ಜೀವನಶೈಲಿ

ಉತ್ತಮ ಆರೋಗ್ಯಕ್ಕೆ ಸಾಮಾಜಿಕ ಬೆರೆಯುವಿಕೆಯೂ ಮುಖ್ಯ

Manjula VN

ಉತ್ತಮವಾಗಿ ಆರೋಗ್ಯವಾಗಿರಲು ಆಹಾರ ಸೇವನೆ, ಡಯಟ್, ಸೂಕ್ತ ನಿದ್ರೆ, ಒತ್ತಡ ನಿರ್ವಹಣೆ, ವ್ಯಾಯಾಮ, ಕ್ರೀಡೆಯಷ್ಟೇ ಮುಖ್ಯವಲ್ಲ. ಸಾಮಾಜಿಕವಾಗಿ ಒಗ್ಗೂಡುವಿಕೆ, ಬೆರಯುವಿಕೆ ಕೂಡ ಮುಖ್ಯವಾಗುತ್ತದೆ. 

ಸಾಮಾಜಿಕವಾಗಿ ಹೆಚ್ಚು ಸಂವಹನ ಹೊಂದಿರುವವರು ಹಾಗೂ ವ್ಯಕ್ತಿಗಳೊಂದಿಗೆ ಹೆಚ್ಚು ಬೆರೆಯುವವರ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತೀನಿತ್ಯ ಗೆಳೆಯರು ಹಾಗೂ ಸಂಬಂಧಿಕರು, ಇತರೆ ವ್ಯಕ್ತಿಗಳೊಂದಿಗೆ ಉತ್ತಮಾಗಿ ಸಂವಹನ ನಡೆಸುವುದರಿಂದ ಮಾನಸಿಕವಾಗಿಯೂ ಆರೋಗ್ಯ ಉತ್ತಮವಾಗಿರುತ್ತದೆ. 

ಸಾಮಾನ್ಯವಾಗಿ ವ್ಯಕ್ತಿಗೆ ಒಂಟಿತನ ಕಾಡಿದಾಗ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಕೇವಲ ಒಂಟಿತನದಿಂದಾಗಿಯೇ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆಂಬುದನ್ನು ನಾವು ಅಧ್ಯಯನಗಳಲ್ಲಿ ನೋಡಬಹುದು. ಧೂಮಪಾನ ಹಾಗೂ ಮದ್ಯಪಾನ ಮಾಡುವವರಿಗಿಂತಲೂ ಒಂಟಿತನ ಜೀವನ ನಡೆಸುವ ಜನರು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಒಂಟಿತನದಿಂದ ದೈಹಿಕ ಚಟುವಟಿಕೆಗಳಿಲ್ಲದೆ, ವ್ಯಕ್ತಿಯಲ್ಲಿ ಬೊಜ್ಜು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. 

ಉತ್ತಮ ಆರೋಗ್ಯ ಹೊಂದಲು ಮನುಷ್ಯ ಸಾಮಾಜಿಕವಾಗಿ ಹೆಚ್ಚು ಸಂವಹನವನ್ನು ಹೊಂದಬೇಕು. ಕ್ಲಬ್ ಗಳಿಗೆ ಸೇರ್ಪಡೆಗೊಳ್ಳುವುದು, ಗುಂಪು ಸಂವಹನದಲ್ಲಿ ಪಾಲ್ಗೊಳ್ಳುವುದು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗುವುದು, ಸಾಮಾಜಿಕ ಸಂವಹನಕ್ಕೆ ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೆ, ಹೊಸ ವಿಚಾರಗಳು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. 

SCROLL FOR NEXT