ಸಾಂದರ್ಭಿಕ ಚಿತ್ರ 
ಜೀವನಶೈಲಿ

ವಿಡಿಯೋ ಗೇಮ್ಸ್ ಆಡುವುದರಿಂದ ಮಕ್ಕಳ ಮಿದುಳು, ಬುದ್ಧಿ ಶಕ್ತಿ ಚುರುಕು!

ವಿಡಿಯೋ ಗೇಮ್ಸ್ ಆಡುವುದರಿಂದ ಸಾಕಷ್ಟು ಅನುಕೂಲವಿರುವುದಾಗಿ ಸೋಮವಾರ ಜಮಾ ನೆಟ್ ವರ್ಕ್ ಓಪನ್ ನಲ್ಲಿ ಪ್ರಕಟವಾಗಿರುವ ಅಮೆರಿಕದ ಹೊಸ ಅಧ್ಯಯನವೊಂದು ತಿಳಿಸಿದೆ.

ವಾಷಿಂಗ್ಟನ್:  ಮಕ್ಕಳು ವಿಡಿಯೋ ಗೇಮ್ಸ್ ಆಡುವುದರಿಂದ ಹಾನಿಕಾರಕ ಪರಿಣಾಮ ಬೀರಲಿದ್ದು, ಮಾನಸಿಕ ಹಾಗೂ ಸಾಮಾಜಿಕ ತೊಂದರೆಗಳು ಎದುರಾಗಬಹುದೆಂದು ಪೋಷಕರು ಆಗಾಗ್ಗೆ ಆತಂಕಕ್ಕೊಳಗಾಗಿರುತ್ತಾರೆ. ಆದರೆ, ಈ ಗೇಮ್ಸ್ ಆಡುವುದರಿಂದ ಸಾಕಷ್ಟು ಅನುಕೂಲವಿರುವುದಾಗಿ ಸೋಮವಾರ ಜಮಾ ನೆಟ್ ವರ್ಕ್ ಓಪನ್ ನಲ್ಲಿ ಪ್ರಕಟವಾಗಿರುವ ಅಮೆರಿಕದ ಹೊಸ ಅಧ್ಯಯನವೊಂದು ತಿಳಿಸಿದೆ.

ನರತಜ್ಞನಾಗಿ ಈ ವಿಷಯ ಸ್ವಾಭಾವಿಕವಾಗಿ ನನ್ನ ಗಮನ ಸೆಳೆಯಿತು. ವಿಡಿಯೋ ಗೇಮ್ಸ್ ಆಡುವುದರಿಂದ ಆಗುವ ಮಾನಸಿಕ ಖಿನ್ನತೆ, ಒತ್ತಡ ಹೆಚ್ಚಳ ಕುರಿತು ಸಂಶೋಧನೆ ನಡೆಸಿದ್ದಾಗಿ ವಾರ್ಮೊಂಟ್ ವಿಶ್ವವಿದ್ಯಾಲಯದ ಮನೋಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾದರ್ ಚಾರಾನಿ ಹೇಳಿದ್ದಾರೆ.

ಈ ಹೊಸ ಸಂಶೋಧನೆಗಾಗಿ ಚಾರಾನಿ ಹಾಗೂ ಅವರು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ನೆರವಿನಿಂದ ಹದಿಹರೆಯದವರ ಮಿದುಳಿನ ಬೆಳವಣಿಗೆ ಕುರಿತ ಅಧ್ಯಯನದ ಮಾಹಿತಿ ಕುರಿತು ವಿಶ್ಲೇಷಿಸಿದ್ದಾರೆ. ಈ ಅಧ್ಯಯನಕ್ಕಾಗಿ ಮೂರು ಗಂಟೆ ಅಥವಾ ಇಡೀ ದಿನ ವಿಡಿಯೋ ಗೇಮ್ಸ್ ಆಡುವವರು ಮತ್ತು ವಿಡಿಯೋ ಗೇಮ್ಸ್ ಆಡದ ಸುಮಾರು 9 ಹಾಗೂ 10 ವರ್ಷದ ಮಕ್ಕಳನ್ನು ಎರಡು ಗುಂಪುಗಳನ್ನಾಗಿ ಪ್ರತ್ಯೇಕಿಸಿ ಸರ್ವೇ ನಡೆಸಲಾಗಿದ್ದು, ನೆನಪಿನ ಶಕ್ತಿ ಹಾಗೂ ಪ್ರಚೋದನೆಗಾಗಿ ಎರಡು ಗುಂಪುಗಳಿಗೆ ಎರಡು ಕೆಲಸ ನೀಡಲಾಗಿದೆ.

