ಜೀವನಶೈಲಿ

ಬೊಜ್ಜು, ಅಧಿಕ ತೂಕ ಹೊಂದಿರುವ ಕೊರೋನಾ ಸೋಂಕಿತರಿಗೆ ಅಪಾಯ ಹೆಚ್ಚು: ಅಧ್ಯಯನ ವರದಿ

Sumana Upadhyaya

ನವದೆಹಲಿ: ದೇಹದ ಬೊಜ್ಜು, ಅತಿಯಾದ ತೂಕ ಹಲವು ರೋಗಗಳಿಗೆ ಎಡೆಮಾಡಿಕೊಡುತ್ತದೆ, ಅನೇಕ ಕಾಯಿಲೆಗಳು ಕೂಡ ಬರುತ್ತವೆ ಎಂದು ವೈದ್ಯರು, ತಜ್ಞರು ಹೇಳುತ್ತಾರೆ.

ಕೋವಿಡ್-19 ಸೋಂಕಿಗೂ, ದೇಹದ ಅತಿಯಾದ ಬೊಜ್ಜಿಗೂ ಸಂಬಂಧವಿದೆ, ಅತಿ ತೂಕ ಹೊಂದಿರುವವರಿಗೆ ಕೊರೋನಾ ಸೋಂಕು ಬಂದರೆ ಐಸಿಯುಗೆ ದಾಖಲಾಗುವ ಅಪಾಯ ಹೆಚ್ಚಿರುತ್ತದೆ ಎಂದು ಲ್ಯಾನ್ಸೆಟ್ ಡಯಾಬಿಟಿಸ್ ಅಂಡ್ ಎಂಡೊಕ್ರಿನಾಲಜಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು, ದೇಹದ ಮಾಸ್ ಇಂಡೆಕ್ಸ್ ನಲ್ಲಿ ನೋಡಿದಾಗ ಅಧಿಕ ತೂಕ ಹೊಂದಿರುವ ಕೊರೋನಾ ಸೋಂಕಿತರಿಗೆ ಅಪಾಯ ಹೆಚ್ಚು ಎಂದು ಇಂಗ್ಲೆಂಡ್ ನಲ್ಲಿ 6.9 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಮೇಲೆ ನಡೆಸಲಾದ ಅಧ್ಯಯನದಿಂದ ತಿಳಿದುಬಂದಿದೆ. ಕಳೆದ ವರ್ಷ ಕೊರೋನಾ ಮೊದಲನೇ ಅಲೆ ಬಂದು ಆಸ್ಪತ್ರೆಗೆ ದಾಖಲಾದ ಅಥವಾ ಮೃತಪಟ್ಟ 20 ಸಾವಿರಕ್ಕೂ ಅಧಿಕ ಜನರ ಮೇಲೆ ಸಹ ಪತ್ರಿಕೆ ಅಧ್ಯಯನ ಮಾಡಿದೆ.

ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಪ್ರತಿ ಚದರ ಮೀಟರ್ ಗೆ 23 ಕಿಲೋ ಗ್ರಾಂಗಿಂತ ಹೆಚ್ಚು ಇರುವವರಿಗೆ ಕೊರೋನಾ ಸೋಂಕು ಬಂದರೆ ಅಪಾಯ ಹೆಚ್ಚಿರುತ್ತದೆ. ಬಿಎಂಐ ಹೆಚ್ಚಿದ್ದರೆ ಕೊರೋನಾ ಸೋಂಕಿತರು ಐಸಿಯುನಲ್ಲಿ ದಾಖಲಾಗಬೇಕಾದ ಪರಿಸ್ಥಿತಿ ಶೇಕಡಾ 10ರಷ್ಟು ಹೆಚ್ಚಾಗುತ್ತದೆ. ಅಧಿಕ ತೂಕ ಹೊಂದಿರುವವರಿಗೆ ಎಷ್ಟು ಅಪಾಯವಿದೆಯೋ ಕಡಿಮೆ ತೂಕ ಹೊಂದಿರುವವರಿಗೆ ಕೂಡ ಅಪಾಯ ಹೆಚ್ಚು.

ಅಧಿಕ ತೂಕ ಹೊಂದಿರುವ 20ರಿಂದ 39 ವರ್ಷದೊಳಗಿನವರಿಗೆ ಅಪಾಯ ಹೆಚ್ಚು, 60 ವರ್ಷ ಕಳೆದ ನಂತರ ಅಪಾಯ ಕಡಿಮೆ ಎಂದು ಅಧ್ಯಯನ ಹೇಳುತ್ತದೆ.

SCROLL FOR NEXT