ಸಾಂದರ್ಭಿಕ ಚಿತ್ರ 
ಜೀವನಶೈಲಿ

'ಅಭ್ಯಂಗಂ ಶಿರಸಹಿತ ದೇಹ ತೈಲ ಮರ್ದನಮ್': ಅಭ್ಯಂಗ ಸ್ನಾನ ರೂಡಿಸಿಕೊಳ್ಳಿರಿ, ಆರೋಗ್ಯವಾಗಿರಿ!

ಆಯುರ್ವೇದ ವೈದ್ಯಕೀಯ ಭಾಗವಾದ ಅಷ್ಟಾಂಗ ಹೃದಯಂ ಪ್ರಕಾರ, ಅಭ್ಯಂಗವನ್ನು ಸತತವಾಗಿ ಅಭ್ಯಾಸ ಮಾಡಿದರೆ, ಅದರಿಂದ ಆಯಾಸ ನಿವಾರಣೆಯಾಗುತ್ತದೆ, ವಯಸ್ಸಾದ ನಂತರ ಎದುರಾಗುವ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

ಆರೋಗ್ಯಯುತ ಜೀವನ ನಡೆಸಬೇಕು ಎನ್ನುವುದು ಬಹುತೇಕ ಎಲ್ಲರ ಕನಸು, ಹೀಗಾಗಿ ಪ್ರಾಚೀನ ಕಾಲದ ಪದ್ಧತಿಯಂತೆ ತಲೆಯಿಂದ ಪಾದದವರೆಗೂ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ದೇಹದ ಜೊತೆಗೆ ಮನಸ್ಸೂ ಆರೋಗ್ಯವಾಗಿರುತ್ತದೆ. ಅಭ್ಯಂಗ ಸ್ನಾನ ಮಾಡುವುದು ಹೇಗೆ, ಯಾವ ಸಮಯದಲ್ಲಿ ಎಂಬ ಬಗ್ಗೆ ತಿಳಿಯೋಣ.

ಪ್ರತಿದಿನ ಎಣ್ಣೆ ಸ್ನಾನ ಮಾಡುವುದರಿಂದ ಹಲವು ಪ್ರಯೋಜನಗಳು ಉಂಟಾಗುತ್ತವೆ ಎನ್ನುತ್ತಾರೆ ಆಯುರ್ವೇದ ವೈದ್ಯರು. ಜ್ವರ, ಮೂಗು ಸೋರುವಿಕೆ ಮತ್ತು ಅಜೀರ್ಣ, ಕಫ ಮುಂತಾದ ಅಸ್ವಸ್ಥತೆಗಳಿಂದ ಬಳಲುತ್ತಿರುವವರನ್ನು ಹೊರತು ಪಡಿಸಿ, ಉಳಿದವರು ಪ್ರತಿನಿತ್ಯ ಅಭ್ಯಂಗ ಸ್ನಾನ ಮಾಡಬಹುದಾಗಿದೆ.

ದೇಹದ ಬಲ ಹೆಚ್ಚಿಸಲು ಹಾಗೂ ಮೂಳೆಗಳನ್ನು ಬಲವರ್ಧಿಸಲು ಎಣ್ಣೆಸ್ನಾನ ಸಹಾಯ ಮಾಡಲಿದೆ. ಎಣ್ಣೆ ಸ್ನಾನದಿಂದ ರಕ್ತ ಪರಿಚಲನೆ ಹೆಚ್ಚಿ ಉತ್ತಮ ನಿದ್ರೆ ಬರುತ್ತದೆ. ಜೊತೆಗೆ ಚರ್ಮದ ಆರೋಗ್ಯವು ಹೆಚ್ಚುತ್ತದೆ, ವೈದ್ಯರ ಸೂಕ್ತ ಸಲಹೆಗಳೊಂದಿಗೆ ಅಭ್ಯಂಗ ಸ್ನಾನ ಮಾಡುವುದು ಉತ್ತಮವಾಗಿದೆ.

'ಅಭ್ಯಂಗಂ ಆಚರೇತ್ ನಿತ್ಯಂ ಸ ಜರಾಶ್ರಮವಾತಾಃ ದೃಷ್ಟಿಪ್ರಸಾದ್ ಪುಷ್ತಾಯುಸ್ವಪ್ನಸುತ್ವಕ್ತದಾರ್ಯಕೃತ್'

ಆಯುರ್ವೇದ ವೈದ್ಯಕೀಯ ಭಾಗವಾದ ಅಷ್ಟಾಂಗ ಹೃದಯಂ ಪ್ರಕಾರ, ಅಭ್ಯಂಗವನ್ನು ಸತತವಾಗಿ ಅಭ್ಯಾಸ ಮಾಡಿದರೆ, ಅದರಿಂದ ಆಯಾಸ ನಿವಾರಣೆಯಾಗುತ್ತದೆ, ವಯಸ್ಸಾದ ನಂತರ ಎದುರಾಗುವ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

ಮೂಗಿನಿಂದ ನೀರಿನಂಶದ ಸ್ರವಿಸುವಿಕೆ ಅಥವಾ ಅತಿಯಾದ ಸೀನುವಿಕೆಗೆ ಚಿಕಿತ್ಸೆ ನೀಡಲು ಇದು ವಿಶೇಷವಾಗಿ ಸಹಾಯಕವಾಗಿದೆ.