ಮೊದಲನೆಯದು ಎಡ ಅಥವಾ ಬಲಕ್ಕೆ ತೋರಿಸುವ ಬಾಣಗಳನ್ನು ನೋಡಿದರೆ ಕೂಡಲೇ ಅವುಗಳನ್ನು ಒತ್ತುವಂತೆ, ಒಂದು ವೇಳೆ ನಿಲ್ಲುವ ಸಂದೇಶ ಕಂಡರೆ ಏನನ್ನೂ ಒತ್ತಬೇಡಿ ಎಂದು ಅವರಿಗೆ ತಿಳಿಸಲಾಯಿತು.ಪ್ರ ಚೋದನೆಯನ್ನು ಎಷ್ಟು ಉತ್ತಮವಾಗಿ ನಿಯಂತ್ರಿಸಬಹುದು ಎಂಬುದನ್ನು ಅಳೆಯಲು ಈ ಕೆಲಸ ನೀಡಲಾಗಿತ್ತು. ಎರಡನೇ ಕೆಲಸದಲ್ಲಿ ಜನರ ಮುಖ ತೋರಿಸಲಾಗಿತ್ತು. ತದನಂತರ ಇನ್ನೊಂದು ಮುಖವನ್ನು ತೋರಿಸಿ, ಇದು ಅವರೇನಾ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಹೇಳಲಾಯಿತು. ಇದು ಅವರ ನೆನಪಿನ ಶಕ್ತಿ ಕಂಡುಹಿಡಿಯಲು ಮಾಡಲಾದ ಪರೀಕ್ಷೆಯಾಗಿತ್ತು.

ಈ ಎರಡೂ ಪರೀಕ್ಷೆಗಳಲ್ಲೂ ವಿಡಿಯೋ ಗೇಮ್ಸ್ ಆಡುವವರು ನಿರಂತರವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಂಐಆರ್ ಮಾಡಿ ಮಕ್ಕಳ ಮಿದುಳನ್ನು ಸ್ಕ್ಯಾನ್ ಮಾಡಿದಾಗ ವಿಡಿಯೋ ಗೇಮ್ಸ್ ಆಡುವವರ ಮಿದುಳು ಇತರಗಿಂತ ಹೆಚ್ಚು ಚಟುವಟಿಕೆಯಿಂದ ಕೂಡಿರುವುದು ಕಂಡುಬಂದಿದೆ. ಇದರಿಂದಾಗಿ ವಿಡಿಯೋ ಗೇಮ್ಸ್ ಆಡುವ ಮಕ್ಕಳ ಮಿದುಳು ಹೆಚ್ಚು ಚುರುಕಾಗಿರುತ್ತದೆ ಎಂಬ ತೀರ್ಮಾನಕ್ಕೆ ಲೇಖಕರು ಬಂದಿದ್ದಾರೆ. ಯು ಟ್ಯೂಬ್ ನಲ್ಲಿ ವಿಡಿಯೋ ಗೇಮ್ಸ್ ನೋಡುವುದಕ್ಕಿಂತ ಸ್ಕ್ರೀನ್ ಬಳಕೆ ಉತ್ತಮವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT