಂಬಂತೆ ಬೇಸಿಗೆ ಸಂಬಂಧಿತ ಬಹುತೇಕ ಕಾಯಿಲೆಗಳ ಸಂಖ್ಯೆ ಇಳಿಕೆಯಾಗಿದೆ. ಆಹಾರ ಮತ್ತು ನೀರಿನಿಂದ ಹರಡುತ್ತಿದ್ದ ಕಾಯಿಲೆಗಳ ಸಂಖ್ಯೆ ಇಳಿಕೆಯಾಗಿದೆ.ಲಾಕ್ ಡೌನ್ ಜಾರಿಯಲ್ಲಿದ್ದು, ಜನರು ಮನೆಯಲ್ಲಿಯೇ ಸಿದ್ಧಪಡಿಸಿದ  ಆಹಾರ ಸೇವಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ. ರೆಶು ಅಗರ್ ವಾಲ್ ಹೇಳುತ್ತಾರೆ.

ಮನೆಯಲ್ಲಿಯೇ ಬೇಯಿಸಿದ ಶುಚಿ ರುಚಿಯಾದ ಆಹಾರ ಸೇವನೆಯಿಂದ ಉದರ ಸೋಂಕು, ಪುಡ್ ಪಾಯಿಸನ್ ಪ್ರಕರಣಗಳ ಸಂಖ್ಯೆ ಕಂಡುಬರುತ್ತಿಲ್ಲ, ಚರ್ಮಕ್ಕೆ ಸಂಬಂಧಿತ ಆಲರ್ಜಿಗಳು ಉಂಟಾಗುತ್ತಿಲ್ಲ, ಬಹುತೇಕ ಜನರು ಮಾಂಸಾಹಾರಿ ತ್ಯಜಿಸಿ, ಕಡಿಮೆ ಎಣ್ಣೆ ಉಪಯೋಗಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಲಾಕ್ ಡೌನ್ ನಿಂದ 24 ಗಂಟೆಯೂ ಜನರು ಮನೆಯ ಒಳಗಡೆ ಇರುವುದರಿಂದ ಒತ್ತಡ, ಖಿನ್ನತೆ, ಆತಂಕದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಮಾತುಗಳು ಕೇಳಿದ್ದೇನೆ. ಅಂತಹವರು ಸಮತೋಲಿತ ಆಹಾರ ಸೇವಿಸಿ ಎಂದು ಸಲಹೆ ಮಾಡುವುದಾಗಿ ತಿಳಿಸಿದ್ದಾರೆ. 

ಲಾಕ್ ಡೌನ್ ನಿಂದ ಕೋವಿಡ್-19 ಸೋಂಕು ಹರಡುವುದು ಕಡಿಮೆಯಾಗಿದೆ, ಅಲ್ಲದೇ, ಕಾಲರಾ, ಟೈಪಾಡ್ ನಂತಹ ನೀರಿನಿಂದ ಹರಡುವ ಕಾಯಿಲೆಗಳನ್ನು ತಡೆಗಟ್ಟುತ್ತಿದೆ. ಉತ್ತಮ ಆಹಾರ ಸೇವನೆ ಹಾಗೂ ಶುಚಿಯಾದ ನೀರು ಸೇವೆನೆಯಂದ ಇಂತಹ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ ಎಂದು ಪೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ನಿರ್ದೇಶಕರಾದ ಡಾ. ಶೈಲಾ ಚಕ್ರವರ್ತಿ ಸಲಹೆ ನೀಡಿದ್ದಾರೆ. 

ಮಕ್ಕಳು ಮನೆಯಿಂದ ಹೊರಗೆ ಹೋಗಿ ಆಟವಾಡುತ್ತಿಲ್ಲ. ಇದರಿಂದಾಗಿ ಗಾಳಿ ಮೂಲಕ ಹರಡಬಲ್ಲ ಕಾಯಿಲೆಗಳು ಕಡಿಮೆಯಾಗಿವೆ. ಆದಾಗ್ಯೂ, ಮನೆಯಲ್ಲಿ ಇದ್ದು, ಜಂಕ್ ಪುಡ್ ಆಹಾರ ಸೇವನೆಯಿಂದ ಉದರ ಸೋಂಕಿನ ಸಮಸ್ಯೆ ಉಂಟಾಗಬಹುದು ಎಂದು ರೈನ್ ಬೊ ಮಕ್ಕಳ ಆಸ್ಪತ್ರೆಯ ಉಪಾಧ್ಯಕ್ಷ ನೀರಾಜ್ ಲಾಲ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ನಟ ದರ್ಶನ್‌ಗೆ ಕಂಟಕವಾಗ್ತಾರಾ ದೋಸ್ತಿಗಳು? ಕೋರ್ಟ್‌ನಲ್ಲಿ ಗಾಬರಿ ಬಿದ್ದ ಚಿಕ್ಕಣ್ಣ, ಯಶಸ್ ಸೂರ್ಯ ಹೇಳಿದ್ದೇನು?

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