ಧ್ವನಿಯಲ್ಲಿನ ಬದಲಾವಣೆಗಳು ಮತ್ತು ಗಂಟಲಿನ ಶುಷ್ಕತೆ ಕೂಡ ವಾಟಿಕಾ ಪ್ರತಿಶಯ ಅಸ್ವಸ್ಥತೆಗಳ ಸಾಮಾನ್ಯ ಲಕ್ಷಣಗಳಾಗಿವೆ. ಅದರ ಜೊತೆಗೆ, ಅಭ್ಯಂಗವು ಚರ್ಮವನ್ನು ಸುಧಾರಿಸುತ್ತದೆ ಮತ್ತು ಸ್ನಾಯುವಿನ ಬಲವನ್ನು ಸುಧಾರಿಸುತ್ತದೆ.

ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಅಂದರೆ ಉಗುರು ಬಿಸಿ ಎಣ್ಣೆಯನ್ನು ಪೂರ್ತಿ ದೇಹಕ್ಕೆ ಹಚ್ಚಬೇಕು. ಮೊಣಕಾಲು, ಕುತ್ತಿಗೆ, ಸೊಂಟ ಮತ್ತು ಬೆನ್ನಿನ ಕೆಳಭಾಗದಂತಹ ಕೀಲುಗಳು ಸವೆತಕ್ಕೆ ಇದು ಪರಿಣಾಮಕಾರಿಯಾಗಿದೆ. ಎಣ್ಣೆ ಹಚ್ಚಿದ ನಂತರ  ಸಂಪೂರ್ಣವಾಗಿ ಮಸಾಜ್ ಮಾಡಬೇಕು. ವೃತ್ತಾಕಾರವಾಗಿ ಮಸಾಜ್ ಮಾಡುವುದು ಹೆಚ್ಚು ಪರಿಣಾಮಕಾರಿ.

ಇನ್ನೂ ನುರಿತ ತಜ್ಞರಿಂದ ಎಣ್ಣೆ ಮಸಾಜ್ ಮಾಡಿಸಿಕೊಳ್ಳುವುದರಿಂದ ದೇಹದ ಚೈತನ್ಯ ಶಕ್ತಿ ಹೆಚ್ಚುತ್ತದೆ. ಇಲ್ಲದಿದ್ದರೆ ನಿಮ್ಮ ದೇಹಕ್ಕೆ ನೀವೇ ಸ್ವತಃ ಮಸಾಜ್ ಮಾಡಿಕೊಳ್ಳಬಹುಗಾಗಿದೆ.

ಆಯುರ್ವೇದ ತೈಲ ಬಳಸಿ ತಲೆ, ಕುತ್ತಿಗೆ ಮತ್ತು ಭುಜಗಳಿಗೆ ಮಸಾಜ್ ಮಾಡಬಹುದಾಗಿದೆ, ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಲು ಹಲವರು ಔಷಧೀಯ ತೈಲಗಳನ್ನು ಬಳಸುತ್ತಾರೆ.

ಉದಾಹರಣೆಗೆ, ಕೊಟ್ಟಂಚುಕ್ಕತಿ ತೈಲಂ (ಊತಕ್ಕೆ ಚಿಕಿತ್ಸೆ ನೀಡಲು), ಸಹಚರತಿ (ನರಸಂಬಂಧಿ ಸಮಸ್ಯೆಗಳಿಗೆ), ಕೇತಕಿಮೂಲತಿ (ಮೂಳೆ ಕ್ಷೀಣತೆಯ ಸಂದರ್ಭಗಳಲ್ಲಿ), ಮುರಿವೆನ್ನ (ತೀವ್ರವಾದ ಗಾಯಗಳ ಸಂದರ್ಭಗಳಲ್ಲಿ ಬಳಸುವ ಉರಿಯೂತದ ಗುಣಲಕ್ಷಣಗಳು) ಮತ್ತು ಬಾಲ ತೈಲಂ (ಸ್ನಾಯು ಮತ್ತು ಕೀಲುಗಳ ನೋವು ಕಡಿಮೆ ಮಾಡಲು) ಅನ್ನು ಬಳಸುತ್ತಾರೆ.

ದೇಹದ ಮಸಾಜ್‌ಗೆ ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ಸಹ ಬಳಸಬಹುದು. ಸಾಮಾನ್ಯವಾಗಿ ಎಣ್ಣೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಮಸಾಜ್ ಮಾಡಿದರೆ ಸಾಕು. 15 ರಿಂದ 45 ನಿಮಿಷಗಳ ನಂತರ ಸ್ನಾನ ಮಾಡಿ. ಇದಕ್ಕೆ ಉತ್ತಮ ಸಮಯವೆಂದರೆ ಮುಂಜಾನೆ ಅಥವಾ ಸೂರ್ಯಾಸ್ತದ ಮೊದಲು. ಅಭ್ಯಂಗ ಸ್ನಾನದ ಉಪಯೋಗಗಳು  ಅಪರಿಮಿತವಾಗಿವೆ. ಈ ಸರಳ ಆಚರಣೆಯನ್ನು ನಾವು ಹೆಚ್ಚು ಬಳಸಿಕೊಳ್ಳೋಣ, ಆರೋಗ್ಯದಿಂದ ಇರೋಣ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT