ಜೀವನಶೈಲಿ

ವರ್ಕ್ ಫ್ರಮ್ ಹೋಮ್: ದೇಹದ ತೂಕ ನಿರ್ವಹಣೆ ಬಗ್ಗೆಯೂ ಇರಲಿ ಗಮನ!

Shilpa D

ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಹೆಚ್ಚಿನ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ, ಇಂತಹ ಸಮಯದಲ್ಲಿ ದೇಹ ಚಟುವಟಿಕೆಯಿಂದಿರದ ಕಾರಣ ತೂಕ ಹೆಚ್ಚುವ ಸಾಧ್ಯತೆಯಿರುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಇಂತಹ ವೇಳೆ ಜನರು ಊಟ ಸ್ಕಿಪ್ ಮಾಡುವುದು ಮತ್ತು ಆಹಾರದ ಬಗ್ಗೆ ಅಸಡ್ಡೆ ತೋರುತ್ತಾರೆ. ಇದರಿಂದ ಮಾಂಸಖಂಡಗಳಲ್ಲಿ ಸೆಳೆತ ಮತ್ತು ಮೂಳೆಗಳ ತೂಕ ಕಡಿಮೆಯಾಗುವ ಸಾಧ್ಯತೆಯಿದೆ.

ಹೀಗಾಗಿ ಯಾರೋಬ್ಬರು ಬೆಳಗಿನ ಉಪಹಾರ ಸ್ಕಿಪ್ ಮಾಡಬಾರದು, ದೈನಂದಿನ ಆಹಾರ ನಿರಂತರವಾಗಿ ಸೇವಿಸುವುದರ ಜೊತೆಗೆ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಬೇಕು. ಹೆಚ್ಚಿನ ಚಟುವಟಿಕೆಯಿಂದ ಕೂಡಿರುವುದು ಸಹಾಯವಾಗುತ್ತದೆ, ಅಧಿಕ ಪ್ರಮಾಣದಲ್ಲಿ ನೀರಿನ ಸೇವನೆ ಮತ್ತು ಫೈಬರ್ ಅಂಶವಿರುವ ಆಹಾರ ಸೇವನೆ ಉತ್ತಮ.

ಕ್ಯಾಲರಿಯನ್ನು ಗಮನದಲ್ಲಿರಿಸಿಕೊಂಡರೇ ಇನ್ನೂ ಉತ್ತಮ, ನಿಮಗೆ ಅವುಗಳು ಬೇಕಾಗುತ್ತವೆ ಆದ್ದರಿಂದ ಅಸಮಾನವಾಗಿ ಕಡಿತಗೊಳಿಸಬೇಡಿ, ಬದಲಿಗೆ ಸಂಸ್ಕರಿಸಿದ ಕಾರ್ಬನ್ನ್ಸ್ ಅವಾಯ್ಡ್ ಮಾಡಿ.

ವರ್ಕ್ ಫ್ರಮ್ ಹೋಮ್ ಸಂದರ್ಭದಲ್ಲಿ ವಾಕಿಂಗ್ ಮಾಡುವುದು ಬಹಳ ಸಹಕಾರಿಯಾಗುತ್ತದೆ, ಜಾಗಿಂಗ್ ಮತ್ತು ರನ್ನಿಂಗ್ ಕೂಡ ಮತ್ತಷ್ಟು ಉತ್ತಮ, ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುತ್ತದೆ, ಪ್ರತಿದಿನ 20 ನಿಮಿಷ ಸೈಕ್ಲಿಂಗ್ ಮಾಡುವುದು ಬೆಸ್ಟ್.

ಪುಶ್ ಅಪ್ಸ್ ಮತ್ತು ಸಿಟ್ ಅಪ್ಸ್ ಮಾಡುವುದರಿಂದ ತೂಕ ಕಳೆದುಕೊಳ್ಳಲು ಸಹಾಯವಾಗುತ್ತದೆ, ಜೀರ್ಣ ಪ್ರಕ್ರಿಯೆಗೆ ಸ್ವಿಮ್ಮಿಂಗ್ ಮಾಡುವುದು ಉತ್ತಮ, ಇಡೀ ದೇಹವನ್ನು ಫಿಟ್ ಆಗಿಡಲು ಸೂರ್ಯ ನಮಸ್ಕಾರಕ್ಕಿಂತ ಉತ್ತಮ ವ್ಯಾಯಾಮ ಮತ್ತೊಂದಿಲ್ಲ.

SCROLL FOR NEXT