ಜೀವನಶೈಲಿ

ಚಳಿಗಾಲದಲ್ಲಿ ನಿಮ್ಮ ಚರ್ಮದ ಆರೈಕೆಗೆ ಅಲೊವೇರಾ ರಾಮಬಾಣ!

Manjula VN

ಬೆಂಗಳೂರು: ಚರ್ಮದ ಆರೈಕೆಯು ಎಲ್ಲಾ ಕಾಲದಲ್ಲಿಯೂ ಮುಖ್ಯ, ಅದರಲ್ಲೂ ಚಳಿಗಾಲದಲ್ಲಿ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ಮುಖ, ತುಟಿ ಒಡೆಯುವುದು, ಚರ್ಮವು ಕಾಂತಿ ಕಳೆದುಕೊಳ್ಳುತ್ತದೆ. ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳುತ್ತದೆ, ಶುಷ್ಕತೆಯನ್ನು ಸಹ ಉಂಟು ಮಾಡುತ್ತದೆ. ಆದ್ದರಿಂದ ಚರ್ಮಕ್ಕೆ ಸರಿಯಾದ ಪೋಷಣೆ ಮುಖ್ಯವಾಗುತ್ತದೆ. ಹಾಗಾಗಿ ಚರ್ಮವು ದೀರ್ಘಕಾಲದವರೆಗೆ ತೊಂದರೆಗೊಳಗಾಗದಮತೆ ನೋಡಿಕೊಳ್ಳಬೇಕಾದರೆ ನೈಸರ್ಗಿಕ ಪದಾರ್ಥಗಳನ್ನು ಯಥೇಚ್ಛವಾಗಿ ಬಳಸಬೇಕಾಗುತ್ತದೆ. ಇವುಗಳು ಚರ್ಮವನ್ನು ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ.

ಅರ್ಗಾನ್ ಎಣ್ಣೆ
ಅರ್ಗಾನ್ ಎಣ್ಣೆಯನ್ನು ಅರ್ಗಾನ್ ಕಾಳುಗಳಿಂದ ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಚರ್ಮ, ಉಗುರುಗಳು ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಲು ಇದನ್ನು ಬಳಸಲಾಗುತ್ತದೆ. ಚಳಿಗಾಲದಲ್ಲಿ ಬರುವ ಶುಷ್ಕತೆಯ ವಿರುದ್ಧ ಹೋರಾಡಲು, ಅರ್ಗಾನ್ ಎಣ್ಣೆಯು ಸಹಕಾರಿಯಾಗಿದೆ. ಇದು ಚರ್ಮದ ಮೇಲೆ ಮಾಂತ್ರಿಕ ಮದ್ದಿನಂತೆ ಕೆಲಸ ಮಾಡುತ್ತದೆ, ಅದನ್ನು ತೇವಾಂಶದಿಂದ ಮೃದುವಾಗಿರಿಸುತ್ತದೆ.

ಶಿಯಾ ಬಟರ್
ಶಿಯಾ ಮರದ ಬೀಜಗಳಿಂದ ಹೊರತೆಗೆಯಲಾದ ಕೊಬ್ಬನ್ನು ಬಳಸಿ ಶಿಯಾ ಬೆಣ್ಣೆಯನ್ನು ತಯಾರಿಸಲಾಗುತ್ತದೆ. ಶುಷ್ಕ, ಒಡೆದ ಚಳಿಗಾಲದ ಚರ್ಮವನ್ನು ಮೃದುಗೊಳಿಸಲು ಮತ್ತು ಶಮನಗೊಳಿಸಲು ಇದು ಅದ್ಭುತ ಘಟಕಾಂಶವಾಗಿದೆ. ಚರ್ಮವನ್ನು ಆಧ್ರ್ರಕಗೊಳಿಸುವುದರ ಜೊತೆಗೆ, ಶಿಯಾ ಬೆಣ್ಣೆಯು ಇದು ಎಲ್ಲಾ ಚರ್ಮದ ಪ್ರಕಾರಗಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ.

ಆಲಿವ್ ಎಣ್ಣೆ
ಆಲಿವ್ ಎಣ್ಣೆಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಅದು ಚರ್ಮದ ಕೋಶಗಳನ್ನು ಸಂಭಾವ್ಯ ಹಾನಿಯಿಂದ ತಡೆಯುತ್ತದೆ. ಇದರಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಸಮೃದ್ಧವಾಗಿದೆ, ಇದು ವಿವಿಧ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅಲೋವೆರಾ
ಅಲೋವೆರಾ ಎಲೆಗಳಲ್ಲಿರುವ ಜೆಲ್‍ನಲ್ಲಿ ವಿಟಮಿನ್ ಎ, ಸಿ, ಇ ಮತ್ತು ಬಿ 12 ಸಮೃದ್ಧವಾಗಿದೆ. ಚಳಿಗಾಲದಲ್ಲಿ ಇದನ್ನು ಪ್ರತಿದಿನ ತ್ವಚೆಯ ಮೇಲೆ ಹಚ್ಚುವುದರಿಂದ ಅದು ತೇವಾಂಶದಿಂದ ಕೂಡಿರುತ್ತದೆ, ಹೈಡ್ರೀಕರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಮೃದುವಾಗಿರುತ್ತದೆ. ಇದು ಬಿಸಿಲು ಅಥವಾ ದದ್ದುಗಳಿಂದ ಚರ್ಮವನ್ನು ರಕ್ಷಿಸುವ ಕೂಲಿಂಗ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

SCROLL FOR NEXT